ಸುಕೋ ಬ್ಯಾಂಕ್ನಿಂದ ಗ್ರಾಹಕರೊಂದಿಗೆ ಸಂವಾದ ಕಾರ್ಯಕ್ರಮ.
ಮುಂಡರಗಿ 29: ಸುಕೋ ಬ್ಯಾಂಕ್ ಪ್ರತಿಯೊಬ್ಬ ಗ್ರಾಹಕರಿಗೆ ಅನುಕೂಲವಾಗುವಂತೆ ಬ್ಯಾಂಕ್ನ ಸೇವೆಗಳಾದ ಮೊಬೈಲ್ ಬ್ಯಾಂಕಿಗ್, ಠೇವಣಿ ವ್ಯವಸ್ಥೆಯ ಸಮರ್ಕ ಸೇವೆಯನ್ನು ಸುಕೋ ಬ್ಯಾಂಕ್ನಿಂದ ಕಲ್ಪಿಸಲಾಗುವುದು. ಹಾಗೂ ಬ್ಯಾಂಕ್ ಸಮಯವನ್ನು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಸೇವೆ ನೀಡಲು ನಿರ್ಧರಿಸಲಾಗಿದೆ. ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸುಕೋ ಬ್ಯಾಂಕ್ ಅಧ್ಯಕ್ಷ ಮೋಹಿತ ಮಸ್ಕಿ ತಿಳಿಸಿದರು.
ಪಟ್ಟಣದಲ್ಲಿ ಇತ್ತೀಚೆಗೆ ಜರುಗಿದ ಸುಕೋ ಬ್ಯಾಂಕ್ನಿಂದ ಗ್ರಾಹಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅಧ್ಯಕ್ಷತವಹಿಸಿ ಅವರು ಮಾತನಾಡಿದರು.
ಮುಂದಿನ ತಿಂಗಳಿಂದ ಈ ಸುಕೋ ಬ್ಯಾಂಕ್ ಸ್ಮಾಲ್ ಪೈನಾನ್ಸ್ ಬ್ಯಾಂಕ್ ಆಗಿ ಪರಿವರ್ತನೆ ಹೊಂದುತ್ತಿದ್ದು, ಗ್ರಾಹಕರಿಗೆ ನಿರಂತರ ಸೇವೆ ನೀಡುವ ಸಲುವಾಗಿ ಜೂನ್ ತಿಂಗಳಿಂದ ಬ್ಯಾಂಕ್ ನ ಸಮಯವನ್ನು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಸೇವೆ ನೀಡಲು ನಿರ್ಧರಿಸಲಾಗಿದೆ. ಈ ಬ್ಯಾಂಕ್ ಸೇವೆಗಳನ್ನು ಹೆಚ್ಚಿನ ಅವಧಿಯವರೆಗೆ ಸದುಪಯೋಗಪಡಿಸಿಕೊಳ್ಳಲು ಪ್ರತಿಯೊಬ್ಬ ಗ್ರಾಹಕರಿಗೂ ಅನುಕೂಲಕರವಾಗಿದೆ ಎಂದು ಸಲಹೆ ನೀಡಿದರು.
ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಗೀರೀಶ್.ಎಂ.ಆರ್. ಗ್ರಾಹಕರೊಂದಿಗೆ ಓವರ ಡ್ರಾಪ್ಟ್ ಬಡ್ಡಿ ಕುರಿತು ಸಂವಾದ ನಡೆಸಿದರು, ಮತ್ತು ಸುಕೋ ಬ್ಯಾಂಕ್ ಗ್ರಾಹಕರ ಉತ್ತಮ ಸಂಬಂಧ ಬಯಸುತ್ತದೆ ಎಂದು ತಿಳಿಸಿದರು. ಈ ವೇಳೆ ಸುಕೋ ಬ್ಯಾಂಕ್ ಗ್ರಾಹಕರೂ ಕೂಡ ಚಾಲ್ತಿ ಖಾತೆ, ಎಫ್.ಡಿ ಮತ್ತು ಸಾಲದ ಬಡ್ಡಿಗಳ ಕುರಿತು ಉತ್ತಮ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಬ್ಯಾಂಕ್ ಹುಬ್ಬಳ್ಳಿ ಕ್ಲಸ್ಟರ್ ಮ್ಯಾನೇಜರ ಫಯಾಜ್ ಆಹ್ಮದ್ರವರು, ಹುಬ್ಬಳ್ಳಿ ವಲಯದಲ್ಲಿ 5 ಶಾಖೆಗಳಿದ್ದು, ಅದರಲ್ಲಿ ಮುಂಡರಗಿ ಶಾಖೆಯಲ್ಲಿ ಮಾತ್ರ ಗ್ರಾಹಕರು ಉತ್ತಮವಾಗಿ ಸ್ಪಂದಿಸಿದ್ದು, 2022-23 ನೇ ಸಾಲಿನಲ್ಲಿ ಉತ್ತಮ ಲಾಭ ಗಳಿಸಲು ಸಾದ್ಯವಾಯಿತು ಎಂದು ಹೇಳಿದರು.
ಶಾಖೆಯ ವ್ಯವಸ್ಥಾಪಕ ನಾಗರಾಜ ಸಿದ್ದಿ ಮಾತನಾಡಿ, ವಿಶೇಷವಾಗಿ ಮುಂಡರಗಿ ಗ್ರಾಹಕರು ಉತ್ತಮವಾಗಿ ವ್ಯವಹರಿಸುತ್ತಿದ್ದು, ಗ್ರಾಹಕರೇ ಮಾರ್ಕೆಟಿಂಗ್ ಮಾಡಿ ಖಾತೆ ತೆರೆಸಿ ಬ್ಯಾಂಕ್ ಉತ್ತಮವಾಗಿ ಬೆಳೆಯಲು ಸಹಕಾರಿಯಾಗಿದ್ದಾರೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಎಪಿಎಂಸಿ ಗ್ರಾಹಕರಾದ ಪವನ್ ಚೋಪ್ರ, ಮಂಜುನಾಥ ಕಾಲವಾಡ, ಪ್ರಶಾಂತ ತಾವರಗೆರಿ, ಅಂದಾನಪ್ಪ,ಅಂಕಿತ ಪಾಟೀಲ್, ಕೊಟ್ರೇಶ್ ಅಂಗಡಿ, ಬದ್ರಿನಾರಾಯಣ ತಾವರಗೇರಿ, ಎಸ್.ಬಿ.ಹಿರೇಮಠ, ನವೀನ ಹೆಗ್ಗಡಾಳ, ಸಂತೋಷ ಶಿವಶೆಟ್ಟಿ, ಬಿ.ವಿ ಗೋಡಿ, ಈರಣ್ಣ ಮೇಟಿ, ಬ್ಯಾಂಕ್ ಸಿಬ್ಬಂದಿಗಳಾದ ನಂದಿಶ, ತೇಜಸ್ವಿನಿ, ಸಂಗೀತ, ಇಸ್ಮಾಯಿಲ್, ಮಲ್ಲಿಕಾರ್ಜುನ, ಕೊಟ್ರೇಶ್, ಶಿವುಕುಮಾರ ಹಾಗೂ ಇತರರು ಹಾಜರಿದ್ದರು.