ಬಳ್ಳಾರಿ

ಕೋವಿಡ್ ಪಾಸಿಟಿವ್ ಸುಳ್ಳು ವರದಿ ನೀಡಿಕೆ: ಕಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಅಮಾನತು

ಕೋವಿಡ್ ಪಾಸಿಟಿವ್ ಸುಳ್ಳು ವರದಿ ನೀಡಿಕೆ: ಕಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಅಮಾನತು

ಬಳ್ಳಾರಿ 20: ಕೋವಿಡ್ ಪಾಸಿಟಿವ್ ಸುಳ್ಳು ವರದಿ ನೀಡಿದ ಬಳ್ಳಾರಿ ಜಿಲ್ಲೆಯ ಕುರುಗೋಡು ಸಮುದಾಯ ಆರೋಗ್ಯ ಕೇಂದ್ರದ ಕಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ. ಪಾಂಡುರಂಗ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಡಿಎಚ್‌ಒ ಡಾ. ಜನಾರ್ಧನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಬಳ್ಳಾರಿ ಜಿಲ್ಲೆಯ ಕುರುಗೋಡು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಪಾಂಡುರಂಗ ಅವರು ಎರಡು ತಿಂಗಳುಗಳ ಹಿಂದೆ ಮೇ 19ರಂದು ಸಾಮಾನ್ಯ ಮರಣ ಹೊಂದಿದ ಮಹಿಳೆಯೊಬ್ಬರ ಕುರಿತು ಜು.17ರಂದು ಕೋವಿಡ್ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿದೆ ಎಂದು ಸುಳ್ಳು ವರದಿ ನೀಡಿರುವ ಮತ್ತು ಕರ್ತವ್ಯ ಲೋಪ ಹಿನ್ನಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಗಳು (ವರ್ಗೀಕರಣ ನಿಯಂತ್ರಣ ಮತ್ತು ಅಪೀಲು) 1957 ರ ಅನ್ವಯ ನಿಯಮಾವಳಿ 10 (1) ರ ಪ್ರಕಾರ ಪ್ರದತ್ತ ಅಧಿಕಾರ ಚಲಾಯಿಸಿ ಅಮಾನತ್ತು ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ. 

ಹಿನ್ನಲೆ: ಜು.17ರಂದು ಜಿಲ್ಲಾ ಸರ್ವೇಕ್ಷಣಾ ಘಟಕದಿಂದ ಕುರುಗೋಡು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ “ಎಸ್‌ಆರ್‌ಎಫ್‌ಐಡಿ ಸಂಖ್ಯೆ 2952800858845/2952800858767 ಸಂಖ್ಯೆಯಲ್ಲಿ ರಾ​‍್ಯಟ್ ಪಾಸಿಟಿವ್ ಎಂದು ಹೆಚ್‌.ಶಂಕ್ರಮ್ಮ ಇವರ ವರದಿ ಬಂದಿದ್ದು ಇವರ ದೂರವಾಣಿ ಸಂಖ್ಯೆ 9035998310 ಇವರನ್ನು ಸಂಪರ್ಕಿಸಿದಾಗ ಕುಟುಂಬದ ಸದಸ್ಯರು 7 ದಿನಗಳ ಹಿಂದೆ ಮೃತ ಪಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ”.  

ವಿಷಯವನ್ನು ಕೂಲಂಕುಷವಾಗಿ ಪರೀಶೀಲಿಸಿ ಎಂದು ತಿಳಿಸಿರುತ್ತಾರೆ.  

ನಂತರ ವೈದ್ಯಾಧಿಕಾರಿಗಳು ಕಿರಿಯ ಪ್ರಾಥಮಿಕ ಆರೋಗ್ಯ ಅಧಿಕಾರಿ ರೇಣುಕ ಅವರಿಗೆ ಮಾಹಿತಿ ಪಡೆದುಕೊಂಡು ಬರುವಂತೆ ತಿಳಿಸಿದಾಗ ಹೆಚ್‌. ಶಂಕ್ರಮ್ಮ ಇವರು ಕ್ಯಾದಿಗೆಹಾಳ ಗ್ರಾಮದವರಾಗಿದ್ದು ಕುಟುಂಬದ ಸದಸ್ಯರನ್ನು ವಿಚಾರಿಸಲಾಗಿ ಮೇ 19ರಂದು ಸಹಜವಾಗಿ ಮರಣ ಹೊಂದಿರುತ್ತಾರೆಂದು ತಿಳಿಸಿದ ಮಾಹಿತಿಯನ್ನು ವೈದ್ಯಾಧಿಕಾರಿಗಳಿಗೆ ವರದಿ ಮಾಡಿರುತ್ತಾರೆ.  

ನಂತರ ಜು.19ರಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳು, ಕುರುಗೋಡು ತಾಲ್ಲೂಕ ಆರೋಗ್ಯ ಅಧಿಕಾರಿಗಳು, ತಾಲ್ಲೂಕ ಕೋವಿಡ್‌-19 ನೋಡಲ್ ಅಧಿಕಾರಿಗಳು, ಮೈಕ್ರೋ ಬಯೋಲಾಜಿಸ್ಟ್‌ ಹಾಗೂ ಜಿಲ್ಲಾ ಸರ್ವೇಕ್ಷಣಾ ಕಛೇರಿ ಡಾಟಾ ಮ್ಯಾನೇಜರ್ ಸಮ್ಮುಖದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ವಿಚಾರಿಸಿದಾಗ ಆರಂಭದಲ್ಲಿ ತಾವು ಯಾವುದೇ ಕೋವಿಡ್ ಪರೀಕ್ಷೆಯನ್ನು ಜು.17ರಂದು ಮಾಡಿಲ್ಲವೆಂದು ತಿಳಿಸಿದ್ದು ಸಂಶಯ ಬಂದು ಪಾಂಡುರಂಗ ಅವರ ಮೊಬೈಲ್ ಪಡೆದು ಕೋವಿನ್ ತಂತ್ರಾಂಶ  ಪರೀಶೀಲಿಸಿದಾಗ ಜು.17ರಂದು ಸದರಿ ತಂತ್ರಾಂಶದಲ್ಲಿ ನೊಂದಾಯಿಸಲಾದ ಮೊಬೈಲ್ ಸಂಖ್ಯೆ 9743619829 ಪಾಂಡುರಂಗ ಅವರದ್ದೇ ಆಗಿದ್ದು ಇದರ ಮೂಲಕ ಎಸ್‌ಆರ್‌ಎಫ್‌ಐಡಿ ಸಂಖ್ಯೆ 2952800858845/2952800858767 ಕ್ರಿಯೇಟ್ ಆಗಿದ್ದು ಅವುಗಳಲ್ಲಿ ಹೆಚ್ ಶಂಕ್ರಮ್ಮಳ ಹೆಸರು ಕಂಡುಬಂದಿರುತ್ತದೆ.  

ಈ ಎಲ್ಲವುಗಳನ್ನು ಕೂಲಂಕುಷವಾಗಿ ಪರೀಶೀಲಿಸಿದ ವಿಚಾರಣ ತಂಡವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ವಿಚಾರಣ ಮಾಹಿತಿ ನೀಡಿದ ನಂತರ ಜು.17ರಂದು ಸ್ವ್ಯಾಬ್ ಟೆಸ್ಟ್‌ ಮಾಡುವ ಕರ್ತವ್ಯ ಇಲ್ಲದೇ ಇದ್ದರೂ ಮದ್ಯಾಹ್ನ 12.15ರಿಂದ 12.30 ಗಂಟೆಯ ಅವಧಿಯಲ್ಲಿ ಪಾಂಡುರಂಗ ಅವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುವ ಮತ್ತು ಸರ್ಕಾರಕ್ಕೆ ಮೋಸ ಮಾಡುವ ಉದ್ದೇಶದಿಂದ ಸುಳ್ಳು ವರದಿ ನೀಡಿರುವ ಕಾರಣ ಕ್ರಮಕೈಗೊಳ್ಳಲು ಮತ್ತು ಸದರಿ ಅವರ ವಿರುಧ್ದ ಕೇಸ್ ದಾಖಲಿಸುವಂತೆ ಸೂಚಿಸಿದ ನಂತರ ಜು.19ರಂದು ರಾತ್ರಿ ಕುರುಗೋಡು ಪೋಲೀಸ್ ಠಾಣೆಯಲ್ಲಿ ವೈದ್ಯಾಧಿಕಾರಿಗಳು ನೀಡಿದ ದೂರಿನ ಅನ್ವಯ ಠಾಣೆ ಗುನ್ನೆ ಸಂಖ್ಯೆ:168/2021 ಕಲಂ 409 420 477 (ಂ) ಋಅ ರಿತ್ಯಾ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ. 

ಸದರಿ ಸಿಬ್ಬಂದಿಯವರನ್ನು ನಿಯಮಾನುಸಾರ ಕರ್ತವ್ಯದಿಂದ ಅಮಾನತ್ತು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. 

ಸುದ್ದಿ ಓದಿ