ಕೊವೀಡ್-19 ಸಹಾಯ ಹಸ್ತ ಅಭಿಯಾನ
ಲೋಕದರ್ಶನ ವರದಿ
ಹೊಸಪೇಟೆ 24: ರಾಜ್ಯ ಕಾಂಗ್ರೆಸ್ ಪಕ್ಷವು ಕೊವೀಡ್ನಿಂದ ಮೃತಪಟ್ಟ ಹಾಗೂ ಸೋಂಕಿಗೆ ಒಳಗಾದ ಕುಟುಂಬಕ್ಕೆ ಪರಿಹಾರ ಒದಗಿಸಲು ಮಾಹಿತಿ ಸಂಗ್ರಹಿಸಲು ದಿ. 24ರಂದು ವಿಜಯನಗರ ಕ್ಷೇತ್ರದ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎನ್. ಮಹಮ್ಮದ್ ಇಮಾಮ್ ನಿಯಾಜಿ ನೇತೃತ್ವದಲ್ಲಿ ಕೊವೀಡ್ -19 ಸಹಾಯ ಹಸ್ತ ಅಭಿಯಾನವನ್ನು ಹಮ್ಮಿಕೊಂಡರು.
ನಗರದ ವಿವಿಧ ವಾರ್ಡ್ಗಳಾದ 6ನೇ ವಾರ್ಡ್ ಹಂಪಿ ರೋಡ್, 15ನೇ ವಾರ್ಡ್ ಮೆಹಬೂಬ್ ನಗರ, ಇಂದಿರಾ ನಗರ, ನಗರಗಳಿಗೆ, ಸ್ಥಳೀಯ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಹೋಗಿ ಕೊವೀಡ್ ನಿಂದ ಮೃತಪಟ್ಟ ಹಾಗೂ ಸೋಂಕಿಗೆ ಒಳಗಾಗಿ ಸಂಕಷ್ಟಕ್ಕೆ ತುತ್ತಾದ ಕುಟುಂಬಗಳಿಗೆ ಭೇಟಿ ನೀಡಿ ಅವರಿಗೆ ಸಂತ್ವಾನ ಹೇಳುವ ಮೂಲಕ ಕುಟುಂಬಗಳ ಮಾಹಿತಿಯನ್ನು ಸಂಗ್ರಹಿಸಿ ಕೆಪಿಸಿಸಿ ಕಳುಹಿಸಿ ಇಂತಹ ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಲು ಪಕ್ಷವು ಪ್ರಾಮಾಣಿಕ ಪ್ರಯತ್ನ ನಡೆಸುತ್ತದೆ ಎಂದು ಹೇಳಿದರು.
ಪಕ್ಷದ ಮುಖಂಡರು ಪದಾಧಿಕಾರಿ ರಾಮನಗೌಡ, ಎಸ್.ಬಿ.ಮಂಜುನಾಥ್,ಸಿ.ಆರ್.ಭರತ್ ಕುಮಾರ್, ತೇಜಾನಾಯ್ಕ್, ವಿಜಯ ಕುಮಾರಿ್ಲಂಗಣ್ಣ, ಇಂದುಮತಿ, ಗೀತಾ, ಮಂಜುಳ, ಗಂಗಮ್ಮ, ಅಣ್ಣಾಮಲೈ, ಖದರ್ ಭಾಷ, ಹಾಗೂ ಕಾರ್ಯಕರ್ತರು ಅಭಿಯಾನದಲ್ಲಿ ಭಾಗವಹಿಸಿದ್ದರು.