ಮುಂಡರಗಿ

ಸೃಜನಶೀಲ ಚಟುವಟಿಕೆಗಳು ಮಾನಸಿಕ ಆರೋಗ್ಯ ಸುಧಾರಿಸುತ್ತವೆ: ಕಲವೀರಪ್ಪ ಭಜಂತ್ರಿ

ಸೃಜನಶೀಲ ಚಟುವಟಿಕೆಗಳು ಮಾನಸಿಕ ಆರೋಗ್ಯ ಸುಧಾರಿಸುತ್ತವೆ: ಕಲವೀರಪ್ಪ ಭಜಂತ್ರಿ

ಮುಂಡರಗಿ : ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ, ಅವರ ಆಸಕ್ತಿಯ ಕ್ಷೇತ್ರದಲ್ಲಿ ಮಾರ್ಗದರ್ಶನ ಅಗತ್ಯವಿದೆ. ಮಕ್ಕಳು ಆಟ, ಸಂಗೀತ, ನೃತ್ಯಕಲೆ, ಮಣ್ಣಿನ ಮಾದರಿ ತಯಾರಿಕೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಮಾಡುತ್ತಾ ಕಲಿ ಎಂಬ ಅನುಭವಾತ್ಮಕ ಕಲಿಕೆ ಶಾಸ್ವತವಾಗಿರುತ್ತದೆ. ಸಮಯದ ಸದುಪಯೋಗಕ್ಕೆ ಉಪಯುಕ್ತ ಚಟುವಟಿಕೆಗಳು, ಭಾವನಾತ್ಮಕ ಮತ್ತು ದೈಹಿಕ ಬೆಳವಣಿಗೆಗೆ ಕಾರಣವಾಗುತ್ತವೆ. ಸೃಜನಶೀಲ ಚಟುವಟಿಕೆಗಳು ಮಾನಸಿಕ ಆರೋಗ್ಯ ಸುಧಾರಿಸುತ್ತವೆ ಎಂದು ಶಿಂಗಟಾಲೂರ ಗ್ರಾಮ ಪಂಚಾಯತೀಯ ಉಪಾಧ್ಯಕ್ಷರಾದ ಕಲವೀರ​‍್ಪ ಭಜಂತ್ರಿ ತಿಳಿಸಿದರು.  

ಅವರು ಸರಕಾರಿ ಪ್ರೌಢಶಾಲೆ ಶಿಂಗಟಾಲೂರಿನಲ್ಲಿ ಜರುಗಿದ ಸನ್ 2022- 23ನೇ ಸಾಲಿನ ಶಿಂಗಟಾಲೂರ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.  

ಮುಖ್ಯೋಪಾಧ್ಯಾಯ ಡಿ.ಯು.ಲಮಾಣಿ ಮಾತನಾಡಿ, ನಮ್ಮ ಶಿಂಗಟಾಲೂರ ಕ್ಲಷ್ಟರ್ ಮಟ್ಟದಲ್ಲಿನ ಪ್ರತಿಭಾನ್ವೀತ ಮಕ್ಕಳನ್ನು ಆಯ್ಕೆ ಮಾಡುವಲ್ಲಿ ನಿರ್ಣಾಯಕರ ಪಾತ್ರ ಪ್ರಮುಖವಾದದ್ದು ಇಲ್ಲಿನ ಪ್ರತಿಭೆಗಳು ರಾಜ್ಯ ಹಂತದಲ್ಲಿ ಮಿಂಚುವಂತಾಗಲಿ ಎಂದು ಹಾರೈಸಿದರು.  

ಶಿಂಗಟಾಲೂರ ಕ್ಲಷ್ಟರ್ ಸಂಪನ್ಮೂಲ ವ್ಯಕ್ತಿಗಳಾದ ನಂದೀಶಕುಮಾರ ಮಾತನಾಡಿ, ಪರಸ್ಪರ ಶಾಲೆಗಳ ಸಾಂಸ್ಕೃತಿಕ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಪ್ರತಿಭಾ ಕಾರಣಜಿಗಳು ಪ್ರಮುಖ ಪಾತ್ರ ವಹಿಸುತ್ತವೆ. ನಮ್ಮ ಜನಪದರ ನೃತ್ಯ, ಸಂಗೀತ, ಕರಕುಶಲ ಕಲೆಗಳಿಗೆ ಶಾಲೆಗಳಲ್ಲಿ ಮರುಜೀವ ಸಿಗುತ್ತಿರುವುದು ಸಂತಸದ ಕೆಲಸ. ನಮ್ಮ ಕ್ಲಷ್ಟರ್ ವ್ಯಾಪ್ತೀಯ ಮಕ್ಕಳ ಪ್ರತಿಭೆ ಪ್ರಕಾಶಮಾನವಾಗಿ ಬೆಳಗುವಲ್ಲಿ ನಿರ್ಣಾಯಕರ ಪಾತ್ರ ಪ್ರಮುಖವಾದದ್ದು ಎಂದು ತಿಳಿಸಿದರು.  

ಸಮಾರಂಭವನ್ನು ಎ.ಪಿ.ಎಮ್‌.ಸಿ.ಯ ಸದಸ್ಯರಾದ ಕೊಟ್ರೇಶ ಬಳ್ಳೊಳ್ಳಿಯವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸರಕಾರಿ ಪ್ರೌಢಶಾಲೆ ಶಿಂಗಟಾಲೂರಿನ ಎಸ್‌.ಡಿ.ಎಮ್‌.ಸಿ.ಯ ಅಧ್ಯಕ್ಷರಾದ ಬಸವೇಶ್ವರಕುಮಾರ ಸದಾಶಿವಪ್ಪನವರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿಂಗಟಾಲೂರ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಅಕ್ಕಮಹಾದೇವಿ ಕೋ. ಮಲ್ಲಾಪುರ. ಹನುಮಪ್ಪ ವಾಲೀಕಾರ, ಮಲ್ಲೇಶ ಮಲ್ಲೀಕೇರಿ, ಪ್ರಕಾಶ ಕೋರಿ, ಲೋಕೇಶ ಶೆಟ್ಟರ, ನಾಗಭೂಷಣ ಮೇಟಿ, ಯು.ಆರ್‌.ಸಿರಸಗಿ, ಪರಮೇಸಿ ಎಸ್‌. ಆರ್‌.ಎಚ್‌. ಗೊಲ್ಲರಟ್ಟಿ, ಮರಿಯಜ್ಜ ಹರಿಜನ, ರಜಿಯಾ ಮುಜಾವರ ಪಾಲ್ಗೊಂಡಿದ್ದರು.  

ಧನೇಶ ಲಮಾಣಿ ಕಾರ್ಯಕ್ರಮ ನಿರ್ವಹಿಸಿ, ಮಹೇಶ ಮೇಟಿ ಸರ್ವರನ್ನು ಸ್ವಾಗತಿಸಿದರು, ರವಿ ಎಸ್‌. ದೇವರಡ್ಡಿ ವಂದಿಸಿದರು.  

ಇದೆ ಸಂದರ್ಭದಲ್ಲಿ ವರ್ಗಾವಣೆಗೊಂಡ ಶಿವಕುಮಾರ ಎಸ್‌. ಶಿರೂರ ದ್ವೀತಿಯ ದರ್ಜೆ ಸಹಾಯಕರು ಇವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. 


ಸುದ್ದಿ ಓದಿ