ಬಳ್ಳಾರಿ

ಅಂಗವಿಕಲರಿಗೆ ಕೋವಿಡ್ ಲಸಿಕೆ ಶಿಬಿರ

ಅಂಗವಿಕಲರಿಗೆ ಕೋವಿಡ್ ಲಸಿಕೆ ಶಿಬಿರ

ಬಳ್ಳಾರಿ 14: ಕರ್ನಾಟಕ ಸರ್ಕಾರದ ಆದೇಶದಂತೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇವರ ಸಹಯೋಗದೊಂದಿಗೆ ಬಳ್ಳಾರಿ ಗ್ರಾಮೀಣ ಪ್ರದೇಶ ಮೋಕ ಪ್ರಾಥಮಿಕ ಆರೋಗ್ಯ ಕೇಂದ್ರದ ವಣೆನೂರು ಉಪ ಕೇಂದ್ರದಲ್ಲಿ ಅಂಗವಿಲಕರಿಗೆ ವಿಶೇಷ ಕೋವಿಡ್ ಲಸಿಕೆ ಶಿಬಿರವನ್ನು ಹಮ್ಮಿಕೋಳ್ಳಲಾಗಿದೆ. ಈ ಶಿಬಿರದಲ್ಲಿ ಸುಮಾರು 30 ಜನ ಅಂಗವಿಕಲರಿಗೆ ಮತ್ತು ಅವರ ಉಸ್ತುವಾರಿ ನೋಡಿಕೊಳ್ಳು ಜನರಿಗೆ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 

ಈ ಶಿಬಿರವನ್ನು ನಡೆಸಲು ರೆಡ್ ಕ್ರಾಸ್ ಸಂಸ್ಥೆಯ ಸರ್ವ್‌ ವಾಲಿಂಟೀಯರ​‍್ಸ‌ ಸಹಕರಿಸಿದರು, ಈ ಶೀಬಿರದಲ್ಲಿ ಮೋಕ, ವಣೆನೂರು ಮತ್ತು ಸುತ್ತಮುತ್ತಲಿನ ಗ್ರಾಮದ ಅಂಗವಿಕಲರ ಜನರು ಲಸಿಕೆಯನ್ನು ಪಡೆದರು.  ವಿ.ಉಮಾ ಮಹೇಶ್ವರಿ ಸರ್ವ್‌ ವಾಲೇಮಟಿಯರ್ ಮತ್ತು ತೇಜಸ್ ಅಗರಾ​‍್ವಲ್  ಇವರು ಈ ಶಿಬಿರವನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದರು. 


ಸುದ್ದಿ ಓದಿ