ಬಳ್ಳಾರಿ

ಕೋವಿಡ್‌: ವೈದ್ಯಕೀಯ ಸೌಲಭ್ಯಗಳನ್ನು ವಿಸ್ತರಿಸಲು ಆಗ್ರಹಿಸಿ ಆನ್‌ಲೈನ್ ಪ್ರತಿಭಟನೆ

ಕೋವಿಡ್‌: ವೈದ್ಯಕೀಯ ಸೌಲಭ್ಯಗಳನ್ನು ವಿಸ್ತರಿಸಲು ಆಗ್ರಹಿಸಿ ಆನ್‌ಲೈನ್ ಪ್ರತಿಭಟನೆ

ಬಳ್ಳಾರಿ 20: ಇಂದು ಎಸ್‌ಯುಸಿಐ ಜಿಲ್ಲಾ ಸಮಿತಿಯಿಂದ ಬಳ್ಳಾರಿ ಜಿಲ್ಲೆಯ ಕೋವಿಡ್‌-19 ಪರಿಸ್ಥಿತಿ ನಿರ್ವಹಣೆಗೆ  ಆಗ್ರಹಿಸಿ ಆನ್ ಲೈನ್ ಪ್ರತಿಭಟನೆ ಹಮ್ಮಿಕೊಂಡು ಜಿಲ್ಲಾ ಅಧಿಕಾರಿಗಳಿಗೆ ಮನವಿ ಪತ್ರವನ್ನು ಮಾಸ್ ಇ-ಮೇಲ್ ಮೂಲಕ ಸಲ್ಲಿಸಲಾಯಿತು  

ಬೇಡಿಕೆಗಳ ಫಲಕ ಹಿಡಿದು ವಿದ್ಯಾರ್ಥಿ-ಯುವಜನರು, ಮಹಿಳೆಯರು ರೈತ-ಕಾರ್ಮಿಕರು, ವೃದ್ದರು ಭಾಗವಹಿಸಿದ್ದರು.  

ಬಳ್ಳಾರಿ ಜಿಲ್ಲೆಯಾದ್ಯಂತ ದಿನಗಳೆದಂತೆ ಕೋವಿಡ್ ಸೋಂಕಿತರ ಸಂಖ್ಯೆ ಉಲ್ಬಣಗೊಳ್ಳತ್ತಿದೆ. ರೋಗಕ್ಕೆ ಬಲಿಯಾಗಿ ಮರಣಹೊಂದುತ್ತಿರುವವರ ಸಂಖ್ಯೆ ಸಹ ಹೆಚ್ಚುತ್ತಲೇ ಇದೆ. ದಿನಪ್ರತಿ 1500ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದ್ದರೆ, ಕಳೆದ ಕೇವಲ 8 ದಿನದಲ್ಲಿ 156 ಸಾವುಗಳಾಗಿವೆ. ಇದು ಅಧಿಕೃತ ಅಂಕಿ ಅಂಶವಾದರೆ, ಅನಧಿಕೃತವಾಗಿ ಅದೆಷ್ಟು ಸಾವು-ನೋವುಗಳಾಗುತ್ತಿವೆಯೋ ತಿಳಿಯದು. ಈ ದುಸ್ಥಿತಿಗೆ ಮೂಲಕಾರಣ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಗೆ ಅನುಗುಣವಾಗಿ ವೈದ್ಯಕೀಯ ಸೌಲಭ್ಯಗಳಲ್ಲವೆನ್ನುವುದು ಪ್ರಶ್ನಾತೀತ ಸತ್ಯವಾಗಿದೆ. 

ಕಳೆದ ವರ್ಷದ ಲಾಕ್‌-ಡೌನ್ ನಂತರ, ಬಹುಸಂಖ್ಯಾತ ಮದ್ಯಮ ವರ್ಗ ಮತ್ತು ಬಡಜನತೆಯು, ಉದ್ಯೋಗವಿಲ್ಲದೆ, ಕನಿಷ್ಠ ಜೀವನ ಸಾಗಿಸಲು ಯಾವುದೇ ಆದಾಯವಿಲ್ಲದೆ, ಅತ್ಯಂತ ಅಭದ್ರತೆಯಲ್ಲಿದ್ದರು. ಜನತೆಯು ಇದರಿಂದ ಚೇತರಿಸಿಕೊಳ್ಳುವುದಕ್ಕೆ ಮುನ್ನ ಎರಡನೆಯ ಬಾರಿ ಬಂದ ಕೋವಿಡ್ ಅಲೆಯಿಂದ ತತ್ತರಿಸಿ ಹೋಗಿದ್ದಾರೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿ ಜೀವನ ವೆಚ್ಚ ಅತ್ಯಂತ ದುಬಾರಿಯಾಗಿರುವ ಈ ಕಾಲದಲ್ಲಿ ಜನತೆ ಬದುಕುಳಿಯಲು ಹರಸಾಹಸ ಮಾಡಬೇಕಾಗಿದೆ. ಈ ದುಸ್ಥಿತಿಯಲ್ಲಿ ಕೋವಿಡ್ ಸೋಂಕಿತರಾದರೆ ಹಣ ಎಲ್ಲಿಂದ ತರಬೇಕು, ಮನೆಯಲ್ಲಿ ದುಡಿದು ಹಾಕುವ ವ್ಯಕ್ತಿಯೇ ಬಲಿಯಾದರೆ ನಮ್ಮ ಗತಿಯೇನು? ಎಂದು ಸದಾ ಭೀತಿಯಲ್ಲಿ ಜನರು ಜೀವನ ನಡೆಸಬೇಕಾಗಿದೆ. 

ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯಾದ್ಯಂತ ದಿನಂಪ್ರತಿ ಹೆಚ್ಚುತ್ತಿರುವ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ವೈದ್ಯಕೀಯ ಸೌಲಭ್ಯಗಳನ್ನು ವಿಸ್ತರಿಸಲು, ಮತ್ತಷ್ಟು ಉತ್ತಮಗೊಳಿಸಲು, ಆಗ್ರಹಿಸಿ ನಡೆಯುತ್ತಿರುವ ಈ ಆನ್ ಲೈನ್ ಚಳುವಳಿಯಲ್ಲಿ ಎಲ್ಲಾ ಜನತೆ ಭಾಗವಹಿಸಿ, ಸರ್ಕಾರದ ಮೇಲೆ ಒತ್ತಡ ಹೇರುವಂತೆ ಎಸ್‌ಯುಸಿಐ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕಾಮ್ರೇಡ್ ರಾಧಾಕೃಷ್ಣ ಉಪಾದ್ಯ ಅವರು ಕರೆ ನೀಡಿದರು 

ಬಳ್ಳಾರಿ ನಗರ ಹಾಗೂ ತಾಲ್ಲೂಕುಗಳಲ್ಲಿ ಅಗತ್ಯವಿರುವಷ್ಪು ಆಕ್ಸಿಜನ್ ಬೆಡ್, ಐಸಿಯು ವಾರ್ಡ್‌, ವೆಂಟಿಲೇಟರ್ ಬೆಡ್‌ಗಳನ್ನು ಹೆಚ್ಚಿಸಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಿ. ಸಭಾಂಗಣ, ಕಲ್ಯಾಣ ಮಂಟಪಗಳನ್ನು ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನಾಗಿ ಪರಿವರ್ತಿಸಿ. ಪಿ.ಹೆಚ್‌.ಸಿ(ಪ್ರಾಥಮಿಕ ಆರೋಗ್ಯ ಕೇಂದ್ರ), ಸಿ.ಹೆಚ್‌.ಸಿ(ಸಮುದಾಯ ಆರೋಗ್ಯ ಕೇಂದ್ರ) ಮಟ್ಟದಲ್ಲೂ ಆಕ್ಸಿಜನ್ ಬೆಡ್‌ಗಳನ್ನು ಆರಂಭಿಸಿ. ಇದಕ್ಕೆ ಅಗತ್ಯವಿರುವ ಸಿಬ್ಬಂದಿಯನ್ನು ನೇಮಕ ಮಾಡಿ, ಮೂಲ ಸೌಕರ್ಯ ಒದಗಿಸಿ. ಖಖಿಕಅಖ ಪರೀಕ್ಷೆಯ ಫಲಿತಾಂಶವನ್ನು ಒಂದೇ ದಿನದಲ್ಲಿ ನೀಡುವಂತೆ ಕ್ರಮ ಕೈಗೊಳ್ಳಿ. ಎಲ್ಲರಿಗೂ ಉಚಿತ ಲಸಿಕೆ ನೀಡಲು ತುರ್ತು ಕ್ರಮ ಕೈಗೊಳ್ಳಿ. ಕೋವಿಡ್ ರೋಗಿಗಳನ್ನು ಸಾಗಿಸಲು ಅಗತ್ಯವಿರುವಷ್ಟು ಆಂಬ್ಯುಲೆನ್ಸ್‌ಗಳ ಸಂಖ್ಯೆ ಹೆಚ್ಚಿಸಿ. ಎಂಬ ಬೇಡಿಕೆಗಳ ಈಡೇರಿಕೆಗೆ ಎಸ್‌ಯುಸಿಐ ಜಿಲ್ಲಾ ಸಮಿತಿ ಸದಸ್ಯ ಡಾ.ಎನ್ ಪ್ರಮೋದ್ ನೇತ್‌ೃತ್ವದಲ್ಲಿ ಒತ್ತಾಯಿಸಲಾಯಿತು. 


ಸುದ್ದಿ ಓದಿ