ಹಗರಿಬೊಮ್ಮನಹಳ್ಳಿ

ಧ್ವನಿ ವರ್ಧಕಗಳ ಮೂಲಕ ಸಾರ್ವಜನಿಕರಿಗೆ ಕೊರೊನ ಜಾಗೃತಿ

ಧ್ವನಿ ವರ್ಧಕಗಳ ಮೂಲಕ ಸಾರ್ವಜನಿಕರಿಗೆ ಕೊರೊನ ಜಾಗೃತಿ

ಹಗರಿಬೊಮ್ಮನಹಳ್ಳಿ 21: ಪಟ್ಟಣದ ತಾಲೂಕು ಕಚೇರಿಯಿಂದ ಪುರಸಭೆ ವಹನಗಳ ಮೂಲಕ ಹಾಗೂ ಟೂ ವ್ಹೀಲರ್‍ಗಳ ಮೂಲಕ ಭೀಭತ್ಸ ವಾತಾವರಣ ಸೃಷ್ಟಿಸುತ್ತಿರುವ ಮಹಾಮಾರಿ ಕೊರೊನ ಎರಡನೇ ಅಲೆಯ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಜಾಥಾ ಮಾಡಲಾಯಿತು.

ಈ ಸಂಧರ್ಭದಲ್ಲಿ ತಾಲೂಕು ದಂಡಾಧಿಕಾರಿ ಶರಣಮ್ಮ ಮಾತನಾಡಿ ಸಾರ್ವಜನಿಕರು ಅನಾವಶ್ಯಕವಾಗಿ ಹೊರ ಒಡಾಟ,ಗುಂಪು ಸಭೆ,ಸಮಾರಂಭಗಳನ್ನು ಬದಿಗೊತ್ತಿ ಸಾಮಾಜಿಕ ಅಂತರ,ಮುಖಕ್ಕೆ ಮಾಸ್ಕ್ ಸೇರಿದಂತೆ ರಾಜ್ಯ ಸರಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ದಂಡ ವಿಧಿಸುವಿಕೆ ಎಲ್ಲದಕ್ಕೂ ಪರಿಹಾರವಲ್ಲ ಮೊದಲು ನಾಗರೀಕಾ ಸಮಾಜ ನಿರ್ಮಾಣ ಮಾಡುವುದು ರಾಜ್ಯ ಸರಕಾರದ ನಿಯಮಗಳನ್ನು ಪಾಲಿಸಿ ಪ್ರಜ್ಞಾವಂತೆ ಪ್ರಜೆಯಿಂದ ಮಾತ್ರ ಹಳ್ಳಿಯಿಂದ ದಿಲ್ಲಿಯವರೆಗೂ ಕರೋನಾ ಸೊಂಕು ಹರಡದಂತೆ ಮಾಡಬಹುದಾಗಿದೆ, ಅಧಿಕಾರಿಗಳೂ ಸೇರಿದಂತೆ ಪೋಲಿಸರು ಪ್ರತಿಯೊಂದು ಗಲ್ಲಿ ಗಲ್ಲಿಗಳಲ್ಲಿ ಮಾಸ್ಕ್ ತಪಾಸಣೆ ಮಾಡುತ್ತಾ ಹೋಗುವ ಕಾರ್ಯಕ್ಕಿಂತ ಸಾರ್ವಜನಿಕರು ಈ ಮಾಹಾ ಮಾರಿಯ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಮುಂದಗಬೇಕು ಎಂದು ಸಾರ್ವಜನಿಕ ಪ್ರಜ್ಞೆಯ ಬಗ್ಗೆ ಒತ್ತಿ ಹೇಳಿದರು ಹಾಗೂ ಸಾರ್ವಜನಿಕರ ಸಹಕಾರದಿಂದ ಕರೋನಾ ಒಡಿಸಬಹುದಾಗಿದೆ ಎಂದರು.

ಈ ಸಂಧರ್ಭದಲ್ಲಿ ಯುವ ಶಕ್ತಿ ವೇದಿಕೆಯ ಅಧ್ಯಕ್ಷ ಸಂಚಿ ಶಿವಕುಮಾರ ಮಾತನಾಡಿ ಕರೋನಾ ಎರಡನೆ ಅಲೆಯಿಂದ ಸಾಕಷ್ಟು ಸವು ನೋವುಗಳು ಕಾಣುತ್ತಿದ್ದೆವೆ ಹಾಗೂ ಆಸ್ಪತ್ರೆಗಳಲ್ಲಿ ರೋಗಿಗಳ ಪರದಾಟ ತೀವ್ರವಾಗಿದೆ,ವೈರಸ್ ಹಳ್ಳಿಗಳಿಗೆ ಪ್ರವೇಶ ಪಡೆಯುವುದರ ಮುಂಚೆ ಪ್ರತಿಯೊಬ್ಬರೂ ಮಾಸ್ಕ್,ಸ್ಯಾನಿಟೈಸರ್,ಸಮಾಜಿಕ ಅಂತರ ಕಾಪಾಡಿಕೊಂಡರೆ ಅದುವೇ ಈ ವೈರಸ್‍ಗೆ ಪ್ರಥಮ ಚಿಕಿತ್ಸೆಯಾಗಿದೆ ಎಂದರು.

ಕರೋನಾ ಜಾಥವನ್ನು ತಹಶೀಲ್ದಾರ್ ಕಚೇರಿಯಿಂದ ಪ್ರಾರಂಭಿಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.ಈ ಸಂಧರ್ಭದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಸುದ್ದಿ ಓದಿ