ಕೊರೊನಾ ಎರಡನೇ ಅಲೆ: ಅಂಚೆ ಕಚೇರಿಗೆ ಸೈನಿಟೈಸರ್ ಸಿಂಪಡಣೆ
ಹಗರಿಬೊಮ್ಮನಹಳ್ಳಿ.ಎ.28 : ಪಟ್ಟಣದ ರಾಮನಗರದ ಪೋಸ್ಟ್ ಆಫೀಸ್ ಕೋವಿಡ್ 2ನೇ ಅಲೆಯ ಅಬ್ಬರಕ್ಕೆ ಮುಂಜಾಗ್ರತಾ ಕ್ರಮವಾಗಿ ಪೋಸ್ಟ್ ಮಾಸ್ಟರ್ ಕಿರಣ್ ಅವರು ಬುಧವಾರ ಪುರಸಭೆ ಸಿಬ್ಬಂದಿಯಿಂದ ಸಂಪೂರ್ಣವಾಗಿ ಸೈನಿಟೈಸ್ ಮಾಡಿಸಿದರು.
ಇ ವೇಳೆ ಪೋಸ್ಟ್ ಮಾಸ್ಟರ್ ಕಿರಣ್ ಪತ್ರಿಕೆಯೊಂದಿಗೆ ಮಾತನಾಡಿ ಕಳೆದ ಕೆಲ ದಿನಗಳಿಂದ ರಜೆಯಲ್ಲಿದ್ದ ನಮ್ಮ ಸಿಬ್ಬಂದಿಗೆ ಕರೋನಾ ಸೊಂಕು ದೃಢವಾಗಿದೆ ಮುಂಜಾಗ್ರತಾ ಕ್ರಮವಾಗಿ ಸಂಪೂರ್ಣ ಆಫೀಸ್ಗೆ ಸೈನಿಟೈಸರ್ ಸಿಂಪಡಣೆ ಮಾಡಿಸಲಾಗುತ್ತಿದೆ ಎಂದರು.
ನಮ್ಮ ಅಂಚೆ ಕಚೇರಿಗೆ ಬರುವವರ ಸಂಖ್ಯೆ ಹೆಚ್ಚಾಗಿದ್ದ ಕಾರಣ ಯವುದೇ ಅಪಾಯಕಾರಿ ಬೆಳವಣಿಗೆಗೆ ಕಾರಣವಾಗಬಾರದೆಂದು ಮುಂಜಾಗ್ರತಾ ಕ್ರಮವಾಗಿ ಸಿಬ್ಬಂದಿಯ ಜೊತೆಗೂಡಿ ಕಚೇರಿಗೆ ದ್ರವ ಸಿಂಪಡಣೆ ಮಾಡಿಸುತ್ತಿದ್ದೆವೆ, ಕಚೇರಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಗ್ರಾಹಕರಿಗೆ ಪ್ರತ್ಯೇಕ ಬಾಕ್ಸ್ ವೆವಸ್ಥೆಯನ್ನು ಮಾಡಲಾಗಿದೆ, ಕಚೇರಿ ಒಳ ಬರುತ್ತಿದ್ದಂತೆ ಕೈಗಳನ್ನು ಸೈನಿಟಸ್ ಮಾಡಿಕೊಳ್ಳಲು ಸೈನಿಟೈಸರ್ ವೆವಸ್ಥೆ ಮಾಡಲಾಗಿದೆ ಹಾಗೂ ಪ್ರತಿಯೊಬ್ಬರೂ ಅವಶ್ಯಕವಾಗಿ ಮಾಸ್ಕ್ ಧರಿಸಿಯೇ ಬರಬೇಕು ಇಲ್ಲದಿದ್ದರೆ ಅವರನ್ನು ಕಚೇರಿಯ ಒಳ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದರು.
ಈ ಸಂಧರ್ಭದಲ್ಲಿ ಪೂಸ್ಟ್ಮ್ಯಾನ್ ಹನುಮೇಶ್, ಸಿಬ್ಬಂದಿ ಅಂಬೇಕರ್,ಪುರಸಭೆ ಸಿಬ್ಬಂದಿ ಇದ್ದರು.