ತಾಳಿಕೋಟಿ

ಬೆಳೆ ವಿಮೆ ಬಿಡುಗಡೆಗೊಳಿಸಿ ಅಧಿಕಾರಿಗಳಿಂದ ರೈತರಿಗೆ ಅನ್ಯಾಯ

ಬೆಳೆ ವಿಮೆ ಬಿಡುಗಡೆಗೊಳಿಸಿ ಅಧಿಕಾರಿಗಳಿಂದ ರೈತರಿಗೆ ಅನ್ಯಾಯ

ತಾಳಿಕೋಟೆ 07: ತಾಲೂಕಿನ ಭಂಟನೂರ ಹಾಗೂ ಕೊಡಗಾನೂರ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಗಳ ರೈತರಿಗೆ ಅತಿವೃಷ್ಟಿಯಿಂದ ಬೆಳೆ ನಾಶವಾದರೂ ಸಹಿತ ಬೆಳೆ ವಿಮೆ ಹಣ ಜಮಾವಣೆಯಾಗದಿರುವದನ್ನು ಖಂಡಿಸಿ ಸಾವಿರಾರು ರೈತರಿಂದ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಭಂಟನೂರ ಹಾಗೂ ಕೊಡಗಾನೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 2021-22 ನೇ ಸಾಲಿನಲ್ಲಿ ಮುಂಗಾರು ಬೆಳೆಯಾದ ತೊಗರಿ ಬೆಳೆಯನ್ನು ಉತ್ತಮ ಇಳುವರಿ ನೀರಿಕ್ಷೆಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿತ್ತು. ಬೆಳೆಯು ಸಹ ಸಮರ್ಪಕವಾಗಿ ಬೆಳೆಲು ಆರಂಭಿಸಿತ್ತು. ಆದರೆ ಹೂವು ಕಾಯಿ ಬಿಡುವ ಸಂದರ್ಭದಲ್ಲಿ ಸುರಿದ ಭಾರಿ ಮಳೆ ಹಾಗೂ ನಿರಂತರವಾಗಿ ಮಂಜು ಆವರಿಸಿದ್ದರಿಂದ ತೊಗರಿ ಬೆಳೆ ಹೂವು ಕಾಯಿ ಸರಿಯಾಗಿ ಬಿಟ್ಟಿಲ್ಲ. ಇದರಿಂದ ಸರಿಯಾಗಿ ಬೆಳೆ ಬಾರದೇ ರೈತರಿಗೆ ನಷ್ಠವಾಗಿದೆ. ಎಕರೆಗೆ 8 ರಿಂದ 10 ಕ್ವಿಂಟಾಲ ಬೆಳೆ ಬೆಳೆಯಬೇಕಾದ ತಗರಿ ಪ್ರಸಕ್ತ ಸಾಲಿನಲ್ಲಿ ಕೇವಲ 1 ಕ್ಷಿಂಟಾಲ ಬೆಳೆ ಬೆಳೆದಿದೆ. ಇದರಿಂದ ರೈತರು ಸಂಕಷ್ಟದಲ್ಲಿದ್ದು ಸಾಲದ ಸುಳಿಗೆ ಸಿಲುಕಿದ್ದಾರೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ತೊಂದರೆಗೆ ಸಿಲುಕಬಾರದು ಎನ್ನುವ ಉದ್ದೇಶದಿಂದ ಷ್ಟದ ಫಸಲ ಭಿಮಾ ಯೋಜನೆಯಲ್ಲಿ ಸಾವಿರಾರು ರೈತರು ವಿಮಾ ಕಂತು ತುಂಬಿದ್ದಾರೆ. ಅತಿವೃಷ್ಟಿಯಿಂದ ಬೆಳೆ ಹಾಳಾಗಿದ್ದರು ಸಹಿತ ವಿಮಾ ಕಂಪನಿಯವರು ಬೆಳೆ ಹಾಳಾಗಿಲ್ಲ ಎಂದು ದುರುದ್ದೇಶದಿಂದ ವರದಿ ಕಳಿಸಿದ್ದಾರೆ. ಒಂದು ಕಡೆ ರೈತರು ಅತಿವೃಷ್ಟಿಯಿಂದ ಹಾಳಾಗಿ ನಷ್ಟ ಅನುಭವಿಸಿದ್ದಾರೆ. ಇನ್ನೊಂದು ಕಡೆಯಲ್ಲಿ ಬೆಳೆ ವಿಮೆ ಬಂದಿರುವದಿಲ್ಲ. ಇದರಿಂದ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಸಾವನ್ನು ಕಂಡುಕೊಳ್ಳುವ ಸ್ಥಿತಿ ನಿಮರ್ಾಣವಾಗಿದೆ. ಈಗಾಗಲೇ ಹಲವು ಗ್ರಾಮಗಳ ರೈತರು ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ನಡೆಯುತ್ತಿವೆ. ರೈತರ ನೆರವಿಗೆ ಬರಬೇಕಾದ ವಿಮಾ ಕಂಪನಿಗಳು ರೈತರೊಂದಿಗೆ ಚಲ್ಲಾಟವಾಡುತ್ತಿವೆ. ಆದ್ದರಿಂದ ಕೂಡಲೇ ಅಧಿಕಾರಿಗಳು, ಸರಕಾರ ಮಧ್ಯಪ್ರವೇಶ ಮಾಡಿ ರೈತರಿಗೆ ಬೆಳೆ ವಿಮೆ ಜಮೆ ಮಾಡಸಬೇಕು. ಇಲ್ಲದಿದ್ದರೆ ಉಗ್ರವಾದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಮನವಿಯಲ್ಲಿ ಎಚ್ಚರಿಸಿದ್ದಾರೆ. ಪಟ್ಟಣದ ಬಸವೇಶ್ವರ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯು ಬಸ್ ನಿಲ್ದಾಣ ಮೂಲಕ ಹಾಯ್ದು ಪುರಸಭೆಗೆ ಆಗಮಿಸಿ ಮನವಿಯನ್ನು ಸಲ್ಲಿಸಿದರು. ಉಪತಹಶೀಲ್ದಾರ ಜೈನಾಪೂರ ಮನವಿಯನ್ನು ಸ್ವಿಕರಿಸಿದರು.

ಈ ಸಂದರ್ಭದಲ್ಲಿ ರೈತರಾದ ರವಿ ದೇಶಮುಖ, ಸಂಗನಗೌಡ ಹೆಗರೆಡ್ಡಿ, ಶಂಕ್ರಗೌಡ ದೇಸಾಯಿ, ವಿಶ್ವನಾಥರೆಡ್ಡಿ ಪಾಟೀಲ, ಮಲಕನಗೌಡ ಪಾಟೀಲ, ಪ್ರಭುಗೌಡ ಪಾಟೀಲ, ಸಂಗನಗೌಡ ಪಾಟೀಲ, ಡಾ.ಬಲವಂತ್ರಾಯ ನಡಹಳ್ಳಿ, ಶಿವರೆಡ್ಡಿ ಐನಾಪೂರ, ರಾಮನಗೌಡ ಬಿರಾದಾರ, ಮಲ್ಲನಗೌಡ ಯಾಳಗಿ, ಸುರೇಶ ಇಂಗಳಗೇರಿ, ಶರಣಗೌಡ ಪದರೆಡ್ಡಿ, ಶಿವನಗೌಡ ಪಾಟೀಲ, ಅರುಣಕುಮಾರ ಬಿರಾದಾರ, ಭಿಮನಗೌಡ ಇಂಗಳೇರಿ ಸೇರಿದಂತೆ ನೂರಾರು ರೈತರು ಇದ್ದರು.


ಸುದ್ದಿ ಓದಿ