ನಿವೃತ ಶಿಕ್ಷಕ ಅಶೋಕ ಬಡಿಗೇರ ಅವರಿಗೆ ಅಭಿನಂದನಾ ಕಾರ್ಯಕ್ರಮ
ಆಲಮೇಲ 20 : ಯಾವುದೇ ವೃತ್ತಿಯಾಗಲಿ ಗೌರವ ಭಾವನೆಯಿಂದ ಪ್ರಾಮಾಣಿಕವಾಗಿ ಸೇವೆ ಗೈದರೆ ಅವರನ್ನು ಸಮಾಜ ಗುರ್ತಿಸಿ ಅಭಿನಂದಿಸುತ್ತೆ ಎಂದು ನಿವೃತ್ತ ಶಿಕ್ಷಕರ, ಚಿಂತಕ ಶಿವಶರಣ ಗುಗ್ಗರಿ ಹೇಳಿದರು. ಅವರು ಆಲಮೇಲದ ಕಾಳಿಕಾ ದೇವಿ ದೇವಸ್ಥಾನದಲಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಹಮ್ಮಿಕೊಂಡಿದ ನಿವೃತ್ತ ಶಿಕ್ಷಕ ಅಶೋಕ ಬಾಡಿಗೇರ ಅವರಿಗೆ ಗೌರವಭಿನಂದನಾ ಕಾರ್ಯಕ್ರಮದಲಿ ಪಾಲ್ಗೊಂಡು ಮಾತನಾಡಿದರು. ಪ್ರಾಮಾಣಿಕ ಸೇವೆಯನು ಗುರ್ತಿಸಿ ಗೌರವಿಸಿರುವ ಸಮಾಜದ ಬೆಳವಣಿಗೆ ಶ್ರಮಿಸಬೇಕು ಹಾಗೆ ನಿವೃತ್ತಿ ಜೀವನ ಅವಧಿಯನ್ನು ಸಮಾಜ ಸೇವೆಗೆ ಬಳಸಿಕೊಲಬೇಕು ಎಂದು ಹೇಳಿದರು. ಅಲಮೇಲ, ಸಿಂದಗಿ ಮೂರುಜಾವದ ಮಠ ರಾಮಚಂದ್ರ ಮಹಾಸ್ವಾಮಿಗಳು, ವಿರಕ್ತ ಮಠ ಜಗದೇವ ಮಲ್ಲಿಬೋಮ್ಮಯ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದರು. ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಗೌರವಾದ್ಯಕ್ಷರು ಸದಾನಂದ ಅಕ್ಕಲಕೋಟ ಉದ್ಘಾಟಿಸಿದರು.
ಪತ್ತಾರ ಅಧ್ಯಕ್ಷತೆ ವಹಿಸಿದರು. ಕ. ಸಾ. ಪ. ಅಧ್ಯಕ್ಷ ಶಿವಶರಣ ಗುಂದಗಿ. ಪ್ರಾಚಾರ್ಯರು ರಮೇಶ ಬಿರಾದಾರ, ಸಾಹಿತಿ ಡಾ.ರಮೇಶ. ಕತ್ತಿ, ಶಿಕ್ಷಕರ ಂ.ಏ.ಕಲ್ಲೂರಮಠ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷ ಅವಧೂತ ಬಂಡಗಾರ, ಸಮಾಜದ ಹಿರಿಯ ಮುಖ್ಯಡಾರದ ಈರಣ್ಣ. ಪತ್ತಾರ, ಲಚಪ್ ಪತ್ತಾರ,ದೇವಪ್ಪ ಪತ್ತಾರ ಮುಂತಾದವರು ಇದ್ದರು. ವೇತಾಳ ಜೋಷಿ ಅವರ ಕಾಲ ತಂಡ ದಿಂದ ಸಂಗೀತ ಕಾರ್ಯಕ್ರಮ ಜರುಗಿತು. ಶಿಕ್ಷಕಿ ಋತು ಅಕ್ಕಲಕೋಟ ಸ್ವಾಗತಿಸಿದರು, ಉಪನ್ಯಾಸಕ ಗಂಗಾಧರ ಪತ್ತಾರ ನಿರೂಪಿಸಿ ವಂದಿಸಿದರು. ಆಲಮೇಲ: ನಿವೃತ್ತ ಶಿಕ್ಷಕ ಅಶೋಕ್ ಬಾಡಿಗೆ ವಿಶ್ವಕರ್ಮ ಸಮಾಜದಿಂದ ಗೌರವಿಸಿ ಅಭಿನಂದಿಸಿದರು.