ಬಳ್ಳಾರಿ

ಸಂವಿಧಾನ- ಸಾಮಾಜಿಕ ನ್ಯಾಯಕ್ಕಾಗಿ ಪೂರ್ವಭಾವಿ ಸಭೆ

ಸಂವಿಧಾನ- ಸಾಮಾಜಿಕ ನ್ಯಾಯಕ್ಕಾಗಿ ಪೂರ್ವಭಾವಿ ಸಭೆ

ಬಳ್ಳಾರಿ 17: ನಗರದಲ್ಲಿ ನಡೆಯಲಿರುವ ವಿಚಾರಸಂಕಿರಣದಲ್ಲಿ ಜಸ್ಟಿಸ್ ಎಚ್ ಎನ್ ನಾಗಮೋಹನದಾಸ್  ಮುಂದಿನ ದಿನಗಳಲ್ಲಿ ಭಾಗವಹಿಸುತ್ತಿರುವ ಕಾರಣಕ್ಕಾಗಿ ಈ ಸಾವಿರಾರು ವರ್ಷಗಳಿಂದ ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ದಲಿತ ಶೂದ್ರ  ಜಾತಿ ಎಂದು ಗುರುತಿಸಲ್ಪಟ್ಟ ಜಾತಿಯಲ್ಲಿ ಹುಟ್ಟಿದ ಎಂಬ ಕಾರಣಕ್ಕಾಗಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ,ಅಸಮಾನತೆಗೆ ತುಳಿತಕ್ಕೆ ಒಳಪಟ್ಟ ಎಸ್ಸಿ ಎಸ್ಟಿ ಸಮುದಾಯಕ್ಕೆ ನಮ್ಮ ದೇಶದ ಸಂವಿಧಾನ ಜಾರಿಗೆ ಬಂದ 950 ಜನವರಿ 26ರಂದು ಐತಿಹಾಸಿಕ ಘಟನೆಯಾಗಿದೆ. ನಮ್ಮ ದೇಶವನ್ನು ಕಲ್ಯಾಣ ರಾಷ್ಟ್ರವನ್ನಾಗಿ ಕಟ್ಟುವ ಸಂಕಲ್ಪದೊಂದಿಗೆ ಜಾರಿಗೆ ಬಂದ ಸಂವಿಧಾನಕ್ಕೆ 72 ವರ್ಷ ಕಳೆದಿವೆ ಪರಿಶಿಷ್ಟ ಜಾತಿ ಪಂಗಡಗಳಿಗೆ ತಮಗೆ ವಿಮೋಚನೆ ಸಿಕ್ಕಿತು. ಜಾತಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದ ನಮಗೆ  ಮುಕ್ತಿ ಸಿಕ್ಕಿತು ಎಂದು ಹರ್ಷ ವ್ಯಕ್ತಪಡಿಸಿದರು. ಕಲ್ಯಾಣ ರಾಷ್ಟ್ರಕಟ್ಟುವ ಸಂವಿಧಾನದ ಮೂಲ ತತ್ವದಲ್ಲಿ ಆರ್ಥಿಕ ಸಮಾನತೆ ಶೈಕ್ಷಣಿಕ ಸಮಾನತೆ ಸಾಮಾಜಿಕ ಸಮಾನತೆಯನ್ನು ಹೊಂದುವ  ಉದ್ದೇಶವಿತ್ತು. ನಾವು ಪಡೆದ ಸ್ವಾತಂತ್ರದ ಎಪ್ಪತ್ತೈದು ವರ್ಷಗಳಲ್ಲಿ ನಮ್ಮನ್ನಾಳಿದ ಸರ್ಕಾರಗಳು ಇವುಗಳನ್ನು ಈ ದೇಶದ ಜನರಿಗೆ ನೀಡುವಲ್ಲಿ ಸಫಲರಾಗಿದ್ದಾರೆ ಏನು ಎಂಬ ಪ್ರಶ್ನೆ ಕಾಣುತ್ತಿದೆ. ಅದರಲ್ಲೂ ಈ ದೇಶದ ಶೇಕಡಾ 26ರಷ್ಟು ಜನಸಂಖ್ಯೆ ಹೊಂದಿರುವ ಎಸ್ ಸಿ /ಎಸ್ ಟಿ ಸಮುದಾಯಗಳು ಇನ್ನು ಬೀದಿಯಲ್ಲಿ ನಿಂತು ಉದ್ಯೋಗ ಕೊಡಿ, ಮನೆ ಕೊಡಿ,ಮೂರತ್ತು ಊಟ ಕೊಡಿ,ಶಿಕ್ಷಣ ಕೊಡಿ, ಸಾಮಾಜಿಕ ನ್ಯಾಯ ಕೊಡಿ,ಎಂದು ಬಿಡುತ್ತಿರುವುದನ್ನು ನೋಡುತ್ತಿದ್ದೇವೆ. ಈಗಿರುವ ಮೀಸಲಾತಿ ವ್ಯವಸ್ಥೆಯಿಂದ ಈ ಎಲ್ಲಾ ಅನಿಷ್ಟ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯವೇ? ಎಂಬ ಯಕ್ಷ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಇದಕ್ಕೆಲ್ಲ ಉತ್ತರ ಹುಡುಕುವ ಪ್ರಯತ್ನವೇ  ದಿನಾಂಕ:21-10-2022ರಂದು ಬಳ್ಳಾರಿ ನಗರದ ಬಿ ಡಿ ಎ ಸಭಾಂಗಣದಲ್ಲಿ ನಡೆಯುವ "ಸಂವಿಧಾನ ಮತ್ತು ಸಾಮಾಜಿಕ ನ್ಯಾಯ "ಎಂಬ ವಿಚಾರ ಸಂಕಿರಣ ಹಮ್ಮಿಕೊಂಡಿರುವುದು ಈ ವಿಷಯ ಕುರಿತು ಸಂವಿಧಾನ ತಜ್ಞರು ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಗಳಾದ ಎಚ್‌. ಎನ್ ನಾಗಮೋಹನದಾಸ್ ಮಾತನಾಡಲಿದ್ದಾರೆ ಎಂದು ಮುಂಡ್ರಿಗಿ ನಾಗರಾಜ ರವರು ಹೇಳಿದ್ದಾರೆ. ಹಾಗೂ ಈ ಸಭೆಯಲ್ಲಿ ತಾಯಣ್ಣ, ಶಿವಶಂಕರ,ಮುಂಡರಗಿ ನಾಗರಾಜ,ಬಾದಾಮಿ ಶಿವಲಿಂಗಪ್ಪ,ಎಚ್‌. ಗೋವಿಂದರಾಜು, ಕುಂದಾ ವರ ರಾಮುಡು, ಎಚ್‌. ಈರ​‍್ಪ  ದಲಿತ ಸಂಘಟನೆ ಸದಸ್ಯರು ಇತರರು ಭಾಗವಹಿಸಿದ್ದರು. 


ಸುದ್ದಿ ಓದಿ