ಕೋವಿಡ್ ಲಸಿಕಾ ಅಭಿಯಾನ
ಹಗರಿಬೊಮ್ಮನಹಳ್ಳಿ 21: ಹಗರಿಬೊಮ್ಮನಹಳ್ಳಿ ತಾಲೂಕಿನ ಹನ್ಸಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಇಲಾಖೆಯ ಕೋವಿಡ್ ಲಸಿಕಾ ಅಭಿಯಾನದಲ್ಲಿ ಗ್ರಾಮ ಪಂಚಾಯತಿ ಸದಸ್ಯ ವಿ.ವೀರೇಶ್ ಭಾಗವಹಿಸಿದರು.
ಲಸಿಕೆಯಿಂದ ಯಾವುದೆ ಅಡ್ಡ ಪರಿಣಾಮವಿಲ್ಲ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿಯನ್ನು ಮಾಡಿದರು. ಮುಂಬರುವ ಮೂರನೇ ಅಲೆ ತಡೆಗೆ ಸರ್ಕಾರದ ಕ್ರಮಗಳನ್ನು ಅನುಸರಿಸುತ್ತಾ ಗ್ರಾಮದಲ್ಲಿ ಸಂಪೂರ್ಣ ಕೊರೊನಾ ಸೊಂಕಿನ ಕೊಂಡಿಯನ್ನು ತಪ್ಪಿಸುವಲ್ಲಿ ಪ್ರತಿಯೊಬ್ಬರು ಸಹಕರಿಸಬೇಕಿದೆ, ಯುವರಕು ಲಸಿಕೆ ಹಾಕಿಸಿಕೊಳ್ಳುವಂತೆ ಕರೆ ನೀಡಿದರು. ಈ ಸಂಧರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.