ಬಳ್ಳಾರಿ

ಕಾರ್ಮಿಕರ ಕಿಟ್ ವಿತರಣೆಯಲ್ಲಿ ಭ್ರಷ್ಟಚಾರ: ತನಿಖೆಗೆ ಒತ್ತಾಯ

ಕಾರ್ಮಿಕರ ಕಿಟ್ ವಿತರಣೆಯಲ್ಲಿ ಭ್ರಷ್ಟಚಾರ: ತನಿಖೆಗೆ ಒತ್ತಾಯ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ : ಕೋವೀಡ್‌ನಿಂದ ಸಂಕಷ್ಟಕ್ಕೀಡಾದ ಕಾರ್ಮಿಕರ ಕುಟುಂಬಗಳ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯ ಕಟ್ಟಡ ಇತರೆ ನಿರ್ಮಾಣ ಕಾರ್ಮಿಕರ ಸಂಘದವರು ತಂಬ್ರಹಳ್ಳಿ ನಾಡಕಚೇರಿ ಮುಂಭಾಗ ಪ್ರತಿಭಟಿಸಿ ಮನವಿ ಸಲ್ಲಿಸಿದರು. 


ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎಸ್‌.ಜಗನ್ನಾಥ ಮಾತನಾಡಿ, ಕೋವೀಡ್‌ನಿಂದಾಗಿ ಕಾರ್ಮಿಕರ ಕುಟುಂಬಗಳು ಅತ್ಯಂತ ಶೋಚನೀಯ ಸ್ಥಿತಿಯಲ್ಲಿರುವುದನ್ನು ಕಾರ್ಮಿಕ ಕಲ್ಯಾಣ ಮಂಡಳಿ ಗಮನಹರಿಸಿ ಉಚಿತ ಆರೋಗ್ಯ ಸೌಲಭ್ಯಗಳನ್ನು ಒದಗಿಸಬೇಕು. ಮಂಡಳಿ ಕಾರ್ಮಿಕರಿಗೆ ನೀಡಿರುವ ಕಿಟ್ ವಿತರಣೆಯಲ್ಲಿ ವ್ಯಾಪಕ ಭ್ರಷ್ಟಚಾರವಾಗಿರುವುದನ್ನು ತನಿಖೆಗೊಳಪಡಿಸಬೇಕು. ತನಿಖೆ ವೇಳೆ ಆರೋಪ ಸಾಭೀತಾದರೆ ಅಪರಾಗಳನ್ನು ಶಿಕ್ಷೆಗೊಳಪಡಿಸಬೇಕು. ಪುನಃ ಆಹಾರ ಕಿಟ್ ವಿತರಿಸುವ ಪ್ರಸ್ತಾಪ ಬಿಟ್ಟು ಪ್ರತಿ ಕಾರ್ಮಿಕರಿಗೆ 10ಸಾವಿರರೂ ಹಣವನ್ನು ನೇರವಾಗಿ ಕಾರ್ಮಿಕರ ಖಾತೆಗೆ ಜಮ ಮಾಡಬೇಕು. ಕಾರ್ಮಿಕರ ಕಲ್ಯಾಣ ನಿಯಲ್ಲಿ ಸಂಗ್ರಹವಾಗಿರುವ ಹಣವನ್ನು ಕಾರ್ಮಿಕರ ಅಭಿವ್ದೃ ಕಲ್ಯಾಣಕ್ಕೆ ಬಳಸಬೇಕು. ಸೇವಾ ಸಿಂಧು, ಸೈಬರ್ ಕೇಂದ್ರಗಳಲ್ಲಿ ಹಂಚಿಕೆಯಾಗಿರುವ ನಕಲಿ ನೋಂದಾಯಿತ ಗುರುತಿನ ಚೀಟಿಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು. 


ಸಂಘಟನೆಯ ಸಂಚಾಲಕ ಯು.ತೋಟೇಶ, ಕೆ.ಕೊಟ್ರೇಶ, ಎಂ.ಮರಿಯಪ್ಪ, ಕೆ.ಬಸವರಾಜ, ಕೊಟ್ರೇಶ, ಜಹಾಂಗೀರ್, ಬಿ.ಸೋಮಶೇಖರ, ಕೃಷ್ಣಮೂರ್ತಿ, ಜಿಲಾನ್‌ಸಾಬ್, ಸಿ.ವಲೀಸಾಬ್ ಇದ್ದರು. 


ಸುದ್ದಿ ಓದಿ