ಕಾಂಗ್ರೆಸ್ 130 ವರ್ಷಗಳ ಇತಿಹಾಸವಿರುವ ಪಕ್ಷ : ನಿಯಾಜಿ
ಬಳ್ಳಾರಿ 20: ಕಾಂಗ್ರೆಸ್ ಪಕ್ಷ 130 ವರ್ಷಗಳ ಇತಿಹಾಸವಿರುವ ಪಕ್ಷವಾಗಿದ್ದು ಇದು ಬಡವರ ದೀನ ದಲಿತರ, ಕೂಲಿ ಕಾರ್ಮಿಕರ, ಕೃಷಿ ಕಾರ್ಮಿಕರ ಅಭಿವೃದ್ದಿಗಾಗಿ ಸತತ ಶ್ರಮಿಸುತ್ತಾ ಬಂದಿದೆ ಎಂದು ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹೆಚ್.ಎನ್ ಮೊಹಮ್ಮದ್ ಇಮಾಮ್ ನಿಯಾಜಿರವರು ಹೇಳಿದರು.
ವಿಜಯನಗರ ಕ್ಷೇತ್ರ ಹೊಸಪೇಟೆಯ ಪರ್ವಾಜ್ ಪ್ಲಾಜಾ 2ನೇ ಮಹಡಿಯ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸೇವಾದಳ ಹಾಗೂ ಕಾಂಗ್ರೆಸ್ ಪಕ್ಷದ ಸಂಘಟನಾ ಸಭೆ ಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಇಂದು ಬಿ.ಜೆ.ಪಿ ಪಕ್ಷ ಕೇವಲ ಉದ್ಯಮಿಗಳ ಪರವಾಗಿದ್ದು ಯಾವುದೇ ಜನಪರ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಜಾರಿಗೆ ತರದೇ ದಿನಸಿ ವಸ್ತುಗಳ, ಆಹಾರ ಧಾನ್ಯಗಳು, ಪೆಟ್ರೋಲ್, ಡೀಸಲ್, ಗ್ಯಾಸ್ ಸಿಲೆಂಡರ್ ಪ್ರತಿಯೊಂದು ಬೆಲೆಗಳನ್ನು ಏರಿಸುತ್ತಾ ಹಾಗು ಎಲ್ಲಾ ಸರಕಾರಿ ಸಂಸ್ಥೆಗಳನ್ನು ಅಂಬಾನಿ ಅದಾನಿ ಕಂಪನಿಗಳಿಗೆ ಮಾರಾಟ ಮಾಡುತ್ತಾ ದೇಶವನ್ನು ಅಧೊಗತಿಗೆ ತಂದಿದೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯರು ಬಿ.ಜೆ.ಪಿ ಪಕ್ಷದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅತ್ಯಂತ ಬಹುಮತದಿಂದ ಗೆಲ್ಲಿಸಿ ಅಧಿಕಾರಕ್ಕೆ ತರಬೇಕೆಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷದ ಸೇವಾದಳ ಘಟಕದ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಪದಾಧಿಕಾರಿಗಳು, ಕಮಲಾಪುರ ಬ್ಲಾಕ್ ಅಧ್ಯಕ್ಷ ವಿ. ಸೋಮಣ್ಣ, ಗುಜ್ಜಲ್ ನಾಗರಾಜ್, ರಾಮಣ್ಣ , ವೀರಯ್ಯ ಸ್ವಾಮಿ, ಸತ್ಯ ನಾರಾಯಣ, ಬಸವರಾಜ್ ಮೇಟಿ, ನನ್ನಿ ಬಿ, ಅಣ್ಣ ಮಲೈ, ಹಾಗು ಮುಂಚೂಣಿ ಘಟಕಗಳ ಅಧ್ಯಕ್ಷರು ಮತ್ತು ಸದಸ್ಯರು, ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.