ಬಳ್ಳಾರಿ

ಸೌದಾಗರ್ ಮಸೀದಿ ಹತ್ತಿರ ಕೋವಿಡ್ ಲಸಿಕಾ ಅಭಿಯಾನ

ಸೌದಾಗರ್ ಮಸೀದಿ ಹತ್ತಿರ ಕೋವಿಡ್ ಲಸಿಕಾ ಅಭಿಯಾನ

ಸಿರುಗುಪ್ಪ 03: ಸೌದಾಗರ್ ಜುಮ್ಮಾ ಸುನ್ನಿ ಮಸೀದಿ ಹತ್ತಿರ ಕರ್ನಾಟಕ ಸರ್ಕಾರ ಆರೋಗ್ಯ ಇಲಾಖೆ ನಗರಸಭೆ ಇವರಿಂದ ಕೋವಿಡ್‌-19 ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ನಗರಸಭೆ ಸದಸ್ಯ ಮೊದೀನ್ ಚಾಲನೆ ನೀಡಿದರು. ಕಾಂಗ್ರೆಸ್ ತಾಲ್ಲೂಕು ಯುವ ಮಾಜಿ ಅಧ್ಯಕ್ಷರು ಹಂಡಿ ಹುಸೇನ್ ಬಾಷಾ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ  ಅವರು ಮಾತನಾಡುತ್ತಾ ಪ್ರತಿಯೊಬ್ಬರೂ ಕಡ್ಡಾಯವಾಗಿ ಕೋವಿಡ್‌-19 ಲಸಿಕೆಯನ್ನು ಹಾಕಿಸಿ ಕೊಳ್ಳಬೇಕು. ಸ್ವಚ್ಛತೆಗೆ ವೈಯಕ್ತಿಕವಾಗಿ ಆದ್ಯತೆ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಜೊತೆಗೆ ಲಸಿಕೆಯನ್ನು ಹಾಕಿಸಿ ಕೊಳ್ಳಬೇಕು ಸ್ವಚ್ಛತೆಗೆ ವೈಯಕ್ತಿಕವಾಗಿ ಆದ್ಯತೆ ನೀಡಿ ಸಾಮಾಜಿಕ ಅಂತರ ಕಾಯ್ದು ಕೊಳ್ಳಿ ಜೊತೆಗೆ ಮನೆಯಿಂದ ಹೊರಗೆ ಬರುವಾಗ ಮುಖಕ್ಕೆ ಮಾಸ್ಕ್‌ ಧರಿಸಿ ಕರೊನಾ ವೈರಸ್ ತಡೆಗಟ್ಟಲು ಸಹಕರಿಸಬೇಕು ಎಂದು ಮನವಿ ಮಾಡಿದರು.  


ನಗರಸಭೆ ಪೌರಾಯುಕ್ತ ಎಚ್ ಕೆ ರಾಘವೇಂದ್ರ ಗುರು ಅವರು ಮಾತನಾಡುತ್ತಾ ಕೊರೊನಾ ಮೂರನೇ ಅಲೆಯ ಬಗ್ಗೆ ನಿರ್ಲಕ್ಷ್ಯ ತೋರದೆ ಎಲ್ಲರೂ  ಕಡ್ಡಾಯವಾಗಿ 2ಲಸಿಕೆಗಳನ್ನು ಹಾಕಿಸಿ ಕೊಳ್ಳಬೇಕು ಭಯ ಪಡುವ ಅವಶ್ಯಕತೆ ಇಲ್ಲ ಮುಂಜಾಗ್ರತಾ ಕ್ರಮ ಕೈ ಗೊಳ್ಳಲು ಕೊರೊನಾ ವೈರಸ್ ತಡೆಗಟ್ಟಲು ನಾಗರಿಕರಲ್ಲಿ ಮನವಿ ಮಾಡಿಕೊಂಡರು. ಸಾಮಾಜಿಕ ಕಾರ್ಯಕರ್ತ ಎ ಅಬ್ದುಲ್ ನಬಿ,  ಮೌಲಾನ ಎಸ್ ಅಬ್ದುಲ್ ಸಮದ್ ನಗರಸಭೆಯ ಹಿರಿಯ ಅಧಿಕಾರಿ ಅಲ್ಲಾಭಕ್ಷಿ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರಿದ್ದರು. 


ಸುದ್ದಿ ಓದಿ