35ನೇ ವಾರ್ಡ್ನಲ್ಲಿ ಕೋವೀಶೀಲ್ಡ್ ಲಸಿಕೆ ಅಭಿಯಾನ
ಬಳ್ಳಾರಿ 27: ನಗರದ 35ನೇ ವಾರ್ಡ್ನ ಮಹಾನಗರ ಪಾಲಿಕೆ ಸದಸ್ಯ ವಿ ಶ್ರೀನಿವಾಸ್ (ಮಿಂಚು) ಇವರ ನೇತೃತ್ವದಲ್ಲಿ ನಾರಾ ಸೂರ್ಯನಾರಾಯಣ ರೆಡ್ಡಿಯವರ ಸಹಕಾರದಿಂದ ವಾರ್ಡ್ನಲ್ಲಿನ 18 ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರಿಗೆ ಕೋವೀಶೀಲ್ಡ್ ಒಂದನೆ ಮತ್ತು ಎರಡನೇ ಡೋಸ್ ಲಸಿಕೆ ನೀಡುವ ಅಭಿಯಾನವನ್ನು ಕೊಳಗಲ್ಲು ರಸ್ತೆಯ ಇಂದಿರಾನಗರದ ಡಾ. ಅಂಬೇಡ್ಕರ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿ ಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಮಿಂಚು ಶ್ರೀನಿವಾಸ್ ಮಾಧ್ಯಮದ ಜೊತೆ ಮಾತನಾಡಿ, ಮಹಾಮಾರಿ ಕೋವಿಡ್ ರೋಗಕ್ಕೆ ಮುಂದಿನ ದಿನಗಳಲ್ಲಿ ನಮ್ಮ ವಾರ್ಡ್ನ ಯಾರೊಬ್ಬರು ತುತ್ತಾಗಬಾರದೆಂಬ ಮುಖ್ಯ ಉದ್ದೇಶದಿಂದ ಈ ಲಸಿಕೆ ಅಭಿಯಾನವನ್ನು ನಮ್ಮ ವಾರ್ಡ್ನಲ್ಲಿ ಹಮ್ಮಿಕೊಳ್ಳಲಾಗಿದೆ. ಅದರಂತೆ ನಾನು ಮತ್ತು ನನ್ನ ಸಹಚರರು ಮನೆ ಮನೆಗೆ ಹೋಗಿ ಲಸಿಕೆ ಪಡೆಯುವಂತೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅದೇ ರೀತಿಯಾಗಿ ಜನರು ಸಹ ಬಂದು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ, ಇಲ್ಲಿಯವರೆಗೆ ಸುಮಾರು 350 ಜನ ಲಸಿಕೆ ಪಡೆದು ಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವೈದ್ಯ ಡಾ. ನರಸಿಂಹಮೂರ್ತಿ, ಸ್ಟಾಫ್ ನರ್ಸ್ ಸುನೀತಾ, ಶಾಲೆ ಮುಖ್ಯೋಪಾಧ್ಯಾಯರಾದ ಕನಮಕ್ಕ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮಾರುತಿ, ಸದರಿ ಪ್ರದೇಶದ ನಿವಾಸಿಗಳಾದ ಮಂಜುಳ, ಕಾಳಪ್ಪ, ಸುವರ್ಣ, ದುರ್ಗೇಶ್ ಯಾದವ್, ಮೀನಳ್ಳಿ ಯಲ್ಲಮ್ಮ, ರವಿ, ಗಾದಿಲಿಂಗ, ರಾಮಾಂಜಿನಿ, ವಾಸುದೇವ, ಪ್ರಭು, ಮುರುಳಿ, ಕೃಷ್ಣ, ಕಾರ್ತಿಕ್ ಸೇರಿದಂತೆ ಹಲವಾರು ಸ್ವಯಂ ಸೇವಕರಿದ್ದರು.