ಕಾಂಗ್ರೆಸ್ ಉತ್ತಮ ಆಡಳಿತ ನೀಡಿದೆ: ಮಾಜಿ ಸಂಸದ ಕುನ್ನೂರ
ಶಿಗ್ಗಾವಿ 29: ದೇಶದ ಸಂವಿಧಾನ, ಜಾತ್ಯಾತೀತತೆ ಮತ್ತು ಪ್ರಜಾಪ್ರಭುತ್ವದ ಉಳವಿಗಾಗಿ ಶ್ರಮಿಸುವ ಜತೆಗೆ ಕಾಂಗ್ರೆಸ್ ಉತ್ತಮ ಆಡಳಿತ ನೀಡಿದೆಎಂದು ಮಾಜಿಸಂಸದ ಮಂಜುನಾಥ ಕುನ್ನೂರ ಹೇಳಿದರು.
ಪಟ್ಟಣದಕಾಂಗ್ರೇಸ ನೂತನ ಕಾರ್ಯಾಲಯದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 139 ನೇ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಮಾತನಾಡಿಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಬೇರಿ ಭಾರಿಸಲಿದೆ ಹಾಗೂ ಹನುಮಾನದೇವರು ಕೇವಲ ಯಾವುದೇ ಪಕ್ಷ, ಮತಕ್ಕೆ ಸೀಮಿತವಾಗಿಲ್ಲ. ಅದುಎಲ್ಲ ವರ್ಗದಜನರ ಆರಾಧ್ಯದೈವವಾಗಿದೆ. ದೇವರುಒಂದೇ ಪಕ್ಷಕ್ಕೆ ಸೀಮಿತವಾಗಿದೆ ಎಂಬಂತೆ ಬಿಜೆಪಿಗರು ಹನುಮನ ಮಾಲೆ ಧರಿಸಿ ಅಂಜನಾದ್ರಿ ಬೆಟ್ಟಕ್ಕೆ ಹೋಗಿ ಮೋದಿ ಫೋಟೋ ಹಿಡಿದು ಪ್ರಾರ್ಥನೆ ಸಲ್ಲಿಸುತ್ತಾರೆ. ಮುಂಬರುವ ಜ.14 ರಂದು ತಾಲೂಕಾ ಕಾಂಗ್ರೆಸ್ ಸಮಿತಿಯಿಂದ ಸಂಕ್ರಮಣ ದಿವಸ ಶಿಗ್ಗಾವಿಯಿಂದ ಅಂಜನಾದ್ರಿ ಬೆಟ್ಟಕ್ಕೆ ತೆರಳಿ ಕಾಂಗ್ರೆಸ್‌ಯುವ ನಾಯಕರಾಹುಲ್‌ಗಾಂಧಿ ಭಾವಚಿತ್ರ ಹಿಡಿದುದೇಶದ ಪ್ರಧಾನಿಯಾಗಲೆಂದು ಪ್ರಾರ್ಥನೆ ಸಲ್ಲಿಸಲಾಗುವುದು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಭು ಆಜೂರ ಮಾತನಾಡಿ ಕ್ರಿಯಾತ್ಮಕ ಕಾರ್ಯ ಚಟುವಟಿಕೆಗಳ ಮೂಲಕ ಪಕ್ಷದ ಬಲ ವರ್ಧನೆಗೆ ಕೈ ಜೋಡಿಸಬೇಕು. ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿಶಿಷ್ಟ ಇತಿಹಾಸ ಇದೆ. ನಾವೆಲ್ಲರೂ ಪಕ್ಷದತತ್ವ, ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡೋಣ. ಕೆಲಸದ ಒತ್ತಡಗಳ ಮಧ್ಯೆಯೂ ಪಕ್ಷದ ಸಂಘಟನೆಗೆ ಶ್ರಮಿಸೋಣ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಗುರುನಗೌಡ ಪಾಟೀಲ ಮಾತನಾಡಿದರು. ಮಲ್ಲಿಕಾರ್ಜುನಗೌಡ ಪಾಟೀಲ, ಕಾಂಗ್ರೆಸ್ ಎಸ್.ಟಿ ಘಟಕದ ಅಧ್ಯಕ್ಷ ಅಶೋಕ ಓಲೆಕಾರ, ಪುರಸಭೆ ಮಾಜಿ ಸದಸ್ಯ ಈರಣ್ಣ ಬಡ್ಡಿ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ದೊಡ್ಡಮನಿ, ರೈತ ಮೋರ್ಚಾದ ಮಂಜುನಾಥ ಕಂಕಣವಾಡ, ಶಿವಾನಂದ ಬಾಗೂರ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು. ಮಲ್ಲಿಕಾರ್ಜುನ ಈಳಗೇರ ಕಾರ್ಯಕ್ರಮ ನಿರ್ವಹಿಸಿದರು.