ಕೊರೊನಾ ವಾರಿಯರ್ಸ್ ಸೇವೆ ಅನುಪಮವಾದುದು: ನೇಮಕಲ್ ರಾವ್
ಬಳ್ಳಾರಿ 11: ಕಳೆದ ಹಲವಾರು ದಿನಗಳಿಂದ ಕೊರೊನಾ ಮತ್ತು ಬ್ಲಾಕ್ ಫಂಗಸ್ ರೋಗಿಗಳ ಶುಶ್ರೂಷೆಯಲ್ಲಿ ತೊಡಗಿಸಿಕೊಂಡಿರುವ ಕೊರೊನಾ ವಾರಿಯಸರ್್ಗಳ ಸೇವೆ ಅನುಪಮವಾದುದು ಎಂದು ಶ್ರೀ ಗಾಯತ್ರಿ ಸೇವಾ ಟ್ರಸ್ಟ್ ಅಧ್ಯಕ್ಷ ನೇಮಕಲ್ ರಾವ್ ಹೇಳಿದರು. ಶ್ರೀ ಗಾಯತ್ರಿ ಸೇವಾ ಟ್ರಸ್ಟ್ ವತಿಯಿಂದ ಕೊರೊನಾ-ಬ್ಲಾಕ್ ಫಂಗಸ್ ರೋಗಿಗಳ ಬಂಧುಗಳಿಗೆ, ಶುಶ್ರೂಷಕರಿಗೆ ಆಹಾರ ವಿತರಿಸಿದ ಅವರು ಕೊರೊನಾ ವಾರಿಯಸರ್್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ವಿಮ್ಸ್ ನ ವೈದ್ಯರು, ಸಮಸ್ತ ಸಿಬ್ಬಂದಿಗಳ ಕರ್ತವ್ಯಪರತೆಗೆ ಧನ್ಯವಾದ ಹೇಳಿದ ಅವರು, ಟ್ರಯಾಸ್ ನ ಫೀವರ್ ಕ್ಲಿನಿಕ್ ವಿಭಾಗದಲ್ಲಿ ಕೊರೊನಾ ವಾರಿಯಸರ್್ಗಳಾದ ಪ್ಯಾರಾ ಮೆಡಿಕಲ್ ವಿದ್ಯಾಥರ್ಿಗಳು, ಡಾಟಾ ಎಂಟರಿ ಆಪರೇಟಸರ್್, ಬಯಾಲಾಜಿಕಲ್ ಲ್ಯಾಬ್ ವಿಭಾಗ, ಸ್ವ್ಯಾಬ್ ಟೆಸ್ಟಿಂಗ್ ಬಯೋ ಲ್ಯಾಬ್ ವಿಭಾಗದಲ್ಲಿನ ಕರ್ತವ್ಯ ನಿರತ ಸಿಬ್ಬಂದಿಯ ಸೇವೆ ಅನುಕರಣೀಯ. ಕೊರೊನಾ ಸೋಂಕಿತ ರೋಗಿಗಳಿಗೆ ಮತ್ತು ಅವರ ಬಂಧುಗಳಿಗೆ ನೈತಿಕ ಸ್ಥೈರ್ಯ ತುಂಬುತ್ತಾ, ಹಗಲಿರುಳೂ ಅವರ ಶುಶ್ರೂಷೆ ಮಾಡುತ್ತ ಕೊರೊನಾ ರೋಗದಿಂದ ಬಸವಳಿದಿರುವ ರೋಗಿಗಳೀಗೆ ಚೈತನ್ಯ ನೀಡುತ್ತಿದ್ದಾರೆ. ರೋಗಿಗಳು ಗುಣಮುಖರಾಗುವಲ್ಲಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಕೊರೊನಾ ಸೋಂಕಿತರು ಆರಂಭದಲ್ಲಿಯೇ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆಗೆ ಒಳಗಾಗಬೇಕು. ಕೈ ಮಿರಿ ಹೋದಾಗ ಆಸ್ಪತ್ರೆಗೆ ದಾಖಲಾದರೆ ವೈದ್ಯರು ಏನು ಮಾಡಲು ಸಾಧ್ಯ? ಎಂದ ಅವರು, ವಿಮ್ಸ್ ನಿದರ್ೆಶಕ ಡಾ.ಗಂಗಾಧರಗೌಡ, ವೈದ್ಯಕೀಯ ಅಧೀಕ್ಷಕ ಡಾ.ಅಶ್ವಿನಿಕುಮಾರ್ ಸಿಂಗ್, ಫೀವರ್ ಕ್ಲಿನಿಕ್ ನ ಅಧಿಕಾರಿ ಡಾ.ಎಂ.ಶಾಂತಿ, ನೋಡಲ್ ಅಧಿಕಾರಿ ಡಾ.ಲೀಬಾ ಸೆಬಾಸ್ಟಿನ್, ಸೀನಿಯರ್ ಲ್ಯಾಬ್ ಟೆಕ್ನಿಷಿಯನ್ ಆಫೀಸರ್ ಡಾ.ಕಿರಣ್ ಯಾದವಾಡ ಮತ್ತು ಸಮಸ್ತ ವೈದ್ಯಕೀಯ ಸಿಬ್ಬಂದಿಗಳ ಕಾಳಜಿಗೆ ಅಭಿನಂದನೆಗಳು ಸಲ್ಲುತ್ತವೆ ಎಂದರು. ಸಂಘಟನಾ ಕಾರ್ಯದಶರ್ಿ ಸಿಮೆಂಟ್ ಗಿರಿ, ಸದಸ್ಯರಾದ ಶ್ರೀನಿವಾಸ್, ಸುರೇಂದ್ರ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು