ಸಂವಿಧಾನ ತಿಳಿದುಕೊಳ್ಳದೇ ಇರುವವರು ಇದ್ದು ಸತ್ತಂತೆ: ಡಾ. ದಸ್ತಗೀರ ಮುಲ್ಲಾ
ಸಿಂದಗಿ 27: ಭಾರತದ ದೇಶದಲ್ಲಿ ಡಾ.ಬಾಬಸಾಹೇಬ ಅಂಬೇಡ್ಕರವರು ಹುಟ್ಟದೇ ಇದ್ದಿದ್ದರೆ ಇವತ್ತು ಸಂವಿಧಾನ ಬರೆಯದೇ ಇದ್ದಿದ್ದರೆ ನಾವು ನೀವು ಇಲ್ಲಿ ಈ ಕಾರ್ಯಕ್ರಮದಲ್ಲಿ ಕೂಡಲು ಸಾಧ್ಯ ವಿರುತ್ತಿರಲಿಲ್ಲ. ಇವತ್ತು ನಾವು ನೀವು ಇಲ್ಲಿ ಸೇರಲು ಕಾರಣವೇ ಡಾ,ಬಾಬಸಹೇಬ ಅಂಬೇಡ್ಕರ್ರವರು ಬರೆದ ಸಂವಿಧಾನ. ಅದೇ ರೀತಿ ಉಸಿರಾಡಲಿಕ್ಕೆ, ನೀರು ಕುಡಿಯುವದಕ್ಕೆ, ಊಟ ಮಾಡಲಿಕ್ಕೆ ಒಳ್ಳೆ ಒಳ್ಳೆ ಬಟ್ಟಿ ತೊಡಲು ಮಾತ್ರವಲ್ಲದೇ ಇಂದು ನಮ್ಮ ಮಕ್ಕಳು ಉನ್ನತವಾದ ಹುದ್ದೆಗೆ ಏರಲು ಅನುಕೂಲವಾಗಿದ್ದೆ ಈ ಭಾರತದ ಸಂವಿಧಾನ ಎಂದು ಟಿಪ್ಪುಕ್ರಾಂತಿಯ ರಾಜ್ಯಪ್ರಧಾನ ಕಾರ್ಯದರ್ಶಿ ಡಾ. ದಸ್ತಗೀರ ಮುಲ್ಲಾ ಹೇಳಿದರು.
ಪಟ್ಟಣದ ಸಂಗಮ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾದ ಸಂವಿಧಾನ ಸಮರ್ಪಣಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಈ ನೆಲದಲ್ಲಿ ಹುಟ್ಟಿದಂತ ಪ್ರತಿವೊಬ್ಬ ಹೆಣ್ಣು ಮಕ್ಕಳು ತಿಳಿದುಕೂಳ್ಳಲೇಬೇಕು ಸಂವಿಧಾನ ಅಂದರೆ ಏನು, ಸಂವಿಧಾನ ಯಾಕೆ ಬರೆದರು, ಸಂವಿಧಾನದಲ್ಲಿ ಎನಿದೆ ಅನ್ನುವದು, ತಿಳಿದುಕೂಳ್ಳದೆ ಇರುವವರು ಈ ಭೂಮಿ ಮೇಲೆ ಇದ್ದು ಸತ್ತಂತೆ. ಆದ್ದರಿಂದ ಪ್ರತಿಯೊಬ್ಬರು ಸಂವಿಧಾನವನ್ನು ತಿಳಿದುಕ್ಕೊಳ್ಳಿ ತಿಳಿಯದಿದ್ದರೆ ನಿಮ್ಮ ಮಕ್ಕಳಿಂದ ಅಥವಾ ಸಂಗಮ ಸಂಸ್ಥೆಯ ವತಿಯಿಂದ ತಿಳಿದುಕೊಳ್ಳಿ ಎಂದು ತಿಳಿಸಿದರು.
ಸಂಗಮ ಸಂಸ್ಥೆಯ ನಿರ್ದೇಶಕರಾದ ಫಾದರ್ ಸಂತೋಷ ಮಾತನಾಡಿ, ಸಂವಿಧಾನ ನಮ್ಮ ಭಾರತಕ್ಕೆ ಕೊಡುಗೆ ಕೊಟ್ಟಿರುವುದು ಇವತ್ತಿಗೆ 71 ವರ್ಷ ಕಳೆದು ಹೋಗಿದೆ ಇಂದು ಸಂವಿಧಾನ ಓದುವುದು ಮಾತ್ರ ಅಲ್ಲಾ ಪ್ರತಿ ಒಬ್ಬರ ಮನಸಲ್ಲಿ ಇರಬೇಕು ಭಾರತದ ಪ್ರಜೆಗಳಾದ ನಾವು ಅಂದರೆ ಎಲ್ಲಾ ಜಾತಿ ಧರ್ಮಗಳು ಒಳಗೂಂಡಿರುವುದು ಸರಕಾರದ ನೀತಿಯನ್ನು ಒಪ್ಪುವರು ಅದೆ ರೀತಿ ವಿರೋದಿಸುವರು ಇವರು ಕೂಡಾ ನಮ್ಮ ಭಾರತಿಯರು ಕೇಳಿದರೆ ಯಾವುದೇ ಪ್ರಯೋಜನ ವಾಗುತ್ತಿಲ್ಲ ಕೇಳುವವರನ್ನೆ ನೀವು ಭಾರತ ಬಿಟ್ಟು ಬೇರೆ ದೇಶಕ್ಕೆ ಹೋಗಿ ಎನ್ನುವವರು ಕೂಡಾ ನಮ್ಮವರೆ ಇದರಿಂದ ತಪ್ಪು ಇದ್ದರು ಕೂಡಾ ಜನ ಮೌನ ತಾಳಿರುತ್ತಾರೆ ಆದರೆ ಯಾರೆ ಏನೆ ಅನ್ನಲ್ಲಿ ನಾವು ಮಾತ್ರ ಸಂವಿಧಾನವನ್ನು ಗೌರವಿಸಬೇಕು ಅದೇ ರೀತಿ ಪ್ರತಿಯೋಬ್ಬರು ಭಾರತದ ಸಂವಿಧಾನವನ್ನು ಗೌರವಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಂಗಮ ಸಂಸ್ಥೆಯ ಸಹ ನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿ ಮೇಲ್ಲೋ ಇವರು ಪ್ರಾಸ್ಥಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಿಳಾ ಸಂಘದ ಸದಸ್ಯರು ಕಟ್ಟಡ ಕಾರ್ಮಿಕರು ವಿಶೇಷ ಚೇತನರು ನರೇಗಾದಲ್ಲಿ ಕೆಲಸ ಮಾಡುವವರೆಲ್ಲರು ಉಪಸ್ತಿತರಿದ್ದರು.
ವಿಜಯ ಬಂಟನೂರ ಇವರು ನಿರೂಪಿಸಿದರು , ಮಲಕಪ್ಪ ಎಸ್ ಹಲಗಿ ಸ್ವಾಗತಿಸಿದರು. ಬಸವರಾಜ ಬಿಸನಾಳ ವಂದಿಸಿದರು.