ಕೋವಿಡ್ ಲಸಿಕೆ ಕಾರ್ಯಕ್ರಮ
ಬಳ್ಳಾರಿ 12: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿ. 12ರಂದು ಮಹಾವಿದ್ಯಾಲಯದ ಸಿಬ್ಬಂದಿ, 18ವರ್ಷ ಮೇಲ್ಪಟ್ಟ ವಿದ್ಯಾರ್ಥಿವರ್ಗದವರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಮ್ಸ್, ಬಳ್ಳಾರಿ ಇವರ ಸಹಯೋಗದೊಂದಿಗೆ ಕೋವಿಡ್ ಲಸಿಕೆಯನ್ನು ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪ್ರಾಂಶುಪಾಲ ಡಾ. ಟಿ. ಹನುಮಂತರೆಡ್ಡಿ, “ಇಲ್ಲಿಯವರಿಗೆ ರಾವ್ ಬಹದ್ದೂರ್ ವೈ ಮಹಾಬಲೇಶ್ವರ್ಪ ತಾಂತ್ರಿಕ ಮಹಾವಿದ್ಯಾಲಯದ ಮಕ್ಕಳಿಗೆ, ಉಪಾಧ್ಯಾಯ ಮಿತ್ರರಿಗೆ ಕೊರೊನಾ ಲಸಿಕೆ ನೀಡುವುದರಿಂದ, ಸುಮಾರು ಶೇ. 50ಲಸಿಕೆ ನೀಡುವುದರಲ್ಲಿ ಯಶಸ್ವಿಯಾಗಿದ್ದೇವೆ. ಯಾವುದೇ ಸಂಶಯವಿಲ್ಲದೇ ಧೈರ್ಯವಾಗಿ ನಿಮ್ಮ ದಿನನಿತ್ಯ ಕಾರ್ಯಕ್ರಮಗಳು ಮುಂದುವರಿಸಲು ಅನುಕೂಲವಾಗುತ್ತದೆ. ಎಲ್ಲರು ಆರೋಗ್ಯವಾಗಿರಬೇಕು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ, ಪೋಷಕರಿಗೆ, ಶುಭವಾಗಲಿ ” ಎಂದು ನುಡಿದರು.
ಈ ಕಾರ್ಯಕ್ರಮವನ್ನು ವೀ.ವಿ.ಸಂಘದ ಮಹಾವಿದ್ಯಾಲಯದ ಅಧ್ಯಕ್ಷರು ಹಾಗೂ ವೀ.ವಿ.ಸಂಘದ ಉಪಾಧ್ಯಕ್ಷ ಅಲ್ಲಂಚನ್ನಪ್ಪ, ವಿಜಯನಗರ ಕಾಲೇಜು, ಹೊಸಪೇಟೆಯ ಅಧ್ಯಕ್ಷ ಅಸುಂಡಿ ನಾಗರಾಜ, ವೀ.ವಿ.ಸಂಘದ ಆಜೀವ ಸದಸ್ಯರು ಸಂಗನಕಲ್ ಯುಥಿಸ್ಡರ ಕೊರ್ಲಗುಂದಿ ಬಸವನಗೌಡರು, ಶಿವಶಂಕರ ಗೌಡರು, ಪ್ರಾಂಶುಪಾಲ ಡಾ. ಟಿ. ಹನುಮಂತರೆಡ್ಡಿ, ಉಪಪ್ರಾಂಶುಪಾಲ ಡಾ. ಸವಿತಾ ಸೊನೋಳಿ, ಮಹಾವಿದ್ಯಾಲಯದ - ಲೀಡ್,ಎನ್.ಎಸ್.ಎಸ್., ರೆಡ್ಕ್ರಾಸ್-ವಿಭಾಗಗಳು, ಹಾಗು ಅವುಗಳ ಸಂಯೋಜಕ ಡಾ. ಚಿದಾನಂದ, ಶ್ರೀ.ಹೆಚ್.ವಿರೂಪಾಕ್ಷ ಗೌಡರು, ಶ್ರೀ ಸುರೇಶ್, ಮತ್ತು ತಂಡಗಳು ವಿಮ್ಸ್, ಬಳ್ಳಾರಿ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.