ಹಗರಿಬೊಮ್ಮನಹಳ್ಳಿ

ಬೆಳೆ ಸಮೀಕ್ಷೆ ತರಬೇತಿ ಪ್ರತ್ಯಾಕ್ಷಿಕೆ

ಬೆಳೆ ಸಮೀಕ್ಷೆ ತರಬೇತಿ ಪ್ರತ್ಯಾಕ್ಷಿಕೆ

ಹಗರಿಬೊಮ್ಮನಹಳ್ಳಿ 16 : ಹಗರಿಬೊಮ್ಮನಹಳ್ಳಿ ಹೊಬಳಿಯ ಆನೆಕಲ್ಲು ಗ್ರಾಮದ ಬಳಿಯ ರೈತರ ಹೊಲದಲ್ಲಿ ಕೃಷಿ ಇಲಾಖೆಯಿಂದ ಬೆಳೆ ಸಮೀಕ್ಷೆ ಅ್ಯಪ್ ತರಬೇತಿಯ ಪ್ರತ್ಯಾಕ್ಷಿಕೆಯನ್ನು ಮಾಡಲಾಯಿತು. 

ಈ ಸಂಧರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಡಿ.ಎಂ.ಜೀವನ್‌ಸಾಬ್ ಮಾತನಾಡಿ ಪ್ರಸಕ್ತ 2021-22ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಪ್ರಾರಂಭವಾಗಿದ್ದು ರೈತರು ತಮ್ಮ ಹೊಲದಲ್ಲಿನ ಬೆಳೆಗಳನ್ನು ತಾವೇ ಸಮೀಕ್ಷೆ ಮಾಡಿಕೊಳ್ಳಬಹುದಾಗಿದೆ,ಸರ್ಕಾರಿ ಸೌಲಭ್ಯ ಸೇರಿದಂತೆ ಬೆಂಬಲ ಬೆಲೆ,ಬೆಳೆ ನಷ್ಟ, ಫಸಲ್ ಭೀಮ ಯೋಜನೆಗಳನ್ನು ಅ್ಯಪ್‌ಮೂಲಕ ಫಲಾನುಭವಿಗಳು ಸತಃ ತಾವೇ ಸರ್ವೆ ನಂಬರ್ ಸೇರಿದಂತೆ ಜಮೀನಿನಲ್ಲಿನ ಭಾವಚಿತ್ರಗಳನ್ನು ಅ್ಯಪ್‌ನ ಮೂಲಕ ಸಮೀಕ್ಷೆ ನಡೆಸಬಹುದಾಗಿದೆ ಎಂದು ತಿಳಿಸಿದರು. 

ಈ ಸಂಧರ್ಭದಲ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಹೆಚ್‌.ನಾಗರಾಜ್, ವ್ಯವಸ್ಥಾಪಕ ವಿ.ಕೆ.ಭೋಜಾನಾಯ್ಕ್‌, ಕೃಷಿ ಅಧಿಕಾರಿ ನಾಗಾರ್ಜುನ, ಗ್ರಾಮದ ರೈತರು ಇದ್ದರು. 


ಸುದ್ದಿ ಓದಿ