ತಾಳಿಕೋಟಿ

ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ನೀಡಿದೆ

ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ನೀಡಿದೆ

ತಾಳಿಕೋಟಿ: ವಿಶ್ವದಲ್ಲಿಯೇ ಭಾರತ ಅತಿದೊಡ್ಡ ಲಿಖಿತ ಸಂವಿಧಾನವನ್ನು ಹೊಂದಿದ ದೇಶ. ಜಾತ್ಯಾತೀತ ತಳಹದಿಯಲ್ಲಿ ರಚನೆಗೊಂಡ ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕು ಗಳನ್ನು ನೀಡಲಾಗಿದೆ, ಭಾವೈಕ್ಯತೆ ದೇಶದ ಜೀವಾಳವಾಗಿದೆ. ನಾವೆಲ್ಲರೂ ನಮ್ಮ ಜವಾಬ್ದಾರಿಯನ್ನು ಅರಿತು ದೇಶದ ಪ್ರಗತಿಗಾಗಿ ಶ್ರಮಿಸಬೇಕಾಗಿದೆ ಎಂದು ಶಾಸಕ ಎ.ಎಸ್‌. ಪಾಟೀಲ (ನಡಹಳ್ಳಿ) ಹೇಳಿದರು. 

ಗುರುವಾರ ಪಟ್ಟಣದ ಅಂಜುಮನ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ 74ನೇಯ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. 

ಭಾರತ ದೇಶ ಎಲ್ಲರಿಗೂ ಸೇರಿದ್ದು ಇಲ್ಲಿರುವ ಹಿಂದು, ಮುಸ್ಲಿಂ, ಸಿಖ್ ಹಾಗೂ ಕ್ರೈಸ್ತರಿಗೆ ಸಂವಿಧಾನದಲ್ಲಿ ಸಮಾನ ಅವಕಾಶಗಳನ್ನು ನೀಡಲಾಗಿದೆ. ನಮ್ಮಲ್ಲಿ ಪ್ರತಿಯೊಬ್ಬರಲ್ಲಿ ದೇಶ ಮೊದಲು ಎಂಬ ಭಾವನೆ ಬರಬೇಕಾಗಿದೆ. ಹಕ್ಕುಗಳನ್ನು ಪಡೆಯುವದರೊಂದಿಗೆ ಕರ್ತವ್ಯಗಳನ್ನು ನಿಭಾಯಿಸಲು ಮುಂದಾಗಬೇಕು. ಸಂವಿಧಾನ ಪಾಲನೆಯಿಂದಲೇ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದರು.  

ಸಂಸ್ಥೆ ಅಧ್ಯಕ್ಷ ಅಬ್ದುಲ್‌ರಜಾಕ್ ಮನಗೂಳಿ, ಉಪಾಧ್ಯಕ್ಷ್ಷ ಬಾಬುಸಾಬ ಬಡಗಣ, ಕಾರ್ಯದರ್ಶಿ ರಾಜಅಹ್ಮದ್ ಒಂಟಿ, ಡಿ.ಎಡ್‌. ಕಾಲೇಜ ಅಧ್ಯಕ್ಷ ಸಿಕಂದರ ವಠಾರ, ಆಡಳಿತ ಮಂಡಳಿ ಸದಸ್ಯರಾದ ಹಸನ್‌ಸಾಬ ಮನಗೂಳಿ, ದಾವೂದ ಲಾಹೋರಿ, ನಿರಂಜನಶಾ ಮಕಾನದಾರ, ಖಾಸೀಮ ಅವಟಿ, ರಜಾಕ್ ನಾಡಗೌಡ, ಕಾಸೀಮ ಅಬಾಲೆ, ಅಲ್ಲಾಬಕ್ಷ ಮನಿಯಾರ, ಚೋರಗಸ್ತಿ, ಯುವದುರೀಣ ಮಹೆಬೂಬ ಲಾಹೋರಿ, ಶಫೀಕ ಇನಾಮದಾರ, ಶಿಕ್ಷಕರಾದ ಅಬ್ಬಾಸ್ ಡೊಲ್ಚಿ, ಡಿ.ಆಯ್‌. ದುದ್ನಿ ಇದ್ದರು. 


ಸುದ್ದಿ ಓದಿ