15 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಕಾರ್ಯಕ್ರಮ
ಬಳ್ಳಾರಿ 03: ಬಳ್ಳಾರಿ ನಗರ 22ನೇ ವಾರ್ಡ್‌ನಲ್ಲಿರುವ ಗುರು ತಿಪ್ಪೇರುದ್ರ ಮಹಾವಿದ್ಯಾಲಯದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಅಂದರೆ 15ವರ್ಷ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಇದಕ್ಕೆ ಈ ವಾರ್ಡಿನ ಹೊಸದಾಗಿ ಆಯ್ಕೆಯಾಗಿರುವ ನಗರ ಸಭೆ ಸದ್ಯಸ ಕೆ. ಹನುಮಂತಪ್ಪನವರು ಗಿಡಕ್ಕೆ ನೀರೆರೆಯುವುದರ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಕೋವಿಡ್‌ನ ಮತ್ತೊಂದು ಅಲೆ ಪ್ರಾರಂಭವಾಗಿದ್ದು ಲಸಿಕೆ ತೆಗೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಪ್ರತಿಯೊಬ್ಬರು ಈಗಿನ ಪ್ರಥಮ ಡೋಸ್ ಅಲ್ಲದೇ ಎರಡನೇ ಡೋಸ್‌ನ್ನು ಕೂಡ ತೆಗೆದುಕೊಳ್ಳಿರಿ ಎಂದು ತಿಳಿಸಿದರು. ಸುರಕ್ಷತೆಗೆ ಆದ್ಯತೆ ನೀಡಬೇಕಾಗಿದೆ. ಮಾಸ್ಕ್, ಸ್ಯಾನಿಟೈಸರ್ ತಪ್ಪದೇ ಬಳಸಿ ಅಂತರವನ್ನು ಕಾಯ್ದುಕೊಂಡು ವೈಯಕ್ತಿಕ ಆರೋಗ್ಯ ಕಾಪಡಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾಲೇಜಿನ ಅಧ್ಯಕ್ಷ ಎಸ್. ಎನ್. ರುದ್ರಪ್ಪ, ಕಾರ್ಯದರ್ಶಿ ಜಿ. ನಾಗರಾಜ್, ಪ್ರಾಚಾರ್ಯ ಜಿ. ತೀಪ್ಪೆರುದ್ರ ಇವರುಗಳು ಕೆ. ಹನುಮಂತಪ್ಪರವರಿಗೆ ಈ ಸಮಯದಲ್ಲಿ ಸನ್ಮಾನಿಸಿದರು.