ಕ್ರಿಕೆಟ್ ಪಂದ್ಯಾವಳಿ: ಟಿಬಿಟಿ ತಂಡ ವಿಜಯಶಾಲಿ
ಬಳ್ಳಾರಿ 05: ಅಭಯ ಫೌಂಡೇಶನ್ ಸಂಸ್ಥೆಯ ವತಿಯಿಂದ ನಡೆದಂತಹ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ನಗರದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮುಕ್ತಾಯಗೊಂಡಿತು.
ಈ ಪಂದ್ಯಾವಳಿಯಲ್ಲಿ ಟಿಬಿಟಿ ತಂಡವು ವಿಜಯಶಾಲಿಯಾಯಿತು. ಹಾಗೂ ರನ್ನರ ಆಪ್ ಆಗಿ ರಾಜ್ಮಹಲ್ ತಂಡ ಗೆದ್ದಿತ್ತು. ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಸೂರ್ಯಕಾಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಾಯಿಕೃಷ್ಣ, ಸ್ವಸ್ತಿಕ್ ಡೆವಲಪರ್ಸ್ನ ನರೇಶ್ ಚಿರಾನಿಯಾ, ಕನ್ಯಕಾ ಪರಮೇಶ್ವರಿ ದೇವಸ್ಥಾನ ಮ್ಯಾನೇಜಿಂಗ್ ಟ್ರಸ್ಟಿ ಗಾದೆಂ ಗೋಪಾಲಕೃಷ್ಣ, ಬಳ್ಳಾರಿ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರದ ಅಧ್ಯಕ್ಷ ಜಿ.ರವಿಕುಮಾರ್, ಕಾರ್ಯದರ್ಶಿ ಯಶವಂತರಾಜ್, ಅಭಯ ಫೌಂಡೇಷನ್ ಅಧ್ಯಕ್ಷರಾದ ರಾಮಕೃಷ್ಣ ರೇಣಿಗುಂಟ್ಲ, ಉಪಾಧ್ಯಕ್ಷ ನಾಮಾ ಕಾರ್ತೀಕ್, ಕಾರ್ಯದರ್ಶಿ ಹೆಚ್.ಆರ್.ಬಾಲನಾಗರಾಜ್, ಸಹ ಕಾರ್ಯದರ್ಶಿ ಜೆ.ಎಸ್.ಅಜಯರ್, ಖಜಾಂಚಿ ವೇಣುಗೋಪಾಲ, ಜಿತೇಂದ್ರ ಪ್ರಸಾದ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.