ಸಂವಿಧಾನ ಜಾಗೃತಿ ಜಾಥಾ: ಸ್ತಬ್ಧಚಿತ್ರ ಮೆರವಣಿಗೆ ಕಾರ್ಯಕ್ರಮ
ಶಿಗ್ಗಾವಿ 09: ಸಂವಿಧಾನ ದಿನಾಚರಣೆ ಅಂಗವಾಗಿ ರಾಜ್ಯಾದ್ಯಂತ “ಸಂವಿಧಾನ ಜಾಗೃತಿ ಜಾಥ” ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ದಿನಾಂಕ: 26-01-2024 ರಿಂದ 23-02-2024ರ ವರೆಗೆ ಹಾವೇರಿ ಜಿಲ್ಲಾದ್ಯಂತ ಸ್ತಬ್ಧಚಿತ್ರ ಮೇರವಣಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅದರಂತೆ ದಿ 4 ರಂದು ಹೋತನಹಳ್ಳಿ, ಹುನಗುಂದ, ಅಂದಲಗಿ, ಕೋಣನಕೇರಿ ಮತ್ತು ಚಂದಾಪೂರ ಗ್ರಾಮ ಪಂಚಾಯತಗಳ ಸ್ತಬ್ಧಚಿತ್ರ ಮೇರವಣಿಗೆ ಕಾರ್ಯಕ್ರಮದಲ್ಲಿ ಚುನಾಯಿತ ಜನಪ್ರತಿನಿಧಿಗಳು, ದಲಿತ ಮುಖಂಡರುಗಳು, ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಅಧಿಕಾರಿಗಳು, ಸಿಬ್ಬಂದಿವರ್ಗದವರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಹೋಬಳಿ ಮಟ್ಟದ ಅಧಿಕಾರಿಗಳು ಗ್ರಾಮದ ಸಮಸ್ತ ನಾಗರಿಕರು ಗ್ರಾಮ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು, ಗ್ರಾಮ ಪಂಚಾಯತಿಯ ಸಿಬ್ಬಂದಿಗಳು ಮತ್ತು ವಿವಿಧ ಇಲಾಖೆಗಳ ತಾಲೂಕ ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಣ್ಯ ಮಾನ್ಯರು ಮುದ್ದುಮಕ್ಕಳು ಒಟ್ಟಾರೆ ಎಲ್ಲರು ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಸಂತೋಷವಾಗಿ ಸಂಭ್ರಮದಿಂದ ವಿಜೃಭಂಣೆಯಿಂದ ನೇರವೇರಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ವೇಷ ಭೂಷಣಗಳ ಸ್ಪರ್ಧೆಗಳಲ್ಲಿ ಭಾಗವಹಿಸಿದಂತಹ ಮುದ್ದು ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ವಿವಿಧ ಇಲಾಖೆ ಅಧಿಕಾರಿಗಳು, ತಾಲೂಕಿನ ಎಲ್ಲ ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗೋಳಿಸಿದರು ಎಂದು ಸಹಾಯಕ ನಿರ್ದೇಶಕಿ ಸಮಾಜ ಕಲ್ಯಾಣ ಇಲಾಖೆ ಶಿಗ್ಗಾಂವ ಸರಸ್ವತಿ ಗಜಕೋಶ ತಿಳಿಸಿದ್ದಾರೆ.