ಬಳ್ಳಾರಿ

ನಗರದ ವಿವಿಧೆಡೆ ಕೋವ್ಯಾಕ್ಸಿನ್ ಹಾಗೂ ಕೋವೀಶೀಲ್ಡ್‌ ಕಾರ್ಯಕ್ರಮ

ನಗರದ ವಿವಿಧೆಡೆ ಕೋವ್ಯಾಕ್ಸಿನ್ ಹಾಗೂ ಕೋವೀಶೀಲ್ಡ್‌ ಕಾರ್ಯಕ್ರಮ

ಬಳ್ಳಾರಿ 27: ಕೋವಿಡ್‌-19 ಮಹಾಮಾರಿಯಿಂದ ಮುಕ್ತಗೊಳಿಸಲು ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆ ಸನ್ನದ್ಧವಾಗಿದ್ದು ಇಂದು ನಗರದ ವಿವಿಧೆಡೆ ಕೋವ್ಯಾಕ್ಸಿನ್ ಮತ್ತು ಕೋವೀಶೀಲ್ಡ್‌ ಕಾರ್ಯಕ್ರಮ ಜರುಗಿತು. 

ಮಿಲ್ಲರ್ ಪೇಟೆಯ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಗೆ 500 ಕೋವ್ಯಾಕ್ಸಿನ್, 200 ಕೋವೀಶೀಲ್ಡ್‌,  ಇಂದಿರಾನಗರದ ಅಂಬೇಡ್ಕರ್ ಸರ್ಕಾರಿ ಪ್ರಾಥಮಿಕ ಶಾಲೆಗೆ 250 ಕೋವೀಶೀಲ್ಡ್‌,  ರಾಮಾಂಜಿನೇಯ ನಗರದ ಸರ್ಕಾರಿ ಪ್ರಾಥಮಿಕ ಶಾಲೆಗೆ 350 ಕೋವ್ಯಾಕ್ಸಿನ್, ವಡ್ಡರಬಂಡಾ ಪ್ರದೇಶದ ಸರ್ಕಾರಿ ಶಾಲೆ ಸೇರಿದಂತೆ ವಿವಿಧೆಡೆ ಸಾರ್ವಜನಿಕರಿಗೆ ಕೋವಿಡ್‌-19 ಪ್ರಥಮ ಹಾಗೂ ದ್ವಿತೀಯ ಲಸಿಕೆಗಳನ್ನು ಹಾಕಲಾಯಿತು.  

ಮಿಲ್ಲರ್ ಪೇಟೆಯ ನಿವಾಸಿಗಳಿಗೆ ಪಾಲಿಕೆ ಸದಸ್ಯ ಸಿಎಂ ಇಬ್ರಾಹಿಂ ಬಾಬು, ಇಂದಿರಾನಗರ ನಿವಾಸಿಗಳಿಗೆ ಪಾಲಿಕೆ ಸದಸ್ಯ ವಿ.ಶ್ರೀನಿವಾಸ ಮಿಂಚು ಅವರು ನಾಗರಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ದೇವಿನಗರದಲ್ಲಿ 350 ಕೋವ್ಯಾಕ್ಸಿನ್, ಮಾರುತಿ ಕಾಲೋನಿಯ ಯೋಗ ಶಾಲೆಗೆ 350 ಕೋವ್ಯಾಕ್ಸಿನ್, ನಯಾಮಿ ಶಾಲೆಗೆ 350 ಕೋವ್ಯಾಕ್ಸಿನ್, ವಿದ್ಯಾನಗರದ ನಂದಾ ರೆಸಿಡೆನ್ಷಿಯಲ್ ಶಾಲೆಯಲ್ಲೂ ಲಸಿಕಾ ಕಾರ್ಯಕ್ರಮ ಮುಂದುವರಿದಿದ್ದು ಡಾ.ನರಸಿಂಹಮೂರ್ತಿ, ಡಾ.ಸುಷ್ಮಿತಾ, ಡಾ.ಸಾಯಿ ವೃತಿಕಾ ರೆಡ್ಡಿ, ಡಾ.ಹರ್ಷಿತಾ ಎಂ., ಡಾ.ಕಾಶಿ ಪ್ರಸಾದ್ ಸೇರಿದಂತೆ ಆಶಾ ಕಾರ್ಯಕರ್ತೆಯರಾದ ಸುನೀತಾ ಮತ್ತು ತನುಜಾ ಮತ್ತು ಆರೋಗ್ಯ ಸಿಬ್ಬಂದಿಯವರು ಸಾವಿರಾರು ಜನರಿಗೆ ಲಸಿಕೆ ಹಾಕಿದರು. 


ಸುದ್ದಿ ಓದಿ