ಜನಪರ ಕಾರ್ಯಕ್ರಮಗಳೇ ಪಾಲಿಕೆ ಚುನಾವಣೆಗೆ ಶ್ರೀರಕ್ಷೆ: ಡಿ.ಮೀನಳ್ಳಿ
ಬಳ್ಳಾರಿ 05: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅವಧಿಯಲ್ಲಿ ಜಾರಿಗೊಳಿಸಿದ ಜನಪರ ಕಾರ್ಯಕ್ರಮಗಳೇ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿದೆ ಎಂದು ಜೆಡಿಎಸ್ ಕಲ್ಯಾಣ ಕರ್ನಾಟಕ ವೀಕ್ಷಕ ಡಿ.ಮೀನಳ್ಳಿ ತಾಯಣ್ಣ ಅವರು ಹೇಳಿದರು.
ನಗರದ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯ 39 ವಾರ್ಡ್ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದು, ಅದರಲ್ಲಿ ಕನಿಷ್ಠ 12ರಿಂದ 15 ಸ್ಥಾನಗಳಲ್ಲಿ ಖಂಡಿತ ಗೆಲುವು ಸಾಧಿಸಲಿದ್ದೇವೆ, ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಚುನಾವಣೆ ಹಿನ್ನೆಲೆಯಲ್ಲಿ ನಮ್ಮ ಅಭ್ಯರ್ಥಿಗಳ ಪರ ಮತಯಾಚಿಸಲು ಮಾನವಿ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ್ ಹಾಗೂ ಕಲ್ಯಾಣ ಕರ್ನಾಟಕ ವಿಭಾಗದ ಸಂಚಾಲಕ ಹಾಗೂ ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಅವರು ಸೇರಿದಂತೆ ಪಕ್ಷ ವಿವಿಧ ನಾಯಕರು, ನಾನಾ ಗಣ್ಯರು ಆಗಮಿಸಲಿದ್ದಾರೆ. ಈಗಾಗಲೇ ಆಕಾಂಕ್ಷಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಪ್ರಕ್ರೀಯೆ ನಡೆದಿದೆ, ನಗರದ ಎಲ್ಲ ವಾರ್ಡ್ಗಳಲ್ಲಿ ಪ್ರತಿ ವಾರ್ಡ್ನಿಂದ 2-3 ಆಕಾಂಕ್ಷಿಗಳಿದ್ದು, ಪಕ್ಷದ ನಾಯಕರೊಂದಿಗೆ ಚೆರ್ಚಿಸಿ, ಅವರೇ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲಿದ್ದಾರೆ. ಪಕ್ಷದ ತತ್ವ ಹಾಗೂ ಸಿದ್ಧಾಂತಗಳನ್ನು ಮೆಚ್ಚಿ ಪಕ್ಷಕ್ಕೆ ಯಾರೇ ಸೇರ್ಪಡೆಗೆ ಮುಂದಾದರೇ ಸ್ವಾಗತಿಸುವೆ ಎಂದರು. ಪಕ್ಷದ ಪದಾಧಿಕಾರಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದು, 1ನೇ ವಾರ್ಡ್ನಿಂದ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಡಿ.ವಿಜಯಕುಮಾರ್, 26ನೇ ವಾರ್ಡ್ ಪುಷ್ಪಾ, 3ನೇ ವಾರ್ಡ್ ಮುನ್ನಾಭಾಯಿ ಸೇರಿದಂತೆ ವಿವಿಧ ಪದಾಧಿಕಾರಿಗಳು ಸ್ಪರ್ಧಿಸಲು ಮುಂದಾಗಿದ್ದಾರೆ. ಆದರೇ, ಯಾರನ್ನೂ ಇನ್ನೂ ಅಂತಿಮಗೊಳಿಸಿಲ್ಲ, ಪಕ್ಷದ ವರೀಷ್ಠರೇ ಎಲ್ಲವನ್ನೂ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಚುನಾವಣೆ ಅಂದರೇ ಹಣ, ಮಧ್ಯ ಹಂಚುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೇ, ನಾವು ಇದರಿಂದ ದೂರ ಇದ್ದೇವೆ. ನಮ್ಮದೇನಿದ್ದರೂ ಕುಮಾರಣ್ಣನವರ ಜನರ ಕಾರ್ಯಕ್ರಮಗಳು, ಸಾಧನೆಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡಲಿದ್ದೇವೆ. ಹಿರಿಯ ನಾಯಕ ಪ್ರತಾಪ ರೆಡ್ಡಿ ಅವರು ಸಕ್ರೀಯವಾಗಿ ಭಾಗವಹಿಸಲಿದ್ದಾರೆ. ಚುನಾವಣೆಯಲ್ಲಿ ಜೆಡಿಎಸ್ ಯಾವುದರಲ್ಲೂ ಹಿಂದೆ ಬಿದ್ದಿಲ್ಲ, ಬೀಳೋದು ಇಲ್ಲ. ಈ ಹಿಂದೆ ನಗರ ಕ್ಷೇತ್ರಕ್ಕೆ ಸ್ಪರ್ಧಿಸಿದ ಹೊತ್ತೂರ್ ಇಕ್ಬಾಲ್ ಅಹ್ಮದ್ ಅವರೂ ಚುನಾವಣೆಯಲ್ಲಿ ಸಕ್ರೀಯವಾಗಿ ಭಾಗವಹಿಸಿದರೇ ಮತ್ತಷ್ಟು ಶಕ್ತಿ ಬರಲಿದೆ, ಕೂಡಲೇ ಅವರನ್ನು ಸಂಪರ್ಕಿಸಿ, ಚುನಾವಣೆ ಪ್ರಕ್ರೀಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡುವೆ ಎಂದರು.
ನಗರ ಘಟಕದ ಅಧ್ಯಕ್ಷ ಡಿ.ವಿಜಯಕುಮಾರ್, ಪಕ್ಷದ ಹಿರೀಯ ಮುಖಂಡರಾದ ಬಂಡೇಗೌಡ, ರಸೂಲ್ ಸಾಬ್, ವಾದಿರಾಜ್ ಶೆಟ್ಟಿ, ಶ್ರೀನಿವಾಸ್ ರಾವ್, ಮುನ್ನಾಭಾಯಿ, ಆಜಾದ್, ವಂಡ್ರಿ, ಯಲ್ಲನಗೌಡ, ಗೋಪಾಲ್, ಬಸಪ್ಪ, ಚಾಗನೂರು ನಾಗರಾಜ್, ರಾಮೇಶ್ವರಿ, ಪುಷ್ಪಾ, ಕೋಮಲಾ, ವಿಜಯಕುಮಾರಿ, ಸೇರಿದಂತೆ ಇತರ ಮುಖಂಡರು ಹಾಜರಿದ್ದರು.