ತಾಳಿಕೋಟಿ

ಸಿದ್ಧಲಿಂಗ ಶ್ರೀಗಳ ಆಶೀರ್ವಾದ ಪಡೆದ ಕಾಂಗ್ರೆಸ್ ನಾಯಕಿ ಕಳ್ಳಿಮನಿ

ಸಿದ್ಧಲಿಂಗ ಶ್ರೀಗಳ ಆಶೀರ್ವಾದ ಪಡೆದ ಕಾಂಗ್ರೆಸ್ ನಾಯಕಿ ಕಳ್ಳಿಮನಿ

ತಾಳಿಕೋಟಿ: ವಿಜಯಪುರ ಜಿಲ್ಲಾ ಪಂಚಾಯತ್‌ನ ಮಾಜಿ ಅಧ್ಯಕ್ಷೆ ಹಾಗೂ ದೇ.ಹಿಪ್ಪರಗಿ ಮತಕ್ಷೇತ್ರದ ಕಾಂಗ್ರೇಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾದ ಸುಜಾತಾ ಕಳ್ಳಿಮನಿ ಅವರು ನಾಡಿನ ಸಾಮರಸ್ಯದ ಪ್ರತೀಕವಾದ ಖಾಸ್ಗತೇಶ್ವರ ಮಠಕ್ಕೆ ಭೇಟಿ ನೀಡಿ ಪ.ಪೂ. ಸಿದ್ಧಲಿಂಗದೇವರು ಅವರನ್ನು ಸನ್ಮಾನಿಸಿ ಆಶೀರ್ವಾದ ಪಡೆದುಕೊಂಡರು. 

ಪಟ್ಟಣಕ್ಕೆ ಖಾಸಗಿ ಕಾರ್ಯಕ್ರಮ ಒಂದರಲ್ಲಿ  ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಕಾಂಗ್ರೇಸ್ ನಾಯಕಿ ಸುಜಾತಾ ಕಳ್ಳಿಮನಿ ಅವರು ತಮ್ಮ ಪತಿ ಸೋಮನಾಥ ಕಳ್ಳಿಮನಿ ಅವರೊಂದಿಗೆ ಮಠಕ್ಕೆ ಭೇಟಿ ನೀಡಿ ಶ್ರೀ ಖಾಸ್ಗತರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಶ್ರೀಗಳ ದರ್ಶನ ಪಡೆದು ಅವರಿಗೆ ಗೌರವ ಸಮರೆ​‍್ಣ ಸಲ್ಲಿಸಿದರು. 

ಕಳ್ಳಿಮನಿ ದಂಪತಿಗಳಿಗೆ ಆಶೀರ್ವಾದ ನೀಡಿ ಮಾತನಾಡಿದ ಶ್ರೀಗಳು ಅವರು ಸಮಾಜಮುಖಿಯಾಗಿ ಮಾಡುತ್ತಿರುವ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಸಮಾಜ ಸೇವಾ ಕಾರ್ಯಗಳನ್ನು ಮುಂದುವರೆಸಿ ಕೊಂಡುಹೋಗಲು ತಿಳಿಸಿದರು. 

ಈ ಸಮಯದಲ್ಲಿ ಶ್ರೀಮಠದ ಉಸ್ತುವಾರಿ ವೇ.ಮೂ. ಮುರುಗೇಶ ವಿರಕ್ತಮಠ ಸೋಮನಾಥ ಕಳ್ಳಿಮನಿ, ಸಿದ್ದು ಮದರಿ, ಶ್ರೀಮತಿ ದೇವಮ್ಮ ಕುರಿ, ಮುತ್ತು ಇದ್ದರು. 


ಸುದ್ದಿ ಓದಿ