ಬಳ್ಳಾರಿ

ಕುರುಗೋಡಿನಲ್ಲಿ 6ಕ್ಕೆ ಏರಿದೆ ಕೋವಿಡ್ ಸೋಂಕು

ಕುರುಗೋಡಿನಲ್ಲಿ 6ಕ್ಕೆ ಏರಿದೆ ಕೋವಿಡ್ ಸೋಂಕು

ಕುರುಗೋಡು, ಜೂ, 16 :ಪಟ್ಟಣದ 4 ಜನ ಬೀದಿ ಬದಿ ವ್ಯಾಪಾರಿಗಳಿಗೆ ಕೊರೋನಾ ಸೋಂಕು ಗುರುವಾರ ದೃಢಪಟ್ಟಿದೆ. ಕುರುಗೋಡಿನಲ್ಲಿ 6ಕ್ಕೆ ಏರಿದೆ ಸೋಂಕು. ಸಾರ್ವಜನಿಕರಲ್ಲಿ ವ್ಯಾಪಾರಿಗಳ ಸಂಪಕರ್ಿತರು ಎಷ್ಟು ಜನ ಇರಬಹುದು ಎಂಬ ಭಯದ ಆತಂಕ ಇನ್ನೊಷ್ಟು ಹೆಚ್ಚಾಗಿದೆ. 

ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಆದೇಶದ ಮೇರೆಗೆ ಕಳೆದ ವಾರ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ವತಿಯಿಂದ 170 ಜನ ಬೀದಿ ಬದಿ ವ್ಯಾಪಾರಿಗಳಿಗೆ ಸಕರ್ಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಇದರಲ್ಲಿ ನಾಲ್ಕು ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಸೋಂಕಿತ ವ್ಯಕ್ತಿಗಳು ಪಟ್ಟಣದ ರಾಘವಾಂಕ ಮಠದ ಹಿಂದುಗಡೆಯ ನಿವಾಸಿ 34 ವರ್ಷದ ವ್ಯಕ್ತಿ, ಉಜ್ಜಾಳಪೇಟೆಯ ನಿವಾಸಿ 18 ವರ್ಷದ ವ್ಯಕ್ತಿ, ಗಣೇಶ್ ದೇವಸ್ಥಾನದ ಪಕ್ಕದ ನಿವಾಸಿ 40 ವರ್ಷದ ಮಹಿಳೆ ಹಾಗೂ ಪಟ್ಟಣ ಸಮೀಪದ ಮುಷ್ಟಗಟ್ಟೆ ಗ್ರಾಮದ ನಿವಾಸಿ 48 ವರ್ಷದ ವ್ಯಕ್ತಿಗೆ ಒಟ್ಟು 4 ಜನರಿಗೆ ಕೊರೋನಾ ಪಾಜಿಟಿವ್ ದೃಢಪಟ್ಟಿದೆ ಎಂದು ವೈದ್ಯಾಧಿಕಾರಿ ಮಂಜುನಾಥ ಜವಳಿ ತಿಳಿಸಿದರು.

ನಾಲ್ಕು ಸೋಂಕಿತ ವ್ಯಕ್ತಿಗಳನ್ನು ಬಳ್ಳಾರಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಸ್ಥಳಾಂತರಿಸಲಾಯಿತು. ಸೋಂಕಿತ ವ್ಯಕ್ತಿಗಳ ಮನೆಯಲ್ಲಿರುವ ಒಟ್ಟು 50 ಜನರನ್ನು ಮನೆ ಕ್ವಾರಟೈನ್ ಮಾಡಲಾಗಿದೆ. ಸೋಂಕಿತ ವ್ಯಕ್ತಿಗಳು ವಾಸಿಸುವ ಪ್ರದೇಶವನ್ನು ಕಂಟೈನ್ಮೆಂಟ್ ಜೋನ್ ಆಗಿ ಪರಿವತರ್ಿಸಿ, ಬ್ಯಾರಿಕೇಡ್ ಅಳವಡಿಸಿ ಸ್ಯಾನಿಟೈಜರ್ ಸಿಂಪರಣೆ ಮಾಡಿ ಹಾಗೂ ವೈರಸ್ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ರಾಘವೇಂದ್ರ ರಾವ್ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರೇಡ್2 ತಹಶೀಲ್ದಾರ್ ಮಲ್ಲೇಶಪ್ಪ, ಹಿರಿಯ ಆರೋಗ್ಯ ಸಹಾಯಕ ಕೆ.ಮಂಜುನಾಥ, ಕಂದಾಯ ನಿರೀಕ್ಷಕ ಬಸಲಿಂಗಪ್ಪ, ಆರ್.ಆರ್.ಟಿ ತಂಡ, ಆರೋಗ್ಯ ಸಿಬ್ಬಂದಿ, ಶಿಕ್ಷಣ ಇಲಾಖೆ ತಂಡ, ಗ್ರಾಮಲೇಕ್ಕಾಧಿಕಾರಿಗಳು, ಪೊಲೀಸ್ ಸಿಬ್ಬಂದಿ ಹಾಗೂ ಪುರಸಭೆ ಸಿಬ್ಬಂದಿ ಇದ್ದರು.

ಕುರುಗೋಡು ಪಟ್ಟಣ ಸಮೀಪದ ದಮ್ಮೂರ ಗ್ರಾಮದ ನಿವಾಸಿ 36 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಸೋಂಕಿತ ವ್ಯಕ್ತಿಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಕುರುಗೋಡು ತಹಶೀಲ್ದಾರ್ ರಾಘವೇಂದ್ರ ರಾವ್ ತಿಳಿಸಿದರು 

ಸುದ್ದಿ ಓದಿ