ಸೊಂಕು ಹೆಚ್ಚಿರುವ ಪ್ರದೇಶಗಳನ್ನು ಗಣನೆಗೆ ತೆಗೆದುಕೊಳ್ಳಿ : ಸಚಿವ ಆನಂದ ಸಿಂಗ್
ಹಗರಿಬೊಮ್ಮನಹಳ್ಳಿ.ಎ.27 : ತಾಲೂಕಿನ ಒಟ್ಟು 301 ಪ್ರಕರಣಗಳಲ್ಲಿ ಗ್ರಾಮೀಣ ಭಾಗ ಅಥವಾ ನಗರ ಪ್ರದೇಶದಲ್ಲಿವೆಯೆ ಎಂಬುದನ್ನು ಖಾತರಿ ಪಡಿಸಿಕೊಂಡು ಅವರ ಆ ಪ್ರದೇಶಗಳನ್ನು ಗಣನೆಗೆ ತೆಗೆದುಕೊಂಡು ಸೊಂಕನ್ನು ನಿವಾರಿಸುವಂತೆ ಬಳ್ಳಾರಿ-ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅರೋಗ್ಯ ಇಲಾಖಾಧಿಕಾರಿಗೆ ತಿಳಿಸಿದರು.
ಪಟ್ಟಣದ ಸರ್ಕ್ಯೊಟ್ ಹೌಸ್ನಲ್ಲಿ ನಡೆದ ಕೊವಿಡ್ 19 ತಡೆಗಟ್ಟಲು ಕೈಗೊಳ್ಳಲಿರುವ ಪರೀಶೀಲನಾ ಸಭೆಯಲ್ಲಿ ಅವರು ಮಾತನಾಡಿ,ತಾಲೂಕಿನಲ್ಲಿ ಕೊವಿಡ್ ಸೊಂಕಿನ ಪ್ರಕರಣಗಳು ಕಡಿಮೆ ಸಂಖ್ಯೆಲ್ಲಿದ್ದು ತಾಲೂಕಾಡಳಿತದ ಕಾರ್ಯ ಪ್ರವೃತ್ತಿಯನ್ನು ಶ್ಲಾಘಿಸಿದರು ರಾ್ಯಪಿಡ್ ಟೆಸ್ಟ್ನಲ್ಲಿ ಪಾಸಿಟಿವ್ ಎಂದು ತೋರಿಸಿದ ಕೋಡಲೇ ಅವರಿಗೆ ಟ್ರೀಟ್ಮೆಂಟ್ ಮಾಡಲು ಮುಂದಗಿ ಅದನ್ನು ಬಿಟ್ಟು ಜಿಲ್ಲಾ ಆಸ್ಪತ್ರೆಗೆ ಸ್ಯಾಂಪಲ್ ನೀಡಲು ಹೋಗಿ ಸಾರ್ವಜನಿಕರಿಗೆ ಹೊರೆ ಮಾಡಬೇಡಿ ಎಂದರು.
ಆಸ್ಪತ್ರೆಯಲ್ಲಿ ನೂರು ಹಾಸಿಗೆ ಇದ್ದು ಅದರಲ್ಲಿ 32 ಬೆಡ್ಗಳನ್ನು ಕೋವಿಡ್ ಸೊಂಕಿತರಿಗೆ ಮೀಸಲಿಡಲಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ಶಂಕರ್ನಾಯ್ಕ್ ತಿಳಿಸಿದರು,ಇದಕ್ಕೆ ಸಚಿವರು ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಸೇರಿದಂತೆ ಕೋವಿಡ್ ಸೊಂಕಿತರ ವಾರ್ಡ್ನಲ್ಲಿ ಹೋಗುವವರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದರು.
ತುರ್ತು ಚಿಕಿತ್ಸಾ ಘಟಕ ಹಾಗೂ ನವಜಾತ ಶಿಶು ಆರೋಗ್ಯ ಆರೈಕೆಯ ವಿಭಾಗಕ್ಕೆ ಸ್ಥಳ ನೀಡುವಂತೆ ಮುಕ್ಯ ವೈದ್ಯಾಧಿಕಾರಿ ಮನವಿಗೆ ಸ್ಪಂದಿಸಿದ ಸಚಿವರು ಉತ್ತರಿಸಿ ನಿಮ್ಮ ಪಟ್ಟಣದಲ್ಲಿ ಸರಕಾರಿ ಸ್ಥಳವನ್ನು ಗುರುತಿಸಿ ನೀಡುವಂತೆ ತಹಶೀಲ್ದಾರ್ಗೆ ಸೂಚಿಸಿದರು ಇದಕ್ಕೆ ಉತ್ತರಿದ ತಹಶೀಲ್ದಾರ್ ಹತ್ತಿರದಲ್ಲಿ ಯಾವುದೇ ಸ್ಥಳವಿಲ್ಲ ಪಟ್ಟನದಿಂದ ಐದಾರು ಕೀಮಿ ದೂರವಿದ ಎಂದಾಗ ಸ್ಥಳೀಯ ಶಾಸಕರೊಂದಿಗೆ ತಾಲೂಕು ಅಧಿಕಾರಿಗಳು ಚರ್ಚಿಸಿ ಸ್ಥಳದ ನೀಯೋಜನೆ ಮಾಡಿಕೊಳ್ಳಿ ಎಂದರು.
ಆಸ್ಪತ್ರೆಗಳಲ್ಲಿ ಯಾವುದೇ ಕುಂದು ಕೊರತೆ ಕಾಣದಂತೆ ಎಚ್ಚರವಹಿಸಿ, ಆಕ್ಸಿಜನ್, ವೆಂಟಿಲೇಟರ್ಗಳ ಕೊರತೆ ಇದ್ದರೆ ಶೀಘ್ರವೇ ಪರಿಹರಿಸಲಾಗುವುದು, ಲಾಕ್ಡೌನ್ ಅಗುವ ಭಯದಲ್ಲಿ ಗುಳೆ ಹೋದವರೆಲ್ಲ ವಾಪಸ್ಸಾಗುವ ಮಾಹಿತಿ ಇದ್ದು ಹೇಗೆ ನಿಭಾಯಿಸುವಿರೆಂದು ಸಚಿವರು ಕೇಳಿದ ಪ್ರಶ್ನೆಗೆ ಡಾ.ಪವಿತ್ರ ಉತ್ತರಿಸಿ ಆಶಾ ಕಾರ್ಯಕರ್ತೆಯರ ಮನೆ ಮನೆಗೆ ಭೇಟಿ ನೀಡುತ್ತಾ ಅಲ್ಲಿನ ಸಂಪೂರ್ಣ ಮಾಹಿತಿ ಕಲೆ ಹಾಕಿ ಅವರನ್ನು ಹೋ ಕ್ವಾರೆನ್ಟೈನ್ನಲ್ಲೇ ಇರುವಂತೆ ಸೂಚಿಸಲಾಗುವುದು ಹಾಗೂ ಅಂತಹವರಲ್ಲಿ ಸೊಂಕು ದೃಢವಾದರೆ ಅವರ ಆರೋಗ್ಯದ ಪರಿಸ್ಥಿತಿ ಅನ್ವಯ ಚಿಕಿತ್ಸೆ ನೀಡಲಾಗುವುದು ಎಂದರು.
ತಹಶೀಲ್ದಾರ್ ಶರಣಮ್ಮ ಮಾತನಾಡಿ ತಾಲೂಕಿನಲ್ಲಿ ವ್ಯಾಕ್ಸಿನೇಶನ್ ಹಾಕಿಸುವಲ್ಲಿ ಹಿಂದುಳಿದ ಅನೇಕ ಗ್ರಾಮಗಳನ್ನು ಗುರುತಿಸಿ ಅಡ್ಡಪರಿಣಾಮದ ಬಗ್ಗೆ ಇದ್ದ ಭಯವನ್ನು ತಿಳಿಗೊಳಿಸಿ ವ್ಯಾಕ್ಸಿನೇಶನ್ ಹಾಕಿಸುವಂತೆ ಮನವೋಲಿಸಲಾಗಿದೆ ಹಾಗೂ ವಿವಿಧ ರೀತಿಯ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಾಗಿದೆ ಎಂದು ತಿಳಿಸಿದರು.
ಈ ಸಂಧರ್ಭಧಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.