ಎಸ್.ಆರ್ ಆಸ್ಪತ್ರೆಯಲ್ಲಿ ಕೋವ್ಯಾಕ್ಷಿನ್ ಲಸಿಕೆ ಲಭ್ಯ
ಲೋಕದರ್ಶನ ವರದಿ
ಬಳ್ಳಾರಿ 29: ನಗರದ ಹೊಸಪೇಟೆ ರಸ್ತೆಯ ಎಡನೇಯ ರೈಲ್ವೆ ಗೇಟ್ ಎದುರುಗಡೆ ಇವರು ಎಸ್.ಆರ್ ಆಸ್ಪತ್ರೆಯಲ್ಲಿ ಬೆಂಗಳೂರಿನ ರೇನ್ಬೋ ಆಸ್ಪತ್ರೆಯ ಸಹಯೋಗದಲ್ಲಿ ಕೊರೊನಾ ರೋಗದ ಕೋವ್ಯಾಕ್ಷಿನ್ ಲಸಿಕೆಯು ಲಭ್ಯವಿರುತ್ತದೆ. ನಗರದ ನಾಗರೀಕರು ಈ ಲಸಿಕೆಯ ಸದುಪಯೋಗವನ್ನು ಪಡೆದುಕೊಂಡು ಕೊರೊನಾ ರೋಗದಿಂದ ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಬೇಕೆಂದು ಎಸ್.ಆರ್ ಆಸ್ಪತ್ರೆಯ ಡಾ. ಲಕ್ಷ್ಮಿ ಪಾವನ, ಡಾ.ಸುಭಾಶ್, ಡಾ.ಫಿರೋಜ್ ಅಹ್ಮದ್ ರವರುಗಳು ಬಳ್ಳಾರಿ ನಗರದ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ವ್ಯಾಕ್ಷಿನ್ಗಾಗಿ ಆಸ್ಪತ್ರೆಯ ಮೋಬೈಲ್ ಸಂಖ್ಯೆ 9663243650 ಅಥವಾ ಆನ್ಲೈನ್ ನಲ್ಲಿ ಕೂಡ ಬುಕ್ ಮಾಡಿಕೊಳ್ಳಲು ಸಹ ಅನುಕೂಲವಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.