ಕೋವಿಡ್-19 ಲಸಿಕಾ ಕಾರ್ಯಕ್ರಮ
ಬಳ್ಳಾರಿ 30: 2021-22 ನೇ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು ಶ್ರೀಗುರು ತಿಪ್ಪೇರುದ್ರ ಮಹಾವಿದ್ಯಾಲಯದ ಅವರಣದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಕೋವಿಡ್-19 ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತ್ತು. ಈ ಲಸಿಕಾ ಕಾರ್ಯಕ್ರಮವನ್ನು ಡಾ.ದೇವೇಂದ್ರ ಆಚಾರ್ ಇವರು ಗಿಡಕ್ಕೆ ನೀರು ಹಾಕುವುದರೊಂದಿಗೆ ಉದ್ಘಾಟನೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಎನ್.ರುದ್ರಪ್ಪರವರು “ಆರೋಗ್ಯವೇ ಮಹಾಭಾಗ್ಯ” ಎಲ್ಲಾ ಸಾರ್ವಜನಿಕರು ಕೋವಿಡ್-19 ಲಸಿಕೆಯನ್ನು ಹಾಕಿಸಿಕೊಂಡು ಭಾರತ ದೇಶವನ್ನು ಕೊರೋನ ಮುಕ್ತವಾಗಿ ಮಾಡೋಣ ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಜಿ.ನಾಗಾರಾಜ, ಕೋವಿಡ್-19 ವಾರಿಯರ್ ಹಾಗೂ ಮ್ಯಾನೇಜ್ಮೆಂಟ ಮುಖ್ಯಸ್ಥರಾದ ಹೆಚ್.ಆರ್.ಬಾಲನಾಗಾರಾಜ್,ಎಸ್.ಜಿ.ಟಿ.ಪಿ.ಯು. ಕಾಲೇಜಿನ ಪ್ರಾಚಾರ್ಯರಾದ ಜಿ.ತಿಪ್ಪೇರುದ್ರ, ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಪಿ.ಆರ್.ಕೆ ಕಾಲೇಜು ಮತ್ತು ಸಾಯಿ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದ ಉಪಯೋಗ ಪಡೆದರು.