ಕಾಂಗ್ರೆಸ್ ಮುಳುಗುತ್ತಿರುವ ಹಡಗು: ನಡಹಳ್ಳಿ
ತಾಳಿಕೋಟಿ : ದೇಶದ ಜನರಿಂದ ತಿರಸ್ಕರಿಸಲ್ಪಟ್ಟಿರುವ ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲೂ ಅಧಿಕಾರವನ್ನು ಕಳೆದುಕೊಳ್ಳುತ್ತಾ ಬರುತ್ತಿದೆ. ಅದಕ್ಕೆ ಮುಂದೆಯೂ ಭವಿಷ್ಯವಿಲ್ಲ, ಅದು ಮುಳುಗುತ್ತಿರುವ ಹಡಗು ಅದರಲ್ಲಿ ಯಾರೂ ಪ್ರಯಾಣಿಸಲು ಇಷ್ಟಪಡುವದಿಲ್ಲ ಎಂದು ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಹೇಳಿದರು.
ಮತಕ್ಷೇತ್ರದ ಅಡವಿ ಹುಲಗಬಾಳ ಗ್ರಾಮದಲ್ಲಿ ರೂ. 1.71 ಕೋಟಿ ಮೊತ್ತದ ಸಿ.ಸಿ. ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಗ್ರಾಮಸ್ಥರು ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಈ ಮತಕ್ಷೇತ್ರದಲ್ಲಿ 25 ವರ್ಷಗಳಲ್ಲಿ ಆಗದಿರುವ ಅಭಿವೃದ್ಧಿಯ ಕಾರ್ಯಗಳನ್ನು ಕೇವಲ 4 ವರ್ಷಗಳಲ್ಲಿ ಮಾಡಿ ತೋರಿಸಿದ್ದೇನೆ. ಸುಮಾರು 3000 ಕೋಟಿ ಅನುದಾನವನ್ನು ತಂದಿದ್ದೇನೆ. ಈ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಮೂಲಸೌಕರ್ಯಗಳಾದ ನೀರು, ರಸ್ತೆ, ವಿದ್ಯುತ್, ಶಿಕ್ಷಣ ಹಾಗೂ ವಿಶೇಷವಾಗಿ ನಮ್ಮ ರೈತರನ್ನು ಆಥರ್ಿಕವಾಗಿ ಸಬಲೀಕರಿಸಲು ನೀರಾವರಿಗೆ ಆದ್ಯತೆ ಕೊಟ್ಟು ಕೆಲಸ ಮಾಡಿದ್ದೇನೆ. ಅಭಿವೃದ್ಧಿ ವಿಷಯದಲ್ಲಿ ನಾನೆಂದೂ ರಾಜಕಾರಣ ಮಾಡಿಲ್ಲ. ಕೆಲಸ ಮಾಡಿಕೊಡುವಾಗ ಅವರ ಜಾತಿ ಹಾಗೂ ಪಕ್ಷವನ್ನು ನಾನು ನೋಡುವುದಿಲ್ಲ. ಸರಕಾರದ ಅನುದಾನ ಬಿಟ್ಟು ವೈಯಕ್ತಿಕವಾಗಿ ಬಡವರ ಮದುವೆ, ವಿದ್ಯಾಭ್ಯಾಸ, ಹಬ್ಬ-ಹರಿದಿನ, ಜಾತ್ರೆಗಳು ಹೀಗೆ ಎಲ್ಲದಕ್ಕೂ ಆರ್ಥಿಕ ಸಹಾಯ ಮಾಡಿದ್ದೇನೆ. ಕೋವಿಡ್ದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ್ದೇನೆ. 25 ವರ್ಷ ಅಧಿಕಾರದಲ್ಲಿದ್ದಾಗ ಏನೂ ಮಾಡದವರೀಗ ಜನರ ಅನುಕಂಪ ಪಡೆಯಲು ಇದು ನನ್ನ ಕೊನೆಯ ಚುನಾವಣೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಅವರಿಗೆ ನೀವು ಚೆನ್ನಾಗಿ ಪಾಠ ಕಲಿಸಿ ಎಂದರು.
ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷ ದ್ಯಾಮಣ್ಣ ಹಂಚನಾಳ, ಜಿಪಂ ಮಾಜಿ ಸದಸ್ಯ ನಿಂಗಪ್ಪ ಬಪ್ಪರಗಿ, ಸೋಮನಗೌಡ ಕವಡಿಮಟ್ಟಿ, ಬಸವರಾಜ ಬೂದಿಹಾಳ, ಮುತ್ತಣ್ಣ ಹುಂಡೇಕಾರ, ಗ್ರಾಪಂ ಉಪಾಧ್ಯಕ್ಷ ಚನ್ನಪ್ಪ ಚವ್ಹಾಣ, ಗ್ರಾಪಂ ಸದಸ್ಯರಾದ ಶಾಂತು ಕಂಬಳಿ, ಕಾಂತು ಮಣೂರ, ಮಧುಕರ ಪಾಟೀಲ, ಅಮರೇಶ ಕೂಡಲಗಿ, ತಾಪಂ ಮಾಜಿ ಅಧ್ಯಕ್ಷ ರಾಜುಗೌಡ ಕೋಳೂರ, ಬಸನಗೌಡ ವಣಿಕ್ಯಾಳ ಇದ್ದರು