ತಾಳಿಕೋಟಿ

ಕ್ರೀಡಾಮನೋಭಾವ ಬೆಳೆಸಿಕೊಳ್ಳಿ: ಡಾ. ಪ್ರಭುಗೌಡ

ಕ್ರೀಡಾಮನೋಭಾವ ಬೆಳೆಸಿಕೊಳ್ಳಿ: ಡಾ. ಪ್ರಭುಗೌಡ

ತಾಳಿಕೋಟಿ: ಕ್ರೀಡೆಗಳಲ್ಲಿ ಸೋಲು-ಗೆಲುವು ಸಾಮಾನ್ಯ. ಗೆದ್ದಾಗ ಬೀಗದೆ, ಸೋತಾಗ ಹತಾಶರಾಗದೆ ನಿಂತರವಾಗಿ ಕ್ರೀಡೆಗಳಲ್ಲಿ ಭಾಗವಹಿಸಿ ಒಳ್ಳೆಯ ಕ್ರೀಡಾಮನೋಭಾವ ಬೆಳಸಿಕೊಳ್ಳುವ ಅಗತ್ಯವಿದೆ ಎಂದು ನಾಡಿನ ಖ್ಯಾತ ನೇತ್ರತಜ್ಞ ಡಾ. ಪ್ರಭುಗೌಡ ಲಿಂಗದಳ್ಳಿ (ಚಬನೂರ) ತಿಳಿಸಿದರು. 

ಕಲಕೇರಿ ಗ್ರಾಮದ ಎಂಪಿಎಸ್ ಶಾಲಾ ಆವರಣದಲ್ಲಿ ಜಿಪಂ ವಿಜಯಪುರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಸಿಂದಗಿ ಇವರ ಆಶ್ರಯದಲ್ಲಿ ಹಮ್ಮಿಕೊಂಡ ಕಲಕೇರಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಸಾನಿದ್ಯ ವಹಿಸಿ ಮಾತನಾಡಿದ ವಿ.ಕೆ. ಜಾಲಹಳ್ಳಿ ಮಠ ಅವರು ಕ್ರೀಡೆ ದೈಹಿಕ ಹಾಗೂ ಮಾನಸಿಕವಾಗಿ  ಸದೃಢಗೊಳ್ಳಲು ಪ್ರೇರಕಶಕ್ತಿಯಾಗಿದೆ. ನಿರ್ಣಾಯಕರ ನಿರ್ಣಯ ಗೌರವಿಸಿ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಎಚ್‌.ಎಂ. ಹರನಾಳ, ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯದ ಆಯ್‌.ಎಸ್‌. ಟಕ್ಕಿ, ದೈಹಿಕ ಶಿಕ್ಷಣಾಧಿಕಾರಿ ಕಾರ್ಯಾಲಯ ಸಿಂದಗಿಯ ಸುರೇಶ ಕೆರಗೊಂಡ, ಡಾ. ಎಂ.ಎಲ್‌. ವಡ್ಡರ, ಕಲಕೇರಿ ಗ್ರಾಪಂ ಅಧ್ಯಕ್ಷೆ ಎಂ.ಆರ್‌. ಹೊನ್ನಳ್ಳಿ, ಉಪಾಧ್ಯೆಕ್ಷೆ ಕಸ್ತೂರಿಬಾಯಿ ಬಡಿಗೇರ, ಎಸ್‌ಡಿಎಮ್‌ಸಿ ಅಧ್ಯಕ್ಷ ಪರಶುರಾಮ ವಡ್ಡರ, ಮುನ್ನಾ ಸಿರಸಗಿ, ಕಲಕೇರಿ ಸಿಆರ್‌ಪಿ ಎಸ್‌.ಎಲ್‌. ನಾಯ್ಕೋಡಿ, ಮುಖ್ಯ ಗುರುಗಳಾದ ಬಿ.ಎಸ್‌. ಬಗಲಿ, ವಾಯ್‌.ಆರ್‌. ಸಿರಸಗಿ, ಮೈನು ಕಲಕೇರಿ, ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ