ಶಾಸಕ ಪೂಜಾರಗೆ ಕೊರೋನಾ!

ಲೋಕದರ್ಶನ ವರದಿ 


ರಾಣಿಬೆನ್ನೂರ ಜ 24:- ಸ್ಥಳೀಯ ಶಾಸಕ ಅರುಣಕುಮಾರ ಪೂಜಾರವರಿಗೆ ಕೊರೋನಾ ವೈರಸ್ ತಗುಲಿದೆ ಎಂದು ತಿಳಿದು ಬಂದಿದೆ. ಶಾಸಕರಿಗೆ ಸ್ವ್ಯಾಬ್ ಟೆಸ್ಟ ಮಾಡಿಸಿದಾಗ ಕೊರೋನಾ ದೃಢಪಟ್ಟಿದೆ, ಅವರು ಸದ್ಯ ಮನೆ ಯಲ್ಲಿಯೇ ಐಷೋಲೇಶನ್ ಆಗಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಅವರು ಆರೋಗ್ಯದಿಂದ ಇದ್ದಾರೆ. ಯಾವುದೇ ರೀತಿಯ ಹೆಚ್ಚಿನ ತೊಂದರೆ ಇಲ್ಲ, ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ, ಶಾಸಕರ ಸಂಪ ರ್ಕಕ್ಕೆ ಬಂದಿದ್ದವರು ತಪ್ಪದೇ ಕೊರೋನಾ ಪರೀಕ್ಷೆ ಮಾಡಿಸಿಕೊಂಡು ಆರೋಗ್ಯದ ಕಡೆಗೆ ಗಮನ ಹರಿಸುವಂತೆ ಅವರ ಪತ್ನಿ ಜಿಪಂ ಮಾಜಿ ಸದಸ್ಯೆ ಮಂಗಳಗೌರಿ ಪೂಜಾರ ವಿನಂತಿಸಿದ್ದಾರೆ.