ಭ್ರಷ್ಟ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕಾಗಿದೆ: ನಾಯಕಿ ಕಳ್ಳಿಮನಿ
ತಾಳಿಕೋಟಿ: ಭ್ರಷ್ಟಾಚಾರದಲ್ಲಿ ಮುಳುಗಿಹೋಗಿ ಆಡಳತದಲ್ಲಿ ಎಲ್ಲಾ ರೀತಿಯಿಂದಲೂ ವಿಫಲವಾಗಿರುವ ಬಿಜೆಪಿಯ ಕೆಟ್ಟ ಸರಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ನಾವೆಲ್ಲರೂ ಸಂಕಲ್ಪ ಮಾಡಬೇಕಾಗಿದೆ ಎಂದು ಮಾಜಿ ಅಧ್ಯಕ್ಷೆ ಹಾಗೂ ದೇ. ಹಿಪ್ಪರಗಿ ಕಾಂಗ್ರೆಸ್ ಪಕ್ಷದ ಟೀಕೆಟ್ ಆಕಾಂಕ್ಷಿ ಸುಜಾತಾ ಕಳ್ಳಿಮನಿ ಹೇಳಿದರು.
ಬಿಜೆಪಿ ದುರಾಡಳಿತದ ವೈಫಲ್ಯಗಳನ್ನು ಕ್ಷೇತ್ರದ ಜನರಿಗೆ ಮನವರಿಕೆ ಮಾಡಿ ಅವರಲ್ಲಿ ಜಾಗೃತಿಯನ್ನು ತರಲು ಬ.ಸಾಲವಾಡಗಿ ಜಿ.ಪಂ. ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಂಡಿರುವ ‘ಜನ ಜಾಗೃತಿ ಸಂಪರ್ಕ ಸಭೆ’ಯಲ್ಲಿ ಅವರು ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ ಇಂದು ರಾಜ್ಯದಲ್ಲಿರುವ ಬಿಜೆಪಿಯ ಕೆಟ್ಟ ಸರಕಾರದಿಂದಾಗಿ ಜನಸಾಮಾನ್ಯರು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಜನ ಸಾಮಾನ್ಯರ ಸಾಮಾನ್ಯರ ಸಮಸ್ಯೆಗಳ ಕುರಿತು ಇವರಿಗೆ ಕಿಂಚಿತ್ತು ಕಾಳಜಿ ಇಲ್ಲ. ಇದೊಂದು 40ಅ ಕಮೀಷನ್ ದಂಧೆಯ ಸರಕಾರ. ವಾಮ ಮಾರ್ಗ ಅಧಿಕಾರ ಹಿಡಿದು ದುಡ್ಡು ಸಂಪಾದಿಸುವುದೇ ಇವರ ಸಾಧನೆ. ಬರಲಿರುವ ಚುನಾವಣೆಯಲ್ಲಿ ನಾವೆಲ್ಲರೂ ಸೇರಿ ಇವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ಶರಣಪ್ಪ ಸುಣಗಾರ ಅವರು ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಆಡಳಿತದಲ್ಲಿ ಮುಂದುವರೆಯಲು ನೈತಿಕತೆಯನ್ನು ಕಳೆದುಕೊಂಡಿದೆ. ಇಂಥಹ ಕೆಟ್ಟ ಸರಕಾರವನ್ನು ರಾಜ್ಯದ ಜನತೆ ಹಿಂದೆದೂ ಕಂಡಿರಲಿಲ್ಲ. ಮಾಜಿ ಸಿ.ಎಂ. ಸಿದ್ದರಾಮಯ್ಯನವರ ಆಡಳಿತವಿದ್ದಾಗ ಸಾಮಾನ್ಯ ಜನರು ನೆಮ್ಮದಿಯಿಂದ ಇದ್ದರು. ಕಾಂಗ್ರಸ್ ಪಕ್ಷದಿಂದ ಮಾತ್ರ ರಾಜ್ಯದ ಜನರ ಉದ್ಧಾರ ಸಾಧ್ಯ ಎಂದರು.
ಈ ಸಮಯದಲ್ಲಿ ಆಕಾಂಕ್ಷಿಗಳಾದ ಡಾ. ಪ್ರಭುಗೌಡ ಲಿಂಗದಳ್ಳಿ, ಗೌರಮ್ಮ ಮುತ್ತತ್ತಿ, ಮುಖಂಡರಾದ ಸುರೇಶ ಬಾಬುಗೌಡ ಬಿರಾದಾರ (ಪೀರಾಪೂರ), ಶಿವರಡ್ಡಿ ಐನಾಪೂರ, ಸೋಮನಾಥ ಕಳ್ಳಿಮನಿ ಹಾಗೂ ಗ್ರಾಮಸ್ಥರು ಇದ್ದರು.