ಹಗರಿಬೊಮ್ಮನಹಳ್ಳಿ

ಕಂದಾಯ ಗ್ರಾಮಗಳ ರೂವಾರಿ ಕಾಂಗ್ರೆಸ್ : ಶಾಸಕ ಎಸ್.ಭೀಮಾನಾಯ್ಕ್

ಕಂದಾಯ ಗ್ರಾಮಗಳ ರೂವಾರಿ ಕಾಂಗ್ರೆಸ್ : ಶಾಸಕ ಎಸ್.ಭೀಮಾನಾಯ್ಕ್

ಫಲಾನುಭವಿಗಳಿಗೆ ಪಟ್ಟ ವಿತರಣೆ ಸಂತಸ ತಂದಿದೆ ಆದರೆ ಚುನಾವಣೆ ಹೊಸ್ತಿಲಲ್ಲಿ ವಿತರಣೆ ಎಷ್ಟರ ಮಟ್ಟಿಗೆ ಸರಿ 

ಲೋಕದರ್ಶನ ವರದಿ

ಹಗರಿಬೊಮ್ಮನಹಳ್ಳಿ.ಮಾ.28: ಕಂದಾಯ ಗ್ರಾಮಗಳಾಗಿ ಅಲ್ಲಿ ವಾಸಿಸುವವರ  ಕಲ್ಯಾಣಕ್ಕಾಗಿ ಮತ್ತು ಅವರಿಗೆ ನಿವೇಶನದ ಹಕ್ಕು ಪತ್ರಗಳು ನೀಡಬೇಕು ಎಂಬ ನಿರ್ಧಾರ ಇಂದು ಸಾಕಾರಗೊಳ್ಳುವಿಕೆಯಲ್ಲಿ ಕಾಂಗ್ರೇಸ್ ಪ್ರಮುಖ ಪಾತ್ರ ವಹಿಸಿದೆ ಎಂದು ಶಾಸಕ ಎಸ್.ಭೀಮಾನಾಯ್ಕ್ ಹೇಳಿದರು.

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕಾಡಳಿತ ಆಯೋಜಿಸಿದ ಹಗರಿಬೊಮ್ಮನಹಳ್ಳಿ ತಾಲೂಕು ಹೊಸ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ 94ಡಿ ಅಡಿಯಲ್ಲಿ ನಿವೇಶನ ಹಂಚಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಖಂಡ ಬಳ್ಳಾರಿ ಜಿಲ್ಲೆಯ 10 ವಿಧಾನ ಸಭಾ ಕ್ಷೆತ್ರಗಳಿಗೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು 94ಸಿ ಅಡಿಯಲ್ಲಿ 6ರಿಂದ 8 ಸಾವಿರ ಫಲಾನುಭವಿಗಳಿಗೆ ಪಟ್ಟಗಳನ್ನು ನೀಡಿದ್ದಾರೆ.ಪ್ರಸ್ತುತ ಬಿಜೆಪಿ ಸರಕಾರ ಕಳೆದ ಎರಡ್ಮೂರು ವರ್ಷಗಳ ಹಿಂದೆಯೇ ನೀಡಬೇಕಿದ್ದ ಪಟ್ಟಗಳನ್ನು ಚುನಾವಣಾ ಹೊಸ್ತಿಲಲ್ಲಿ ನೀಡಿದ್ದಾರೆ, ನೀತಿ ಸಂಹಿತೆ ಜಾರಿಯಾಗುವ ಮುನ್ನಾ ಪಟ್ಟಾ ವಿತರಣೆ ಮಾಡಿ ಅದರಲ್ಲಿ ಸಂಬಂಧವಿರದವರ ಭಾವಚಿತ್ರಗಳನ್ನು ಹಾಕಿದ್ದು ಸಮಂಜಸವಲ್ಲ. ಮತದಾರರಿಗೆ ಬೂದಿ ಎರಚುವ ಕೆಲಸ ಬಿಜೆಪಿ ಪಕ್ಷ ಮಾಡುತ್ತಿದೆ, ಜನಪರ ಕೆಲಸಗಳು ಕಾಂಗ್ರೇಸ್ ಪಕ್ಷದಿಂದ ಆಗಿ ವರ್ಷಗಳೇ ಕಳೆದು ಹೋಗಿವೆ ಜನರನ್ನು ಬೆರೆಡೆ ಗಮನ ಸೆಳೆಯಲು ಈ ತಂತ್ರಗಳನ್ನು ಬಳಸಲಾಗುತ್ತಿದೆ ಈ ಕಂದಾಯ ಗ್ರಾಮಗಳನ್ನು ಕಾಂಗ್ರೇಸ್ ಪಕ್ಷ ಅಧಿಕಾರ ಅವಧಿಯ್ಲಿಯೇ ಅಗಿವೆ ಎಂದು ತಿಳಿಸಲಿಕ್ಕೆಯೇ ಕಾರ್ಯಕ್ರಮಕ್ಕೆ ಬಂದಿದ್ದೆನೆ, ಪಟ್ಟದಲ್ಲಿ ಬಿಜೆಪಿ ಮುಖಂಡರ ಭಾವಚಿತ್ರ ನೋಡಿ ಕಾರ್ಯಕ್ರಮಕ್ಕೆ ಬರಬಾರದೆಂಬ ನಿರ್ಧಾರ ಕೈಗೊಂಡಿದ್ದೆ ಆದರೆ ಸತ್ಯ ಎಲ್ಲರಿಗೆ ತಿಳಿಸುವುದಕ್ಕಾಗಿಯೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆನೆ ಈ ಪಟ್ಟ ವಿತರಣೆಯ ಸಮಿತಿ ಅಧ್ಯಕ್ಷರನ್ನಾಗಿ ಶಾಸಕರನ್ನು ಮಾಡಿದ್ದು ಸದ್ಯ ಸಹಕಾರಿಯಾಗಿದೆ ಎಂದರು.

ಪುರಸಭೆ ಸದಸ್ಯ ಮರಿ ರಾಮಪ್ಪ, ಪವಾಡಿ ಹನುಮಂತಪ್ಪ, ತಹಸಿಲ್ದಾರ್ ಚಂದ್ರಶೇಖರ್ ಎಸ್ ಗಾಳೆ ಸೆರಿದಂತೆ ತಾಲೂಕು ಕಛೇರಿ ಸಇಬ್ಬಂದಿ ಉಪಸ್ಥಿತರಿದ್ದರು. ಯಂಕಾರೆಡ್ಡಿ ನಿರ್ವಸಿದರು 

ಸುದ್ದಿ ಓದಿ