ಬಳ್ಳಾರಿ

ಕೊರೊನಾ ಲಸಿಕಾ ಅಭಿಯಾನ ಯಶಸ್ವಿ: ಗೌಸಿಯಾಬೇಗಂ

ಕೊರೊನಾ ಲಸಿಕಾ ಅಭಿಯಾನ ಯಶಸ್ವಿ: ಗೌಸಿಯಾಬೇಗಂ

ಲೋಕದರ್ಶನ ವರದಿ 

ಕಂಪ್ಲಿ 22: ಪಟ್ಟಣ ಸೇರಿ ತಾಲೂಕಿನಲ್ಲಿ ಮನೆ, ಮನೆ ತೆರಳಿ ಜನರನ್ನು ಮನವೊಲಿಸಿದ ಮೂಲಕ ವಿಶೇಷ ಕೊರೊನಾ ಲಸಿಕಾ ಅಭಿಯಾನ ಯಶಸ್ವಿಯಾಗಿ ಬುಧವಾರ ಜರುಗಿತು.  

ಇಲ್ಲಿನ ತಹಸೀಲ್ದಾರ್ ಗೌಸಿಯಾಬೇಗಂ ಮಾತನಾಡಿ ವಾರ್ಡಿನಲ್ಲಿರುವ ಜನರನ್ನು ಮನವಲಿಸುವ ಮೂಲಕ ಕೊರೊನಾ ಲಸಿಕಾ ಹಾಕಿಸಿದರು ಪ್ರತಿ ತಂಡಗಳಿರುವ ಸ್ಥಳಕ್ಕೆ ಭೇಟಿ ನೀಡಿ ಲಸಿಕೆ ಕಾರ್ಯವನ್ನು ಪರೀಶೀಲಿಸಿದರು. ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ರಾಧಿಕಾ ಮಾತನಾಡಿ, ಪಟ್ಟಣದಲ್ಲಿ ಸಂಜೆ 5ರವರೆಗೆ 380 ಜನರಿಗೆ ಲಸಿಕೆ ಹಾಕಲಾಗಿದೆ. ವಿಶೇಷ ಲಸಿಕೆ ಹಾಕಲು 6 ತಂಡಗಳನ್ನು ರಚಿಸಲಾಗಿದೆ. ಮೂರು ತಂಡಗಳು ಎಂ.ಡಿ ಕ್ಯಾಂಪಿನಲ್ಲಿ, 2 ತಂಡಗಳು 4ನೇ ವಾರ್ಡಿನಲ್ಲಿ ಹಾಗೂ ಒಂದು ತಂಡ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಲಾಗುತ್ತಿದೆ. ಪ್ರತಿ ತಂಡದಲ್ಲಿ ತಲಾ ಒಬ್ಬರು ವ್ಯಾಕ್ಸಿನೇಟರ್, ಡಿಇಒ, ನಾಲ್ಕು ಜನ ಆಶಾ ಕಾರ್ಯಕರ್ತೆಯರು, ಜತೆಗೆ ಅಂಗನವಾಡಿ ಕಾರ್ಯಕರ್ತೆಯರು ಇದ್ದಾರೆ ಎಂದರು. ಪುರಸಭೆ ಸದಸ್ಯ ಆಂಜನೇಯ ಮಾತನಾಡಿ ಎಂ.ಡಿ.ಕ್ಯಾಂಪಿನ ಮನೆ ಮನೆಗೆ ತೆರಳಿಜನರನ್ನು ಮನವಲಿಸುವ ಮೂಲಕ ಲಸಿಕೆ ಹಾಕಿಸಿದರು ಎಲ್ಲಾರಿಗೂ ಸಹಕಾರ ನೀಡಿದರುಇದಕ್ಕೂ ಮೊದಲು ಎಂ.ಡಿ.ಕ್ಯಾಂಪಿನಲ್ಲಿ ದಂಪತಿಗಳು ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದು ನಿರಾಕರಿಸಿದ್ದರು. ಈ ಬಗ್ಗೆ ಆರೋಗ್ಯ ನೀರೀಕ್ಷಣಾಧಿಕಾರಿ ಚನ್ನಬಸವರಾಜ ಮಾತನಾಡಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಮನೆ ಅಂಗಳದಲ್ಲಿ ಕೆಲ ಕ್ಷಣ ಧರಣಿ ನಡೆಸಲಾಯಿತು. ಬಳಿಕ ಲಸಿಕೆ ಕುರಿತು ಸಮಗ್ರ ಮಾಹಿತಿ ನೀಡಿ  ಮನವೊಲಿಸಿದ ಬಳಿಕ ದಂಪತಿಗಳಿಗೆ ಲಸಿಕೆ ಹಾಕಲಾಯಿತು ಎಂದರು. ಆರೋಗ್ಯ ಇಲಾಖೆ ಸಿಬ್ಬಂದಿಗಳು ಇದ್ದರು. 


ಸುದ್ದಿ ಓದಿ