ತಾಳಿಕೋಟಿ

ಸಂಸ್ಥೆಯ ಬೆಳವಣಿಗೆಗೆ ಸಮಾಜದ ಸಹಕಾರ ಅಗತ್ಯ: ಮನಗೂಳಿ

ಸಂಸ್ಥೆಯ ಬೆಳವಣಿಗೆಗೆ ಸಮಾಜದ ಸಹಕಾರ ಅಗತ್ಯ: ಮನಗೂಳಿ

ತಾಳಿಕೋಟಿ 22: ಯಾವುದೇ ಒಂದು ಸಂಘ-ಸಂಸ್ಥೆ ಬೆಳೆಯ ಬೇಕಾದರೆ ಸಮಾಜದಲ್ಲಿರುವ ದಾನಿಗಳ ಸಹಕಾರವೂ ಅಗತ್ಯವಾಗಿದೆ ಎಂದು ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್‌ರಜಾಕ ಮನಗೂಳಿ ತಿಳಿಸಿದರು. 

ಸಮಾಜಸೇವಕ ಮದನ ನೀರಲಗಿ ಅವರು ಅಂಜುಮನ್ ಶಿಕ್ಷಣ ಸಂಸ್ಥೆಗೆ ನಿರ್ಮಿಸಿಕೊಟ್ಟ ಶೌಚಾಲಯಗಳ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. 

 ಸಮಾಜ ಸೇವಕ ಮದನ ನೀರಲಗಿ ಅವರು ಈಗಾಗಲೇ ಹಲವಾರು ಸಂಘ-ಸಂಸ್ಥೆಗಳಿಗೆ ಆರ್ಥಿಕ ಸಹಾಯ ನೀಡಿದ್ದಾರೆ. ಅವರು ಸದಾ ಸಮಾಜದ ಏಳಿಗೆಯನ್ನು ಬಯಸುವವರಾಗಿದ್ದಾರೆ. ಸಮಾಜದ ಸಹೃದಯಿಗಳ ಸಹಾಯ - ಸಹಕಾರ ಇದ್ದಾಗ ಮಾತ್ರ ಸಂಸ್ಥೆಗಳು ಬೆಳೆಯಲು ಸಾಧ್ಯವಾಗುತ್ತದೆ ಎಂದರು. 

ಸನ್ಮಾನ: ಇದೇ ಸಂದರ್ಭದಲ್ಲಿ ಇತ್ತೀಚಿಗೆ ನೂತನವಾಗಿ ಬ್ಲಾಕ ಕಾಂಗ್ರೆಸ್ ಅದ್ಯಕ್ಷರಾಗಿ ನೇಮಕರಾದ ಮಹೆಬೂಬ. ಕೆ. ಚೋರಗಸ್ತಿ ಹಾಗೂ ಸಮಾಜ ಸೇವಕ ಮದನ ನೀರಲಗಿ ಅವರ ಪ್ರತಿನಿಧಿ ಬುರಾನಸಾಬ ಕಲಾಸಿ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಬಾಬು ಬಡಗಣ, ಕಾರ್ಯದರ್ಶಿ ರಾಜ ಅಹ್ಮದ ಒಂಟಿ, ಡಿಎಡ್ ಕಾಲೇಜ ಅಧ್ಯಕ್ಷ ಸಿಕಂದರ ವಠಾರ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ