ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ
ಹೂವಿನ ಹಡಗಲಿ 14- ಹದಿನಾಲ್ಕು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ತಂದೆ ಹಾಗೂ ಇಬ್ಬರು ಯುವಕರು ಅತ್ಯಾಚಾರ ನಡೆದ ಘಟನೆ ತಾಲೂಕಿನ ಇಟ್ಟಿಗಿ ಪೊಲೀಸ್ ಠಾಣೆಯ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಭಾನುವಾರ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ದೌರ್ಜನ್ಯಕ್ಕೆ ಒಳಗಾಗಿರುವ ಬಾಲಕಿಯ ತಾಯಿ ತನ್ನ ಮಗಳನ್ನು ಮನೆ ಯಲ್ಲೇ ಬಿಟ್ಟು ಇಬ್ಬರು ಗಂಡು ಮಕ್ಕಳೊಂದಿಗೆ ಕೂಲಿ ಅರಸಿ ಕಾಫಿಸೀಮೆಗೆ ವಲಸೆ ಹೋಗಿದ್ದರು. ವರ್ಷದ ಹಿಂದೆ ಮನೆಯಲ್ಲಿ ಬಾಲಕಿ ಒಬ್ಬಳೇ ಇರುವಾಗ ಪಾನಮತ್ತನಾಗಿ ಬಂದ ತಂದೆ ಅತ್ಯಾಚಾರ ಎಸಗಿ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ.
ಬಾಲಕಿ ಕುರಿ ಮೇಯಿಸಲು ಹೋದಾಗ ಅದೇ ಗ್ರಾಮದ ಇಬ್ಬರು ಯುವಕರು ಅತ್ಯಾಚಾರ ಎಸಗಿ ಯಾರಿಗೆ ಹೇಳದಂತೆ ಹೆದರಿಸಿದ್ದರು.ಈಚೆಗೆ ಗ್ರಾಮಕ್ಕೆ ಬಂದ ತಾಯಿ ಎದುರು ಬಾಲಕಿ ತನ್ನ ಮೇಲೆ ನಡೆದ ದೌರ್ಜನ್ಯ ವಿವರಿಸಿದ್ದಾಳೆ. ಸಂತ್ರಸ್ತೆ ಬಾಲಕಿಯ ತಾಯಿ ಇಟ್ಟಿಗಿ ಠಾಣೆಯಲ್ಲಿ ತನ್ನ ಗಂಡನ ಮತ್ತು ಇಬ್ಬರ ಯುವಕರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.