ತಾಳಿಕೋಟಿ

ಬಿಜೆಪಿ ದುರಾಡಳಿತ ಕುರಿತು ಮತದಾರರಿಗೆ ಮನವರಿಕೆ : ಕೈ ಟಿಕೆಟ್ ಆಕಾಂಕ್ಷಿಗಳ ಒಗ್ಗಟ್ಟಿನ ಮಂತ್ರ ; ಬಿಜೆಪಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ: ಸುಣಗಾರ

ಬಿಜೆಪಿ ದುರಾಡಳಿತ ಕುರಿತು ಮತದಾರರಿಗೆ ಮನವರಿಕೆ : ಕೈ ಟಿಕೆಟ್ ಆಕಾಂಕ್ಷಿಗಳ ಒಗ್ಗಟ್ಟಿನ ಮಂತ್ರ ; ಬಿಜೆಪಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ: ಸುಣಗಾರ

ತಾಳಿಕೋಟಿ: ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರಕಾರ ಆಡಳಿತದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಇದೊಂದು ಭ್ರಷ್ಟ ಸರಕಾರ ಸದಾ ಕಾರ​‍್ೋರೇಟರ​‍್ಸ‌ಗಳ ಹಿತ ಕಾಯುವ ಇವರಿಗೆ ರಾಜ್ಯದ ಬಡ ಹಾಗೂ ಮಧ್ಯಮ ವರ್ಗದ ಜನರ ಕುರಿತು ಯಾವುದೇ ಕಾಳಜಿ ಇಲ್ಲ ಬಿಜೆಪಿ ದುರಾಡಳಿತಕ್ಕೆ ಮತ್ತು ರಾಜ್ಯದ ಜನತೆ ಬೇಸತ್ತು ಹೋಗಿದ್ದಾರೆ ಮುಂಬರಲಿರುವ ಚುನಾವಣೆಯಲ್ಲಿ ಜನರ ಮುಂದೆ ಹೋಗಿ ಮತ ಕೇಳುವ ಹಕ್ಕನ್ನು ಇವರು ನೈತಿಕವಾಗಿ ಕಳೆದುಕೊಂಡಿದ್ದಾರೆಂದು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ದೇ. ಹಿಪ್ಪರಗಿ ಮತಕ್ಷೇತ್ರದ ಟಿಕೆಟ್ ಆಕಾಂಕ್ಷಿ ಶರಣಪ್ಪ ಸುಣಗಾರ ಹೇಳಿದರು. 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಪಕ್ಷ ಬಿಜೆಪಿ ವಿರುದ್ಧ ಹರಿಹಾಯ್ದು ಅವರು ಬಿಜೆಪಿ ದುರಾಡಳಿತಕ್ಕೆ ರಾಜ್ಯದ ಜನರು ಬೇಸತ್ತು ಹೋಗಿದ್ದಾರೆ ಯಾವುದೇ ಜನಪರ ಯೋಜನೆಗಳನ್ನು ಜಾರಿಗೆ ತಂದ ಭ್ರಷ್ಟಾಚಾರದಲ್ಲಿ ಮುಳಗಿ ಹೋಗದೆ ಇದೊಂದು 40ಅ ಕಮಿಷನ್ ಸರಕಾರ. ಇವರ ಕೆಟ್ಟ ಆರ್ಥಿಕ ಯೋಜನೆಗಳಿಂದಾಗಿ ಸಾಮಾನ್ಯ ಜನರ ಬದುಕು ದುಸ್ತರವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕಾಲದಲ್ಲಿ ತಂದಂಥಹ ಹಲವಾರು ಜನಪರ ಯೋಜನೆಗಳನ್ನು ಕೇವಲ ರಾಜಕೀಯ ಕಾರಣಕ್ಕಾಗಿ ಸ್ಥಗಿತಗೊಳಿಸಿದ್ದಾರೆ. ನೀರಾವರಿ ಕ್ಷೇತ್ರಕ್ಕೆ ನಾವು ಪ್ರತಿವರ್ಷ 10 ಸಾವಿರ ಕೋಟಿ ಕಾಯ್ದಿರಿಸಿದ್ದೇವು. ನಮ್ಮ ಜಿಲ್ಲೆಯ ನಾಯಕರಾದ ಎಂ.ಬಿ. ಪಾಟೀಲರು ನೀರಾವರಿ ಸಚಿವರಾಗಿ ಈ ಭಾಗದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದರು. ಈ ಭಾಗದ ರೈತರ ಆಶಾಕಿರಣವಾಗಿರುವ ಬೂದಿಹಾಳ-ಪೀರಾಪೂರ ಏತನೀರಾವರಿ ಯೋಜನೆಗೆ ಚಾಲನೆ ಕೊಟ್ಟು ತಂದವರು ನಾವು ಈಗ ನಾವೇ ಮಾಡಿದ್ದೇವೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಇವರ ಕೊಡುಗೆ ಏನು? ಎಂದ ಅವರು, ಕೇಂದ್ರದಲ್ಲಿರುವ ಮೋದಿ ಅವರ ನೇತೃತ್ವದ ಸರಕಾರ ಸುಳ್ಳು ಹೇಳಿ ದೇಶದ ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ. 

ಅವರು ಇಲ್ಲಿಯವರೆಗೆ ಕೊಟ್ಟ ಒಂದೇ ಒಂದು ಭರವಸೆ ಈಡೇರಿಸಲು ಅವರಿಗೆ ಸಾಧ್ಯವಾಗಿಲ್ಲ. ಇಂದು ದೇಶದಲ್ಲಿ ನಿರೂದ್ಯೋಗ  ಸಮಸ್ಯೆ ಉಲ್ಬಣಿಸಿ ನಮ್ಮ ಯುವಕರ ಭವಿಷ್ಯವೇ ಹಾಳಾಗುತ್ತದೆ. ಯುಪಿಎ ಸರಕಾರವಿದ್ದಾಗ ರೈತರ 75 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಯಿತು. 

ತಮ್ಮ ಬೆಳೆಗೆ ಬೆಂಬಲ ಬೆಲೆ ಕೇಳಿ ವರ್ಷಗಟ್ಟಲೇ ನಿರಶನ ನಡೆಸಿದ ರೈತರು ಪ್ರಾಣ ತೆತ್ತರೂ ಲೆಕ್ಕಿಸದ ಹಠಮಾರಿತನ ತೋರಿಸಿದ ರೈತವಿರೋಧಿ ಸರಕಾರ ಇದಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಒಂದು ಇತಿಹಾಸ ಇದೆ. ದೇಶಕ್ಕಾಗಿ ಪ್ರಾಣಕೊಟ್ಟ ನಾಯಕರನ್ನು ಹೊಂದಿದ ಪಕ್ಷ ನಮ್ಮದು. ರಾಜ್ಯದಲ್ಲಿ ಅನೈತಿಕ ರಾಜಕಾರಣದಿಂದ ಆಡಳಿತಕ್ಕೆ ಬಂದಿರುವ ಬಿಜೆಪಿ ಸಾಧನೆ ಆದರೂ ಏನು? ಎಂದ ಅವರು ಈ ಬಾರಿ ರಾಜ್ಯದಲ್ಲಿ ಮತ್ತೇ ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಆರಿಸಿ ಬರಲಿದೆ ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇದು ರಾಜ್ಯದ ಜನರ ತೀರ್ಮಾನವಾಗಿದೆ. 

ದೇ.ಹಿಪ್ಪರಗಿ ಮತಕ್ಷೇತ್ರದಲ್ಲಿ 9 ಜನ ಟಿಕೆಟ್ ಆಕಾಂಕ್ಷಿಗಳಿದ್ದರೂ ನಾವೆಲ್ಲರೂ ಒಂದಾಗಿದ್ದೇವೆ. ವರಿಷ್ಠರು ಯಾರಿಗೆ ಟಿಕೆಟ್ ಕೊಟ್ಟರು. ಅವರ ಗೆಲುವಿಗಾಗಿ ಒಂದಾಗಿ ಪ್ರಯತ್ನಿಸುತ್ತೇವೆ. ನಮಗೆ ವ್ಯಕ್ತಿಗಿಂತಲೂ ಪಕ್ಷ ಮುಖ್ಯ. ಬಿಜೆಪಿ ದುರಾಡಳಿತದ ಕುರಿತು ಮತದಾರರಿಗೆ ಮನವರಿಕೆ ಮಾಡಿಕೊಡಲೆಂದೇ ನಾವೆಲ್ಲರೂ ಒಂದಾಗಿ ಜನಸಂಪರ್ಕ ಸಭೆಗಳನ್ನು ಹಮ್ಮಿಕೊಂಡಿದ್ದೇವೆ. ಉತ್ತಮ ಸ್ಪಂದನೆ ಸಿಕ್ಕಿದೆ. ನಾಳೆಯಿಂದ ಬ.ಸಾಲವಾಡಗಿ ಜಿಪಂ ವ್ಯಾಪ್ತಿಯ ಗ್ರಾಪಂಗಳ ಗ್ರಾಮಗಳಲ್ಲಿ ಸಭೆ ನಡೆಸಲಿದ್ದೇವೆ ಎಂದರು. 

ಈ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಬಿ.ಎಸ್‌. ಪಾಟೀಲ (ಯಾಳಗಿ) ಹೂ.ಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳನಗೌಡ ಪಾಟೀಲ, ಟಿಕೆಟ್ ಆಕಾಂಕ್ಷಿಗಳಾದ ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಡಾ. ಪ್ರಭುಗೌಡ ಲಿಂಗದಳ್ಳಿ, ಆನಂದಗೌಡ ದೊಡ್ಡಮನಿ, ಸಹೋದರ ಸಂತೋಷಗೌಡ ದೊಡ್ಡಮನಿ, ಮುಖಂಡರಾದ ಸೋಮನಾಥ ಕಳ್ಳಿಮನಿ, ಸುರೇಶ ಬಾಬುಗೌಡ ಬಿರಾದಾರ (ಪೀರಾಪೂರ), ಶಿವರಡ್ಡಿ ಐನಾಪೂರ, ಬಾಲು ತಳವಾರ (ಅಸ್ಕಿ), ಎಚ್‌.ಬಿ. ಬಿರಾದಾರ, ಪುರಸಭೆ ಸದಸ್ಯ ಪರಶುರಾಮ ತಂಗಡಗಿ, ಎಂ.ಎಸ್‌. ಜೋಲಿ ಇದ್ದರು. 


ಸುದ್ದಿ ಓದಿ