ಲೇಖನಗಳು

ಸೃಜನಶೀಲ ಸಾಹಿತಿ : ಡಾ. ನಾಗತಿಹಳ್ಳಿ ಚಂದ್ರಶೇಖರ

ಸೃಜನಶೀಲ ಸಾಹಿತಿ : ಡಾ. ನಾಗತಿಹಳ್ಳಿ ಚಂದ್ರಶೇಖರ


ಸಾಹಿತ್ಯ ಹಾಗೂ ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವವರು ಕನ್ನಡ ನಾಡಿನಲ್ಲಿ ಸಿಗುವುದು ಬಹಳ ವಿರಳ. ಸಾಹಿತ್ಯ ಹಾಗೂ ಸಿನಿಮಾ ಕ್ಷೇತ್ರಗಳೆರಡರಲ್ಲೂ ಕೆಲಸ ಮಾಡಿ ಹೆಸರು ಪಡೆದ ಪಿ.ಲಂಕೇಶ, ಗೀರೀಶ ಕಾರ್ನಾಡ, ಸಿದ್ಧಲಿಂಗಯ್ಯ, ಬರಗೂರು ರಾಮಚಂದ್ರ​‍್ಪ ಮುಂತಾದವರ ಸಾಲಿನಲ್ಲಿ ನಾಗತಿಹಳ್ಳಿ ಚಂದ್ರಶೇಖರರು ಒಬ್ಬರು. ಗ್ರಾ"ುಣ ಹಿನ್ನಲೆಯ ನಾಗತಿಹಳ್ಳಿಯವರು ಸಾ"ತ್ಯ ಮತ್ತು ಸಿನಿಮಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಾಮಾಜಿಕ ಕಾಳಜಿಯನ್ನು ಸೃಜನಶೀಲ ಕ್ಷೇತ್ರದ ಜೊತೆಗೆ ಬೆಸೆದು ಕೃತಿಗಳನ್ನು, ಕಲಾ ಕೃತಿಗಳನ್ನು ಕಟ್ಟುವಂತ ಪ್ರಯತ್ನ ಮಾಡುತ್ತಿರುವ ನಮ್ಮ ನಡು"ನ ಒಬ್ಬ ಅಪರೂಪದ ಸೃಜನಶೀಲ ಬರಹಗಾರರು.  

ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಾಗತಿಹಳ್ಳಿಯವರಾದ ಚಂದ್ರಶೇಖರರು 1958ರ ಆಗಸ್ಟ್‌ 15ರಂದು ಜನಿಸಿದರು. ತಂದೆ ತಿಮ್ಮಶೆಟ್ಟಿಗೌಡ, ತಾು ಪಾರ್ವತಮ್ಮ. ಬಡತನದ ಗ್ರಾ"ುಣ ಕುಟುಂಬದಲ್ಲಿ ಬೆಳೆದ ಅವರು ಪ್ರಾಥ"ುಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರೈಸಿ ಪ್ರೌಢಶಿಕ್ಷಣವನ್ನು ಕದಬಹಳ್ಳಿಯಲ್ಲಿ ಪೂರ್ಣಗೊಳಿಸಿದರು. ನಂತರ ಚಂದ್ರಶೇಖರರು ಕಾಲೇಜು ವ್ಯಾಸಂಗಕ್ಕಾಗಿ ಕಾರವಾರಕ್ಕೆ ಬರುತ್ತಾರೆ. ಅವರು "ಜ್ಞಾನ ವಿಭಾಗದಲ್ಲಿ ಯಶಸ್ಸು ಕಾಣದೇ ಅನುತ್ತೀರ್ಣರಾಗುತ್ತಾರೆ. ಉಪಜೀವನಕ್ಕಾಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರುತ್ತಾರೆ. ತದನಂತರ ಆಸಕ್ತಿುಂದ ಶಿಕ್ಷಣವನ್ನು ಮುಂದುವರೆಸಿದ ಅವರು ಸತತ ಅಭ್ಯಾಸ, ಏಕಾಗ್ರತೆಯ ತಪಸ್ಸಿನ ಅಧ್ಯಯನದ ಫಲವಾಗಿ ಕನ್ನಡ ಪದ"ಯನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುತ್ತಾರೆ. ಹಣಕಾಸಿನ ಅಡಚಣೆೆಯ ನಡುವೆಯೂ ಚಂದ್ರಶೇಖರರು ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಎಂಟು ಚಿನ್ನದ ಪದಕಗಳೊಂದಿಗೆ ಪ್ರಥಮ ರಾ​‍್ಯಂಕ್ ಪಡೆದು ಉತ್ತೀರ್ಣರಾದರು.  

ಅವರು ಬೆಂಗಳೂರು ಸರ್ಕಾರಿ ಕಛೇರಿಯಲ್ಲಿ ಗುಮಾಸ್ತರಾಗಿ ಕೆಲಸವನ್ನು ಪ್ರಾರಂಭಿಸಿದರು. ಅನಂತರ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಹನ್ನೆರಡು ವರ್ಷಗಳ ಕಾಲ ಬೋಧನಾ ವೃತ್ತಿಯಲ್ಲಿ ಸಾರ್ಥಕತೆಯನ್ನು ಕಾಣುತ್ತಾರೆ. ಅವರು ಉಪನ್ಯಾಸಕ ಹುದ್ದೆಗೆ ರಾಜೀನಾಮೆ ನೀಡಿ ಚಿತ್ರರಂಗಕ್ಕೆ ಪ್ರವೇಶಿಸಿದರು. ಚಲನಚಿತ್ರ, ಕಿರುತೆರೆಗಳಲ್ಲಿ ಪ್ರತಿಭಾವಂತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ನಾಗತಿಹಳ್ಳಿ ಚಂದ್ರಶೇಖರರು ಹೊಸ ವಿಭಿನ್ನ ಮಾದರಿಯ ಚಿತ್ರಗಳನ್ನು ಚಿತ್ರ​‍್ರಪಂಚಕ್ಕೆ ಕೊಡುಗೆಯಾಗಿ ನೀಡುತ್ತಿದ್ದಾರೆ. ಚಂದ್ರಶೇಖರರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಭ್ಯಸಿಸುತ್ತಿದ್ದಾಗಲೇ ಭೌತಶಾಸ್ತ್ರ ವಿಭಾಗದ ಗೆಳತಿ ಶೋಭಾರವರಲ್ಲಿ ಆರ್ಕತರಾಗಿ, ಸರಳ ರೀತಿಯಲ್ಲಿ ಡಾ.ಸಿದ್ಧಲಿಂಗಯ್ಯನವರ ನೇತೃತ್ವದಲ್ಲಿ ವಿವಾಹವಾಗುತ್ತಾರೆ. ನಾಗತಿಹಳ್ಳಿ ಚಂದ್ರಶೇಖರರು ಪತ್ನಿ ಶೋಭಾ, ಮಕ್ಕಳಾದ ಸಿಹಿ ಮತ್ತು ಕನಸು ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  

ನಾಗತಿಹಳ್ಳಿ ಚಂದ್ರಶೇಖರ ಅವರು ಎಂಟನೆಯ ತರಗತಿಯಲ್ಲಿರುವಾಗಲೇ "ಆವೃತ್ತ" ಎನ್ನುವ ಕಥೆೆಯೊಂದನ್ನು ಬರೆಯುತ್ತಾರೆ. ಅದು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ. ಅವರಿಗೆ ಎಲ್ಲಿಲ್ಲದ ಸಂತಸವಾಗಿತ್ತು. ಅಲ್ಲದೇ ಪದ" ತರಗತಿಯ ಪ್ರಥಮ ವರ್ಷದಲ್ಲಿರುವಾಗಲೇ "ಹದ್ದುಗಳು" ಕಥಾ ಸಂಕಲನ ಪ್ರಕಟವಾಗುತ್ತದೆ. ಕಥಾ ಸಂಕಲನದ ಮೂಲಕ ನಾಡಿನಾದ್ಯಂತ ಪರಿಚಿತರಾಗುತ್ತಾರೆ. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾದುದು. ಕಥೆ, ಕಾದಂಬರಿ, ಅಂಕಣ ಬರಹ, ಪ್ರವಾಸ ಸಾ"ತ್ಯ, ವೈಚಾರಿಕ ಬರಹ, ಮತ್ತು ಸಿನಿಮಾ ಹಿಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃ ಮಾಡಿದ ಸೃಜನಶೀಲ ಬರಹಗಾರರಾಗಿದ್ದಾರೆ. ಅವರು ಇದುವರೆಗೆ ಏಳು ಕಥಾ ಸಂಕಲನಗಳು, ಮೂರು ಕಾದಂಬರಿಗಳು, ಏಳು ಪ್ರವಾಸ ಕಥನಗಳು, ಅಂಕಣ ಬರಹದ ಹತ್ತು ಸಂಪುಟಗಳು, ಎರಡು ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಹದ್ದುಗಳು, ನನ್ನ ಪ್ರೀತಿಯ ಹುಡುಗನಿಗೆ, ಮಲೆನಾಡಿನ ಹುಡುಗಿ-ಬಯಲು ಸೀಮೆಯ ಹುಡುಗ, ಸನ್ನಿಧಿ, ಪ್ರೇಮ, ಅಕಾಲ, ಛಿದ್ರ ಕಥಾ ಯಾತ್ರೆ ಕಥಾ ಸಂಕಲನಗಳು, ಬಾನಲ್ಲೆ ಮಧುಚಂದ್ರಕೆ, ಚುಕ್ಕಿ ಚಂದ್ರಮರ ನಾಡಿನಲ್ಲಿ, ವಲಸೆ ಹಕ್ಕಿಯ ಹಾಡು ಕಾದಂಬರಿಗಳು, ಅಯನ, ಅಮೇರಿಕಾ ಅಮೇರಿಕಾ, ದಕ್ಷಿಣ ಧ್ರುವದಿಂ, ನನ್ನ ಗ್ರಹಿಕೆಯ ಈಜಿಪ್ತ, ನನ್ನ ಗ್ರಹಿಕೆಯ ಸಿಕ್ಕಿಂ, ನನ್ನ ಗ್ರಹಿಕೆಯ ನೇಪಾಳ ಪ್ರವಾಸ ಕಥನಗಳು, ನನ್ನ ಪ್ರೀತಿಯ ಹುಡುಗಿಗೆ, ಹೊಳೆದಂತೆ, ರೆಕ್ಕೆ-ಬೇರು ಅಂಕಣ ಬರಹಗಳು ಮುಂತಾದ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನಾಗತಿಹಳ್ಳಿ ಅವರು ಅರ​‍್ಿಸಿದ್ದಾರೆ. ಸಮಾಜಮುಖಿ ನೆಲೆಯಲ್ಲಿ ಅವರ ಜೀವಪರ ಕಾಳಜಿಗಳು ಸಾಹಿತ್ಯದ ಮೂಲಕ ವ್ಯಕ್ತಗೊಂಡಿರುವುದು ಸಂತಸದ ಸಂಗತಿಯಾಗಿದೆ.  

ನಾಗತಿಹಳ್ಳಿ ಚಂದ್ರಶೇಖರ ಅವರ ಕಥನಗಳಲ್ಲಿ ಸಾಮಾಜಿಕ ಕಾಳಜಿ, ಶಿಕ್ಷಣದಿಂದ ವ್ಯಕ್ತಿಯಲ್ಲಿ ಹಾಗೂ ಸಮಾಜದಲ್ಲಿ ಆಗಬೇಕಾದ ಬದಲಾವಣೆಯ ಸ್ವರೂಪವನ್ನು ತಂದಿದ್ದಾರೆ. ಗ್ರಾ"ುಣ ಪ್ರದೇಶದ ಹಳೆ ಹಾಗೂ ಹೊಸ ತಲೆಮಾರಿನ ಸಂಘರ್ಷ, ಪ್ರಭುತ್ವದ ದುಷ್ಟತನವನ್ನು, ಶೋತರ ಅಸಹಾಯಕತೆಯನ್ನು ಕಥನಗಳ ವಸ್ತುವಾಗಿ ಬಳಸಿದ್ದಾರೆ. ದಲಿತರು, ಮ"ಳೆಯರು, ರೈತರು ಮುಂತಾದ ದುರ್ಬಲ ವರ್ಗದವರ ಬಗೆಗೆ ಕಾಳಜಿ ಅಭಿವ್ಯಕ್ತವಾಗಿದೆ. ಅವರ ಮೂರು ಕಾದಂಬರಿಗಳು ವಿಭಿನ್ನ ಕಥಾವಸ್ತುಗಳಿಂದ ಕೂಡಿದ್ದು ಒಂದಕ್ಕಿಂತ ಒಂದು ಕುತೂಹಲದಾಯಕವಾಗಿವೆ. ಕನ್ನಡದ ಪ್ರವಾಸ ಕಥನಗಳಲ್ಲಿ ನಾಗತಿಹಳ್ಳಿಯವರದು ಬಹುಮುಖ್ಯವಾದ ಹೆಸರು. ನಿಜ ಜೀವನದಲ್ಲಿ ಅಲೆಮಾರಿ ಎಂದೇ ಗುರುತಿಸಬಹುದಾದ ಬರಹಗಾರ, ಅವರು ಅದೆಷ್ಟೋ ದೇಶಗಳ ಸುತ್ತಾಟವನ್ನು ಸಂಕ್ಷಿಪ್ತವಾಗಿ ಲೇಖನರೂಪದಲ್ಲಿ ಓದುಗರ ಮುಂದಿಟ್ಟಿದ್ದಾರೆ. ಅಲ್ಲಿನ ಜನಜೀವನ, ಸಂಘ-ಸಂಸ್ಥೆಗಳ ಕಾರ್ಯವೈಖರಿ, ಭಿನ್ನ ಭಿನ್ನವಾದ ಪ್ರವಾಸ ಕ್ಷೇತ್ರಗಳ ವೈಶಿಷ್ಟ್ಯತೆಯನ್ನು ಬಿಚ್ಚಿರುವ ಕ್ರಮ ವಿವಿಧ ದೇಶಗಳ ಪರ್ಯಟನೆಗೈದ ಫಲಶೃತಿ ಅವರ ಕೃತಿಗಳಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. ನನ್ನ ಪ್ರೀತಿಯ ಹುಡುಗಿಗೆ ಕಾಲಂ ಬರೆದು ಹಾಯ್ ಬೆಂಗಳೂರು ಪತ್ರಿಕೆಯನ್ನು ಜನಪ್ರಿಯಗೊಳಿಸಿದ್ದಲ್ಲದೇ ಅಂಕಣ ಬರಹ ಪ್ರಕಾರಕ್ಕೆ ಹೊಸ ರೂಪದ ಮಾದರಿ ಸಾ"ತ್ಯವನ್ನು  ನಾಗತಿಹಳ್ಳಿ ಚಂದ್ರಶೇಖವರು ಸ್ಟೃ ಮಾಡಿದರು. ಅನಂತರದಲ್ಲಿ ಅದೇ ಹೆಸರಿನ ಆರು ಸಂಪುಟಗಳ ಜೊತೆ ಹೊಳೆದಂಡೆ ಹೆಸರಿನ ನಾಲ್ಕು ಕೃತಿಗಳು, ರೆಕ್ಕೆ-ಬೇರು ಹೆಸರಿನ ಎರಡು ಕೃತಿಗಳು ಸಾ"ತ್ಯ ಪ್ರಕಾರದ ಅಂಕಣ ಲೋಕಕ್ಕೆ ಅರೆ​‍್ಣಗೊಂಡವು. 

ಸಾಹಿತ್ಯದ ಜೊತೆಗೆ ಸಿನಿಮಾ, ಸಂಘಟನೆ ಮತ್ತು ಸಾಮಾಜಿಕ ಚಿಂತನೆಗಳು ನಾಗತಿಹಳ್ಳಿಯವರಿಗೆ ಪ್ರಮುಖವಾದವುಗಳಾಗಿವೆ. ಅವರು 1986ರಲ್ಲಿ ಕಾಡಿನ ಬೆಂಕಿ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ, ಗೀತ ಸಾ"ತ್ಯ ರಚಿಸುವ ಮೂಲಕ ಸಿನಿಮಾರಂಗಕ್ಕೆ ಕಾಲಿರಿಸಿದರು. ಸಂಕ್ರಾಂತಿ, ಪ್ರಥಮ ಉಷಾಕಿರಣ, ಉದ್ಭವ ಚಿತ್ರಗಳಿಗೆ ಚಿತ್ರಕಥೆ ಮತ್ತು ಸಾ"ತ್ಯ ರಚಿಸುವ ಮೂಲಕ ಗಮನಸೆಳೆದರು. ನಾಗತಿಹಳ್ಳಿಯವರು ನಿರ್ದೇಶಿಸಿದ ಮೊದಲ ಸಿನಿಮಾ ಉಂಡೂ ಹೋದ ಕೊಂಡು ಹೋದ. ದಲಿತ ಬದುಕಿನ ನೋವು ನಲಿವುಗಳನ್ನು ಚಿತ್ರಿಸುವ ಕೊಟ್ರೇಶಿ ಕನಸು, ಭಯೋತ್ಪಾದನೆ, ಗಡಿ ಸಮಸ್ಯೆ ಕುರಿತಾದ ಹೂಮಳೆ, ರಾಜಮನೆತನದ ದುರಂತದ ಚಿತ್ರಣ ಒಳಗೊಂಡ ಸೂಪರ್ ಸ್ಟಾರ್, ಮಾನವಿಯ ಮೌಲ್ಯಗಳನ್ನು ಬಿತ್ತರಿಸುವ ಅಮೇರಿಕಾ ! ಅಮೇರಿಕಾ !, ದಾಂಪತ್ಯದ ಮಧುರ ಪ್ರೇಮ ಕುರಿತಾದ ಅಮೃತಧಾರೆ, ರೈತರ ಪರಿಪಾಟಲನ್ನು ಬಿಂಬಿಸುವ ಮಾತಾಡ್ ಮಾತಾಡ್ ಮಲ್ಲಿಗೆ, ಜಾಗತೀಕರಣ ಗುರುತಿಸುವ ಪ್ಯಾರೀಸ್ ಪ್ರಣಯ, ದುರಂತ ಪ್ರೇಮ ಕಥೆೆ ಹೇಳುವ ಬಾನಲ್ಲೆ ಮಧುಚಂದ್ರಕೆ, ಇಷ್ಟಕಾಮ್ಯ, ಇಂಡಿಯಾ ವರ್ಸಸ್ ಇಂಗ್ಲೆಂಡ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಕಿರುತೆರೆಯಲ್ಲಿ ಛಾಪೂ ಮೂಡಿಸಿರುವ ಅವರು ವಠಾರ, ಭಾಗ್ಯ, ಕಾವೇರಿ, ಪುಣ್ಯ, ಬೆಳ್ಳಿಚುಕ್ಕಿ ಮುಂತಾದ ಧಾರವಾ"ಗಳನ್ನು ನಿರ್ದೇಶಿದ್ದಾರೆ. 

ನಾಗತಿಹಳ್ಳಿಯವರ ಸಾಹಿತ್ಯ-ಸಿನಿಮಾವನ್ನು ಕುರಿತು ಹಲವಾರು ಲೇಖನಗಳು, ವಿಮರ್ಶೆಗಳು, ವ್ಯಾಖ್ಯಾನಗಳು, ವಿಚಾರ ಸಂಕಿರಣಗಳು ನಡೆದಿವೆ. ಶರಣಪ್ಪ ಆನೆ ಹೊಸುರ ಅವರು ಕಲುಬುರ್ಗಿ ವಿಶ್ವವಿದ್ಯಾಲಯದಿಂದ, ರಶ್ಮಿ ಅವರು ಮೈಸೂರ ವಿಶ್ವವಿದ್ಯಾಲಯದಿಂದ ಹಾಗೂ  ದೊರೇಶ ಅವರು ತುಮಕೂರು ವಿಶ್ವವಿದ್ಯಾನಿಲಯದಿಂದ ನಾಗತಿಹಳ್ಳಿಯವರ ಸಾಹಿತ್ಯ ಮತ್ತು ಸಿನಿಮಾ ಕುರಿತು ಪ್ರೌಢ ಪ್ರಬಂಧ ಸಲ್ಲಿಸಿ ಪಿಎಚ್‌.ಡಿ. ಪದ" ಪಡೆದಿರುವರು. ಅಲ್ಲದೇ ಚಿನ್ನೇನಹಳ್ಳಿಸ್ವಾ"ು ಅವರು 'ಅಲೆಮಾರಿ ನಾಗತಿಹಳ್ಳಿ' ಎಂ.ಫಿಲ್‌. ಪ್ರಬಂಧವನ್ನು ಮೈಸೂರ ವಿಶ್ವವಿದ್ಯಾಲನಿಲಯಕ್ಕೆ ಸಲ್ಲಿಸಿ ಎಂ.ಫಿಲ್‌. ಪದ" ಪಡೆದಿರುವರು. ನಾಗತಿಹಳ್ಳಿಯವರ ಕಥೆಗಳು, ಲೇಖನಗಳು ಮತ್ತು ಪ್ರವಾಸ ಕೃತಿಗಳು ಕಲುಬುರ್ಗಿ ಹಾಗೂ ಇತರ "ಶ್ವ"ದ್ಯಾಲಯದಲ್ಲಿ ಪಠ್ಯವಾಗಿವೆ. ಬುದ್ಧ ಬಿಸಿಲೂರಿನವನು ಲೇಖನವು ಪದವಿ ಪೂರ್ವ ತರಗತಿಗಳಿಗೆ ಪಠ್ಯವಾಗಿದೆ. ಭಾರತದ ಬೇರೆ ಬೇರೆ ಭಾಷೆಗಳಿಗೆ ನಾಗತಿಹಳ್ಳಿಯವರ ಕಥೆಗಳು ಭಾಷಾಂತರಗೊಂಡಿವೆ. 2004ರಲ್ಲಿ ನಾಗತಿಹಳ್ಳಿಯವರು ಗ್ರಾಮ ಬದುಕಿಗೆ ಚಿಂತನೆ-ಚೈತನ್ಯ-ಚಿಕಿತ್ಸೆ ಎಂಬ ಆಶಯದೊಂದಿಗೆ ನಾಗತಿಹಳ್ಳಿ ಸಂಸ್ಕೃತಿ ಹಬ್ಬ ಎಂಬ ಸಂಘಟನೆಯನ್ನು ಹುಟ್ಟು ಹಾಕಿದರು. ಹಳ್ಳಿ ಮಕ್ಕಳಲ್ಲಿ ಸೃಜನಶೀಲತೆ, ಕಂಪ್ಯೂಟರ್ ತರಬೇತಿ, ಗ್ರಾ"ುಣ ಕ್ರೀಡೆ, ಕೃ ಕುರಿತು ಪ್ರವಾಸ ಹಾಗೂ ಉಪನ್ಯಾಸ, ಕಿರು ಉದ್ದಿಮೆಗಳ ತರಬೇತಿ ಮುಂತಾದ ಚಟುವಟಿಕೆಗಳನ್ನು ಸಂಘಟನೆಯ ಮೂಲಕ ಹ"್ಮುಕೊಳ್ಳುತ್ತಿರುವುದು ಶ್ಲಾಘನೀಯವಾದುದು. ಅವರು ಅಭಿವ್ಯಕ್ತಿ ಸಂಘಟನೆಯ ಮೂಲಕ ಹಲವಾರು ವರ್ಷಗಳಿಂದ ರಂಗಭೂ"ು ಚಟುವಟಿಕೆ, ಪುಸ್ತಕ ಪ್ರಕಟನೆ, ಅಂತರಜಾತೀಯ, ಅಂತರ್‌ಧ"ುರ್ಯ ಮತ್ತು ಸರಳ ವಿವಾಹಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅವರು ನಾಗತಿಹಳ್ಳಿಯಲ್ಲಿ ಸುಸಜ್ಜಿತ ವಿಶಾಲವಾದ ಗ್ರಂಥಾಲಯವನ್ನು ಕಟ್ಟಿಸಿಕೊಟ್ಟಿದ್ದಾರೆ.  

ಅವರ ಸಾಹಿತ್ಯ ಮತ್ತು ಸಿನಿಮಾದಲ್ಲಿಯ ಸಾಧನೆಯನ್ನು ಗುರುತಿಸಿ ಹಲವು ಪ್ರಶಸ್ತಿ, ಸನ್ಮಾನಗಳು ದೊರಕಿವೆ. ನಾಗತಿಹಳ್ಳಿಯವರು ಆರ್ಯಭಟ ಪ್ರಶಸ್ತಿ, ಹಾ.ಮಾ.ನಾಯಕ ಪ್ರಶಸ್ತಿ, ಗೌತಮ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಎಸ್‌. "್ಹ. ಪರಮೇಶ್ವರ ಭಟ್ಟ ಪ್ರಶಸ್ತಿ, ಸಾ"ತ್ಯ ಸೇವಾ ಪ್ರಶಸ್ತಿ , ಸುಬ್ಬಣ್ಣ ಕಣಗಾಲ್ ಪ್ರಶಸ್ತಿ "ಗೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಅವರು ಸಿನಿಮಾ ಕ್ಷೇತ್ರದ ಸಾಧನೆಗಾಗಿ ಮೂರು ರಾಷ್ಟ್ರ ಪ್ರಶಸ್ತಿ, ಹದಿಮೂರು ರಾಜ್ಯಪ್ರಶಸ್ತಿ ಮತ್ತು ಎರಡು ಸಲ ಫಿಲ್ಮಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಮೈಸೂರ ವಿಶ್ವವಿದ್ಯಾನಿಲಯವು ಸಾ"ತ್ಯ ಹಾಗೂ ಸಿನಿಮಾ ಕ್ಷೇತ್ರದ ಸಾಧನೆಗಾಗಿ ಗೌರವ ಡಾಕ್ಟರೇಟ್ ನೀಡಿ ಗೌರ"ಸಿದೆ. ಕರ್ನಾಟಕ ಚಲನಚಿತ್ರ ಅಕಾಡೆ"ುಯ ಅಧ್ಯಕ್ಷರಾಗಿ ಅವರು ಕಾರ್ಯನಿರ್ವಸಿದ್ದಾರೆ.  

ನಾಗತಿಹಳ್ಳಿ ಚಂದ್ರಶೇಖರ ಅವರು ಸಾ"ತ್ಯದ ಜೊತೆ ಜೊತೆಗೆ ಸಿನಿಮಾ ನಿರ್ದೇಶನವನ್ನು ವೃತ್ತಿಯನ್ನಾಗಿಸಿಕೊಂಡು ಗುರುತಿಸಿಕೊಂಡವರು. ಬಾಲ್ಯದಿಂದಲೂ ಅನೇಕ ಕಷ್ಟ-ನಷ್ಟಗಳನ್ನು ಎದುರುಗೊಂಡು, ಸಮಸ್ಯೆಗಳ ನಡುವೆ ನಿರಂತರ ಓದಿನಲ್ಲಿ ಆಸಕ್ತಿ ಹೊಂದುತ್ತಲೇ ಗ್ರಾ"ುಣ ಜೀವನ ಹಾಗೂ ಜೀವನಾನುಭವಗಳನ್ನು ಗಟ್ಟಿಯಾಗಿಸಿ, ತಮ್ಮ ಬದುಕು ಬರಹದಲ್ಲಿ ಅದನ್ನು ಕಾಪಾಡಿಕೊಂಡು ಬಂದಿದ್ದಾರೆ. ಶಾಲೆಯ ದಿನಗಳಲ್ಲಿನ ಕಥನ ಕಟ್ಟುವ ಕಲೆ, ಸಂಜೆ ಕಾಲೇಜಿನ ಓದು, ದಿನಗೂಲಿ ದುಡಿಮೆ, ರಾತ್ರಿ ನೌಕರಿ, ನಿರುದ್ಯೋಗ, ಅರೆಕಾಲಿಕ ಉಪನ್ಯಾಸಕ ವೃತ್ತಿ, ಸಿನಿಮಾ ಕಸುಬುದಾರಿಕೆ ಹಿಗೆ ಬದುಕಿನ ವಿಭಿನ್ನ ಅನುಭವಗಳನ್ನು ಪಡೆದಿದ್ದಾರೆ. ಬದುಕಿನ ಈ ಅನುಭವಗಳು ಬರವಣಿಗೆಯ ರೂಪದಲ್ಲಿ ಸೃಜನಶೀಲರನ್ನಾಗಿ ಮಾಡಿವೆ ಎನ್ನಬಹುದು. ವೈವಿಧ್ಯಮಯ ಕಥಾವಸ್ತು ಹಾಗೂ ಭಿನ್ನ ನಿರೂಪಣಾ "ಧಾನದಿಂದ ಇವರ ಬರಹಗಳು ಓದುಗರ ಗಮನ ಸೆಳೆಯುತ್ತವೆ. ಹಳ್ಳಿಗಳಿಂದ ನಗರಕ್ಕೆ ಬಂದು ಅಸ್ತಿತ್ವಕ್ಕೆ ಪರಿತಪಿಸುವ ತರುಣರ ತಾಕಲಾಟ, ಗ್ರಾ"ುಣ ಬದುಕಿನಲ್ಲಿರುವ ಮಾನ"ಯ ಅಂತಃಕರಣ, ಧಾ"ುರ್ಕ ಮುಖಂಡರ ಡಾಂಭಿಕತೆ, ಅಮಾಯಕರನ್ನು ವಂಚಿಸುವ ಸಮಾಜ ಘಾತುಕ ಶಕ್ತಿಗಳು ಉಂಟುಮಾಡುವ ಸಾಮಾಜಿಕ ಸಂಘರ್ಷಗಳಿಗೆ ಅಕ್ಷರ ರೂಪವನ್ನು ಕೊಟ್ಟಿದ್ದಾರೆ. ನಾಗತಿಹಳ್ಳಿಯವರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ವಿಶಿಷ್ಟತೆಯನ್ನು, ವಿನೂತನ ಪ್ರಯೋಗಶೀಲತೆಯನ್ನು ಮೆರೆದಿದ್ದಾರೆ. ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರದಲ್ಲಿ ನಾಗತಿಹಳ್ಳಿಯವರದು ಬಹು ದೊಡ್ಡ ಹೆಸರು. ಕಲಾವಿದ, ಸಾಹಿತಿ, ನಿರ್ದೇಶಕರಾಗಿ ಸಾ"ತ್ಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ಗುರುತಿಸುವ ಸಾಧನೆ ಗೈದಿದ್ದಾರೆ.  

ಸುರೇಶ ಗುದಗನವರ          

  9449294694 


ಸುರೇಶ ಗುದಗನವರ 

ಲೇಖಕರು 

9449294694 

ರಾಮದುರ್ಗ 

  


ಸುದ್ದಿ ಓದಿ