ಮುಂಡರಗಿ

ಕಾಂಗ್ರೇಸ್ ಪಕ್ಷವು ಪಕ್ಷಕ್ಕಾಗಿ ನಿಷ್ಠೆಯಿಂದ ಪ್ರಮಾಣಿವಾಗಿ ಕೆಲಸ ಮಾಡಿ: ಎಸ್‌. ಡಿ. ಮಕಾಂದಾರ

ಕಾಂಗ್ರೇಸ್ ಪಕ್ಷವು ಪಕ್ಷಕ್ಕಾಗಿ ನಿಷ್ಠೆಯಿಂದ ಪ್ರಮಾಣಿವಾಗಿ ಕೆಲಸ ಮಾಡಿ: ಎಸ್‌. ಡಿ. ಮಕಾಂದಾರ

ಮುಂಡರಗಿ, 27 : ಗದಗ ಜಿಲ್ಲಾ ಮಟ್ಟದ ತ್ರೈಮಾಸಿಕ ಪರೀಶೀಲನಾ ಸಮಿತಿಗೆ (ಕೆ.ಡಿ.ಪಿ) ಅಧಿಕಾರೇತರ ಸದಸ್ಯ ಸರ್ಕಾರದ ಆದೇಶದ ಅಡಿ ಮುಂಡರಗಿ ತಾಲೂಕಿನಿಂದ ನೇಮಕಗೊಂಡಿರುವಂತಹ ಎಸ್‌. ಡಿ. ಮಕಾಂದಾರರನ್ನು ಮುಂಡರಗಿ ತಾಲೂಕು ಅಂಜುಮನ್ ಏ-ಇಸ್ಲಾಂ ಕಮಿಟಿ ವತಿಯಿಂದ ಸನ್ಮಾನಿಸಿ ಗೌರವಿಸಲಾಗಿತು. 

ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್‌. ಡಿ. ಮಕಾಂದಾರ, ಕಾಂಗ್ರೇಸ್ ಪಕ್ಷವು ಪಕ್ಷಕ್ಕಾಗಿ ನಿಷ್ಠೆಯಿಂದ ಪ್ರಮಾಣಿವಾಗಿ ಕೆಲಸ ಮಾಡಿದವರನ್ನು ಗುರುತಿಸಿ ಸೂಕ್ತ ಸ್ಥಾನ ಮಾನಗಳನ್ನು ನೀಡುತ್ತಿದೆ. ಪಕ್ಷಕ್ಕೆ ಯಾರು ದೊಡ್ಡವರಲ್ಲಾ, ಪಕ್ಷ ದೊಡ್ಡದೆಂದು ಎಲ್ಲರೂ ಭಾವಿಸಿಕೊಂಡು ಪಕ್ಷದ ಸಂಘಟನೆಗಾಗಿ ಶ್ರಮವಹಿಸಿ ಕೆಲಸ ಮಾಡಬೇಕು ಅಂತವರನ್ನು ಪಕ್ಷವು ತಾನಾಗಿಯೇ ಗುರುತಿಸಿ ಸೂಕ್ತ ಸ್ಥಾನವನ್ನು ನೀಡುತ್ತದೆ. 

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವಂತಹ ಕಾಂಗ್ರೇಸ್ ಪಕ್ಷವು ಈ ರಾಜ್ಯದ ಬಡವರು, ರೈತರು, ಕೂಲಿ ಕಾರ್ಮಿಕರ, ಶೋಷಿತರ, ದಿನ ದಲಿತರ ಅಭಿವೃದ್ಧಿಯ ಪರವಾಗಿಯೇ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ, ಈ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಜಾರಿಗೆ ಬಂದಾಗಿನಿಂದ ಬಹುತೇಕ ಬಡ ಕುಟುಂಬಗಳಿಗೆ ಆರ್ಥಿಕ ಭದ್ರತೆ ಹೆಚ್ಚಾಗುತ್ತಿದೆ. ಹಾಗೇ ರಾಜ್ಯದಲ್ಲಿ ಸಿದ್ಧರಾಮಯ್ಯನವರು ಮುಖ್ಯಮಂತ್ರಿಗಲಾಗಿ ಮುಂದುವರಿಯುತ್ತಾರೆ, ವಿರೋಧ ಪಕ್ಷದವರ ಆಧಾರ ರಹಿತ ಆರೋಪಕ್ಕೆ ಕಾಂಗ್ರೇಸ್ ಪಕ್ಷವು ತಕ್ಕ ಉತ್ತರ ನೀಡುತ್ತಿದೆ.  ಹಾಗೇ ಕಾಂಗ್ರೇಸ್ ಪಕ್ಷವು ಹಾಗೂ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು  ಹಾಗೂ ಗದಗ ಜಿಲ್ಲಾ ಉಸ್ತೂವಾರಿ ಸಚಿವರಾದ ಎಚ್‌.ಕೆ. ಪಾಟೀಲ ನನ್ನ ಮೇಲೆ ವಿಶ್ವಾಸ, ನಂಭಿಕೆ ಇಟ್ಟು ವಹಿಸಿದ ಜವಾಬ್ದಾರಿಯನ್ನು ಪ್ರಮಾಣಿಕವಾಗಿ ನಿರ್ವಹಿಸುತ್ತದೆ. ಹಾಗೂ ಹಿಂದುಳಿದ ನಮ್ಮ ಮುಂಡರಗಿ ತಾಲೂಕಿನಗೆ ದೊರೆಯುವಂತಹ ಸೌಲಭ್ಯಗಳನ್ನು ತರುವದಕ್ಕೆ ತಾಲೂಕಿನ ಎಲ್ಲಾ ಜನತೆಯ ಸೇವಕನಾಗಿ ಕೆಲಸ ಮಾಡುತ್ತೆನೆ ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಡರಗಿ ಅಂಜುಮನ್ ಏ-ಇಸ್ಲಾಂ ಕಮಿಟಿಯ ಅಧ್ಯಕ್ಷ ಮಹಬೂಬಸಾಬ ಹವಾಲ್ದಾರ ವಹಿಸಿದ್ದರು. 

ಈ ಸಂದರ್ಭದಲ್ಲಿ  ಎಂ.ಯು.ಮಕಾಂದಾರ, ವಿ.ಎಲ್‌.ನಾಡಗೌಡರ, ರಾಜು ಡಾವಣಗೇರಿ, ಇಸ್ಮಾಯಿಲ್ ಮುಲ್ಲಾ, ಅಸ್ಲಂ ಲಕ್ಕುಂಡಿ, ಅನ್ವರ್ ಹಣಗಿ, ಸಿರಾಜ ಯರಗುಡಿ, ನೂರುಸಾಬ ಉಸ್ತಾದ, ಲಾಡಸಾಬ ಕಾತರಕಿ, ಜಲಾಲಸಾಬ ವಕಾರದ, ನಜೀರ ಅಳವುಂಡಿ, ಹುಸೇನಸಾಬ ಕನಕವಾಡ, ಅಲ್ಲಾವುದ್ಧಿನ ಬನ್ನಿಗೋಳ, ಖಾದರಸಾಬ ಬಸ್ತಿ, ರಸೂಲಸಾಬ ಹಲವಾಗಲಿ,  ಅಸ್ಲಂ ಲಕ್ಕುಂಡಿ, ಮಹಬೂಬಸಾಬ ನಾಗನೂರು, ಯಾಸಿನ್ ಬಾಗಲಿ, ವಿನೋದ ವಡ್ಡರ, ಮಹ್ಮದರಫೀ ಕನಕವಾಡ, ಇರಪಾನ್ ಸೈಯದ್, ರಿಯಾಜ್ ಹಂಚನಾಳ,  ಮಹ್ಮದರಪೀ ದೊಡ್ಡಮನಿ, ಜಾಕೀರ್ ನಸಿಪುಡಿ, ಹಾಗೂ ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡರು, ಯುವ ಮುಖಂಡರು, ಅಂಜುಮನ್ ಏ-ಇಸ್ಲಾಂ ಕಮಿಟಿಯ ಸದಸ್ಯರು, ಮುಸ್ಲಿಂ ಸಮಾಜದ ಮುಖಂಡರು ಇದ್ದರು. 


ಸುದ್ದಿ ಓದಿ