ಮುಂದಗೋಡ

ರೋಟರಿ ಕ್ಲಬ್‌ನಿಂದ ಕೊಡುಗೆ

ರೋಟರಿ ಕ್ಲಬ್‌ನಿಂದ ಕೊಡುಗೆ

ಮುಂಡಗೋಡ:ಇಲ್ಲಿನ ರೋಟರಿ ಕ್ಲಬ್ ವತಿಯಿಂದ 1ಲಕ್ಷ ರೂ.ವೆಚ್ಚದಲ್ಲಿ ತಾಲೂಕಿನ 6 ಶಾಲೆಗಳಿಗೆ ಕೈ ತೊಳೆಯುವ ಸ್ಟೀಲ್ ಬೇಸಿನ್ ಮತ್ತು ಸ್ಟೀಲ್ ನಲ್ಲಿಗಳನ್ನು ಉಚಿತವಾಗಿ ನೀಡಲಾಯಿತು.    

ಪಟ್ಟಣದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಜೂನಿಯರ್ ಕಾಲೇಜು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.2, ಹಳೂರ, ಕೆ.ಜಿ.ಎಸ್‌. ಶಾಲೆ, ಸರಕಾರಿ ಉರ್ದು ಶಾಲೆ, ಚಿಗಳ್ಳಿ ಸರಕಾರಿ ಪ್ರೌಢ ಶಾಲೆಗಳಿಗೆ ರೋಟರಿ ಸಂಸ್ಥೆಯವರು ಪರಿಕರಗಳನ್ನು ಜೋಡಣೆ ಮಾಡಿಸಿ ಕೊಟ್ಟಿದ್ದಾರೆ. ಈ ವೇಳೆ ರೋಟರಿ ಕ್ಲಬ್‌ನ ಅಧ್ಯಕ್ಷ ಶಾಜಿ ಥಾಮಸ್, ಖಜಾಂಚಿ ಎಸ್‌.ಕೆ.ಬೋರಕರ, ಕಾರ್ಯದರ್ಶಿ ಬೈಜು ವಿ.ಜೆ, ಪ್ರಶಾಂತ ಬಾಡಕರ, ರಾಘವೇಂದ್ರ ತಲಗೇರಿ, ಸಂತೋಷ ಕುರಡೇಕರ, ಕಲ್ಮೇಶ ಟೋಪೋಜಿ, ನರಸನಗೌಡ ಗಸ್ತಿ, ಮುಖ್ಯಾಧಾಪಕ ನಾಗರಾಜ ಕಳಲಕೊಂಡ ಉಪಸ್ಥಿತರಿದ್ದರು. 


ಸುದ್ದಿ ಓದಿ