ಬಳ್ಳಾರಿ

ಮೀಸಲಾತಿ ಪಡೆಯುವುದು ಸಂವಿಧಾನಬದ್ಧ ಹಕ್ಕು: ಹಾಲವೀರ​‍್ಪಜ್ಜ

ಮೀಸಲಾತಿ ಪಡೆಯುವುದು ಸಂವಿಧಾನಬದ್ಧ ಹಕ್ಕು: ಹಾಲವೀರ​‍್ಪಜ್ಜ


ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 21 : ಸಮಾಜದಲ್ಲಿ ಮೀಸಲಾತಿ ಹೋರಾಟಗಳು ತೀವ್ರತೆಪಡೆಯುತ್ತಿವೆ. ಮೀಸಲಾತಿ ಪಡೆಯುವುದು ಸಂವಿಧಾನಬದ್ಧ ಹಕ್ಕು ಎಲ್ಲಾ ಹೋರಾಟ ಸಮುದಾಯಗಳಿಗೆ ನಮ್ಮ ಬೆಂಬಲವಿದೆ ಎಂದು ಹಿರೇಹಡಗಲಿಯ ಹಾಲಸ್ವಾಮಿ ಮಠದ ಹಾಲವೀರ​‍್ಪಜ್ಜನವರು ಹೇಳಿದರು. 

ಪಟ್ಟಣದ ಶ್ರೀವಾಲ್ಮೀಕಿ ಭವನದಲ್ಲಿ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ಮಹಾಸಭಾದಿಂದ ಹಮ್ಮಿಕೊಳ್ಳಲಾಗಿದ್ದ, ಶ್ರೀಮಹರ್ಷಿ ವಾಲ್ಮೀಕಿ ಜಯಂತಿಯ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಸಮುದಾಯವು 7.5ರಷ್ಟು ಹೆಚ್ಚು ಮೀಸಲಾತಿ ಸೌಲಭ್ಯವನ್ನು ಕೆಳುತ್ತಿರುವುದು ನ್ಯಾಯಸಮ್ಮತವಾದುದ್ದು, ಮಠದಿಂದ ನಾವು ಈಗಾಗಲೇ ಬೆಂಬಲ ನೀಡಿ ಪತ್ರ ಬರೆಯಲಾಗಿದೆ ಎಂದರು. ಜಯಂತಿ ಆಚರಣೆಗಳು ಜನಸೇರಿದರೆ ಮಾತ್ರ ಜಾತ್ರೆಯಾಗುತ್ತೆ ಎನ್ನುವುದು ಬೇಡ. ಸರಳ ಆಚರಣೆಯಲ್ಲೂ ಜನ ಜಾಗೃತರಾದರೆ ಸಾಕು, ಮುಂದೆ ಕೂಡ ಇದೇ ರೀತಿ ಆಚರಿಸಬೇಕು. ನಿಮ್ಮ ಮಕ್ಕಲ್ಲಿ ನೈತಿಕ ಮೌಲ್ಯಗಳ ಬಗ್ಗೆ ತಿಳಿಸಿ ಎಂದು ಸಮುದಾಯಕ್ಕೆ ಕರೆ ನೀಡಿದರು. 

ಶಾಸಕ ಎಸ್‌.ಭೀಮಾನಾಯ್ಕ್‌ ಕಾರ್ಯಕ್ರಮ ಉದ್ಘಾಟಿಸಿ, ಬಿಜೆಪಿಯವರು ಹೇಳಿದ್ದರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಬೇಡಿಕೆಯಂತೆ ಮೀಸಲಾತಿಯನ್ನು ಹೆಚ್ಚಿಸುತ್ತೇವೆ ಎಂದು, ಆದರೆ ಇಂದಿಗೂ ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ರಾಜ್ಯ ಸರ್ಕಾರವನ್ನು ದೂರಿದರು. ಸಮುದಾಯದವರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದ ಅವರು, ಕಾಮಗಾರಿಗೆ ನೀಡಿರುವ ಅನುದಾನ ಸದ್ಭಳಕೆಯಾಗುತ್ತಿದೆ ಮುಂದಿನ ವರ್ಷದೊಳಗೆ ಬಹುತೇಕ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು. 

ತಹಸೀಲ್ದಾರ್ ಕೆ.ಶರಣಮ್ಮ, ತಾ.ಪಂ.ಇಒ ಹಾಲಸಿದ್ದಪ್ಪ ಪೂಜೇರಿ ಮಾತನಾಡಿದರು. ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ತಾಲೂಕು ಅಧ್ಯಕ್ಷ ವೆಂಕೋಬಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ತಮ್ಮ ಬೇಡಿಕೆಗಳನ್ನು ಶಾಸಕರಿಗೆ ಸಲ್ಲಿಸಿದರು. 

ಇದಕ್ಕೂ ಮೊದಲು ಸಮುದಾಯದಿಂದ ಭವನದಲ್ಲಿ ಉಚಿತ ನೇತ್ರಾ ತಪಾಸಣ ಶಿಬಿರಾವನ್ನು ಏರಿ​‍್ಡಸಿದ್ದರು. 

ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಚಿಂತ್ರಪಳ್ಳಿ ದೇವೇಂದ್ರ, ಮಹಿಳಾ ಘಟಕದ  ತಾಲೂಕು ಅಧ್ಯಕ್ಷೆ ಸುನಂದಾ ಡಾ.ಸತ್ಯನಾರಾಯಣ, ಜಿ.ಪಂ.ಮಾಜಿ ಸದಸ್ಯ ಅಕ್ಕಿತೋಟೇಶ್,  ಡಿಶ್ ಮಂಜುನಾಥ, ಯೋಗಾನಂದ, ಗೆದ್ದಲಗಟ್ಟಿ ತಿಮ್ಮಣ್ಣ, ಮಗಿಮಾವಿನಹಳ್ಳಿ ಹುಚ್ಚಪ್ಪ, ಕುರುಬರ ಸಂಘದ ರಾಜ್ಯ ಉಪಾಧ್ಯಕ್ಷ ಮರಿರಾಮಪ್ಪ, ಹೊನ್ನೂರ​‍್ಪ, ಮುಗಲಿ ಅಂಬಣ್ಣ, ದಾದಾಮ್ಮನವರ ಮಂಜುನಾಥ, ಟಿ.ಸೊಮಣ್ಣ, ಚುಕ್ಕನಕಲ್ಲು ರಾಮಣ್ಣ, ಸೆರೆಗಾರ್ ಹುಚ್ಚಪ್ಪ, ಮಂಜುನಾಥ ವಕೀಲ, ಬೆಳ್ಳಕ್ಕಿ ರಾಮಪ್ಪ, ತೋಟಗಾರಿಕೆ ಇಲಾಖೆಯ ಪರಮೇಶ್ವರ​‍್ಪ, ಬಿಇಒ ಶೇಖರ​‍್ಪ ಹೊರಪೇಟೆ ಸೇರಿದಂತೆ ಇನ್ನಿತರರು ಇದ್ದರು. 

ಸಂಗೀತ ಶಿಕ್ಷಕಿ ಶಾರದ ಮಂಜುನಾಥ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಟಿ.ಸೋಮಶೇಖರ್ ನಿರ್ವಹಿಸಿದರು. 


ಸುದ್ದಿ ಓದಿ