ಮನರಂಜನೆ

ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್’ ಚಿತ್ರದ ಬಿಡುಗಡೆಗೆ ಕೌಂಟ್‌ಡೌನ್ ಶುರು…!

ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್’ ಚಿತ್ರದ ಬಿಡುಗಡೆಗೆ ಕೌಂಟ್‌ಡೌನ್ ಶುರು…!

ಹೈದರಾಬಾದ್: ಮಾರ್ಚ್ 10: ಟಾಲಿವುಡ್‌ನ ಸ್ಟಾರ್ ನಟ ಪ್ರಭಾಸ್ ಬಾಹುಬಲಿ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದವರು. ಇದೀಗ ಅವರ ಮತ್ತೊಂದು ಸಿನಿಮಾ ‘ರಾಧೆ ಶ್ಯಾಮ್’ ಬಿಡುಗಡೆಗೆ ಸಿದ್ಧವಾಗಿದ್ದು, ಮಾರ್ಚ್ 11ರಂದು ಈ ಚಿತ್ರ ತೆರೆಕಾಣಲಿದೆ. ಪ್ರಭಾಸ್‌ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ‘ರಾಧೆ ಶ್ಯಾಮ್ ಸಿನಿಮಾದ ಮುಂಗಡ ಟಿಕೆಟ್ ಬುಕಿಂಗ್ ಆರಂಭವಾಗಿದ್ದು, ಚಿತ್ರ ನೋಡಲು ತುದಿಗಾಲಿನಲ್ಲಿ ನಿಂತಿರುವ ಅಭಿಮಾನಿಗಳೆಲ್ಲ ಮುಗಿಬಿದ್ದು ಟಿಕೆಟ್ ಬುಕ್ ಮಾಡ್ತಿದ್ದಾರೆ. ಹಾಗಾಗಿ ಸಿನಿಮಾ ರಿಲೀಸ್‌ಗೂ ಮುನ್ನವೇ ‘ರಾಧೆ ಶ್ಯಾಮ್’ ನಿರ್ಮಾಪಕರಿಗೆ ಬಹುಕೋಟಿ ಆದಾಯ ಹರಿದುಬರುತ್ತಿದೆ.

ಹೈದರಾಬಾದ್‌ನಲ್ಲಿ ‘ರಾಧೆ ಶ್ಯಾಮ್’ ಸಿನಿಮಾದ ಕ್ರೇಜ್ ಜೋರಾಗಿದ್ದು, ಮೂಲಗಳ ಪ್ರಕಾರ ಮುಂಗಡ ಟಿಕೆಟ್ ಬುಕಿಂಗ್ ಮೂಲಕ ಈಗಾಗಲೇ 4.7 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ತಿಳಿದುಬಂದಿದೆ. ಮಾ.11ರಂದು ಈ ಸಿನಿಮಾ ಎಲ್ಲ ಕಡೆಗಳಲ್ಲಿ ಹೌಸ್​ ಫುಲ್ ಪ್ರದರ್ಶನ ಕಾಣಲಿದೆ. ಕರ್ನಾಟಕದಲ್ಲಿಯೂ ಅಡ್ವಾನ್ಸ್​ ಟಿಕೆಟ್​ ಬುಕಿಂಗ್​ ಆರಂಭ ಆಗಿದೆ.

ಬೆಂಗಳೂರಿನಲ್ಲಿ ಮಾ.11ರಂದು 450ಕ್ಕೂ ಹೆಚ್ಚು ಶೋಗಳು ‘ರಾಧೆ ಶ್ಯಾಮ್​’ ಚಿತ್ರಕ್ಕಾಗಿ ಮೀಸಲಾಗಿವೆ. ರಾಧಾ ಕೃಷ್ಣ ಕುಮಾರ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಆಕ್ಷನ್​ ಹೀರೋ ಇಮೇಜ್​ ಬದಿಗಿಟ್ಟು ಪ್ರಭಾಸ್​ ಅವರು ಪಕ್ಕಾ ಲವರ್​ ಬಾಯ್​ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್​ ಮತ್ತು ಹಾಡುಗಳನ್ನು ಕಂಡು ಫ್ಯಾನ್ಸ್​ ಫಿದಾ ಆಗಿದ್ದಾರೆ. ಇನ್ನು ಪೂರ್ತಿ ಸಿನಿಮಾ ನೋಡಲು ಪ್ರಭಾಸ್​ ಅಭಿಮಾನಿಗಳು ಕಾಯುತ್ತಿದ್ದಾರೆ.

ಸುದ್ದಿ ಓದಿ