ಕೊರೊನಾ ಕರ್ಫ್ಯೂ: ಸಾರ್ವಜನಿಕರಿಂದ ನೈತಿಕ ಬೆಂಬಲ ವ್ಯಕ್ತ
ಸಿರುಗುಪ್ಪ 26: ಕೊರೊನಾ ಹಾವಳಿ ನಮ್ಮ ನಮ್ಮ ಆರೋಗ್ಯದ ರಕ್ಷಣೆಗೆ ಸ್ವಯಂ ಸಿದ್ಧರಾಗೋಣ ವಾರಾಂತ್ಯ ಕರ್ಫ್ಯೂ ಜನರ ಸಹಕಾರದೊಂದಿಗೆ ಯಶಸ್ವಿ ಯಾಗಿದೆ. ಸರಕಾರದ ಆದೇಶಕ್ಕೆ ಜನ ತಮಗೆ ಇದರಿಂದ ತೊಂದರೆ ಯಾದರೂ ನೈತಿಕ ಬೆಂಬಲ ನೀಡಿದ್ದಾರೆ ಎಂದು ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಅಶ್ರಫಿ ಸೌದಾಗರ್ ಜುಮ್ಮಾ ಮಸೀದಿ ಅಧ್ಯಕ್ಷ ಹಂಡಿ ಹುಸೇನ್ ಬಾಷಾ ಖತೀಬ್ ಜಹೀರುದ್ದೀನ್ ಬಾಬು ಜನಾಭಿಪ್ರಾಯ ಮುಖಂಡ ಎ ಅಬ್ದುಲ್ ನಬಿ ಅವರು ಅಭಿಪ್ರಾಯಪಟ್ಟರು.
ಆದರೆ ಸರಕಾರ ಇದನ್ನೇ ಮಾನದಂಡವಾಗಿಟ್ಟು ವಾರಪೂರ್ತಿ ಕರ್ಫ್ಯೂ ಹೇರಿದರೆ ಶ್ರೀ ಸಾಮಾನ್ಯನ ಬದುಕು ಮೂರಾಬಟ್ಟೆ ಯಾಗುತ್ತದೆ ಉಳಿದ ನ ಅತ್ಯಂತ ಕಟ್ಟುನಿಟ್ಟಾಗಿ ಕೊರೊನಾ ನಿಯಮಾವಳಿಯನ್ನು ಜಾರಿಗೊಳಿಸಿ ಜನರ ಬದುಕಿನ ಕಾಯಕಕ್ಕೆ ಅನುವು ಮಾಡಿಕೊಡಬೇಕು ಹಿಂದೆ ಲಾಕ್ಡೌನ್ ಜಾರಿಗೆ ತಂದಾಗ ಬಡವರು 1ಹೊತ್ತಿನ ಅನ್ನಕ್ಕಾಗಿ ಪರದಾಡಿದ್ದನ್ನು ನಾವು ನೋಡಿದ್ದೇವೆ ವಾಸ್ತವ ಹೀಗಿರುವಾಗ ಈ ಬಗ್ಗೆ ಗಮನ ಹರಿಸದ ಬೇಕಾದದ್ದು ಸರ್ಕಾರದ ನೈತಿಕ ಕರ್ತವ್ಯ ಎಂದು ಅಬ್ದುಲ್ ನಬಿ ನುಡಿದರು ಮೊಹಮ್ಮದ್ ಇಬ್ರಾಹಿಂ ಎ ಮೊಹಮ್ಮದ್ ರಫೀಕ್ ಮೊಹಮ್ಮದ್ ನೌಶಾದ್ ಅಲಿ ಬಿ ಜಿಲಾನ್ ಎ ಮುಹಮ್ಮದ್ ಹಾಜಿ ಇತರರು ಇದ್ದರು.