ತಾಳಿಕೋಟಿ

ಕಾಂಗ್ರೆಸ್ ಅಭ್ಯರ್ಥಿ ಘೋಷಣೆಗೆ ಒತ್ತಾಯಿಸಿ ಎಂಬಿಪಿಗೆ ಮನವಿ

ಕಾಂಗ್ರೆಸ್ ಅಭ್ಯರ್ಥಿ  ಘೋಷಣೆಗೆ ಒತ್ತಾಯಿಸಿ ಎಂಬಿಪಿಗೆ ಮನವಿ

ತಾಳಿಕೋಟಿ: ದೇವರ ಹಿಪ್ಪರಗಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಹೆಸರನ್ನು ಶೀಘ್ರದಲ್ಲಿಯೇ ಘೋಷಿಸಬೇಕೆಂದು ಒತ್ತಾಯಿಸಿ ಮುಖಂಡ ಸುರೇಶ ಬಾಬುಗೌಡ ಬಿರಾದಾರ (ಪೀರಾಪೂರ) ನೇತೃತ್ವದ ನಿಯೋಗ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲರನ್ನು ಭೇಟಿ ಮಾಡಿ ಮನವಿ ಪತ್ರವನ್ನು ಸಲ್ಲಿಸಿತು.

ದೇ.ಹಿಪ್ಪರಗಿ ಮತಕ್ಷೇತ್ರದಲ್ಲಿ ಈ ಬಾರಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಎಲ್ಲಾ ರೀತಿಯ ಪೂರಕ ವಾತಾವರಣವಿದ್ದು ಟಿಕೆಟ್ಗಾಗಿ 10 ಜನ ಆಕಾಂಕ್ಷಿಗಳು ಅರ್ಜಿ  ಸಲ್ಲಿಸಿದ್ದಾರೆ ಇವರಲ್ಲಿ ಯಾರು ಸಮರ್ಥರು ಎಂಬುದಕ್ಕೆ ಪಕ್ಷದ ವತಿಯಿಂದ ಸಮೀಕ್ಷೆಗಳು ನಡೆದಿವೆ ಅದರ ಆಧಾರದಲ್ಲಿ ಅಭ್ಯರ್ಥಿಯ ಹೆಸರನ್ನು ಅಖೈರುಗೊಳಿಸಿ ಬೇಗ ಘೋಷಿಸಬೇಕು, ಕಳೆದ ಬಾರಿ ವಿಳಂಬ ಘೋಷಣೆಯಿಂದಾಗಿಯೇ ಅಭ್ಯರ್ಥಿ ಸೋಲಬೇಕಾಯಿತು, ಅದು ಈ ಬಾರಿ ಮರುಕಳಿಸಬಾರದು.

ಚುನಾವಣೆಗೆ ಕೇವಲ ಎರಡು ತಿಂಗಳುಗಳು ಉಳಿದಿದ್ದರೂ ಇಲ್ಲಿಯವರೆಗೆ ಅಭ್ಯರ್ಥಿಯ ಘೋಷಣೆ ಆಗದೇ ಇರುವದರಿಂದ ಕಾರ್ಯಕರ್ತರು ಗೊಂದಲಕ್ಕೀಡಾಗುವುದರ ಜೊತೆಗೆ ಉತ್ಸಾಹವನ್ನೂ ಕಳೆದುಕೊಳ್ಳುತ್ತಿದ್ದಾರೆ. ಇನ್ನೂ ಬೇರೆ ಪಕ್ಷಗಳಿಂದ ಸಾಕಷ್ಟು ಜನರು ಪಕ್ಷಕ್ಕೆ ಬರಲು ಉತ್ಸುಕರಾಗಿದ್ದು ಅಭ್ಯರ್ಥಿಯ ಹೆಸರು ಘೋಷಿಸಬೇಕೆಂದು ನಿರೀಕ್ಷಿಸುತ್ತಿದ್ದಾರೆ.

ಈ ತಿಂಗಳ ಅಂತ್ಯದಲ್ಲಿ ಪ್ರಜಾಧ್ವನಿ ಯಾತ್ರೆಯು ಕ್ಷೇತ್ರಕ್ಕೆ ಪ್ರವೇಶಿಸುತ್ತಿದ್ದು ಅದಕ್ಕಿಂತ ಮೊದಲೇ ಪಕ್ಷದ ಅಭ್ಯರ್ಥಿಯ ಘೋಷಣೆಯಾದರೆ ಇದು ಎಲ್ಲಾ ದೃಷ್ಠಿಯಿಂದಲೂ ಉತ್ತಮ ಬೆಳವಣಿಗೆಯಾಗುತ್ತದೆ. ಇಲ್ಲದಿದ್ದಲ್ಲಿ ಇದು ಇನ್ನಷ್ಟೂ ಸಮಸ್ಯೆಗಳಿಗೆ ಕಾರಣವಾಗುತ್ತದೆ. ವರಿಷ್ಠರು ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯ ಇದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಈ ಸಮಯದಲ್ಲಿ ಕೆಪಿಸಿಸಿ ಮಾಜಿ ಸದಸ್ಯ ಸುರೇಶ ಬಾಬುಗೌಡ ಬಿರಾದಾರ, ಶಂಕರಗೌಡ ಸಿದ್ದಾಗೋಳ, ಜಯಪ್ರಕಾಶ ಬಿರಾದಾರ, ಗಜಬೀರಸಾ ಮುಲ್ಲಾ, ಬಾಬುಗೌಡ ಲಕ್ಕುಂಡಿ, ಎಚ್.ಬಿ. ಬಿರಾದಾರ, ಬಾಲು ಅಸ್ಕಿ, ಬಿ.ಜಿ. ಬಿರಾದಾರ (ಬೆಕಿನಾಳ), ಪ್ರಭುಗೌಡ ಬಿರಾದಾರ, ಶ್ರೀಕಾಂತಗೌಡ ಪಾಟೀಲ, ಶಿವನಗೌಡ ಬಿರಾದಾರ, ಶೇಕಣ್ಣ ಆಲ್ಯಾಳ, ಮಲ್ಲನಗೌಡ ಆನೇಸೂರ ಹಾಗೂ ಬಸನಗೌಡ ಬಿರಾದಾರ ಇದ್ದರು 

ಸುದ್ದಿ ಓದಿ