ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಅಭಿನಂದನೆ
ಲೋಕದರ್ಶನ ವರದಿ
ಶಿಗ್ಗಾವಿ 01: ಹಾವೇರಿಯಲ್ಲಿ ನಡೆದ ಜಿಲ್ಲಾಮಟ್ಟದ 2022-23ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಎಸ್ ಬಿ ಬಿ ಎಂ ಡಿ ಸಂಯುಕ್ತ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಒಟ್ಟು 17 ವಿದ್ಯಾರ್ಥಿಗಳು ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ವಿಜೇತರಾಗಿ ಆಯ್ಕೆಯಾದ ವಿದ್ಯಾರ್ಥಿಗಳು : ಆದಿತ್ಯ ಶಡಗರವಳ್ಳಿ 400 ಮೀಟರ್ಓಟ, ಮಂಜುನಾಥ ಬೆಂಡಿಗೇರಿ 200 ಮೀಟರ್ಓಟ, ಕೃಷ್ಣಪ್ಪ ನಡುವಿನಮನಿ ಜಾವಲಿನ್ ಎಸೆತ, ಚಂದ್ರಕಾಂತ್ ಕುಂದಗೋಳ 5000 ಮೀಟರ್ಓಟ, ಜ್ಯೋತಿ ಪ್ರಕಾಶ್ ದೊಡ್ಡಮನಿ, ಚಮನ್ ಸಾಬ್ ನದಾಫ್, ಮಂಜುನಾಥ ಹುಳುಕಯಲ್ಲಪ್ಪನವರ್, ಅನಿಲ್ ಜಟ್ಟೆಪ್ಪನವರ್ ಇವರು 4್ಠ400 ಮೀಟರ್ ರೀಲೆಯಲ್ಲಿ, ಮತ್ತು ಸುನಿಲ್ ದೇವಪ್ಪನವರ್, ಗುರುಪಾದೇಶ್ ಬಾಳೆಕಾಯಿ, ಆಕಾಶ ಲಮಾಣಿ, ಮನೋಜ್ರಾಧಾಯಿ ಇವರು ಬಾಸ್ಕೆಟ್ ಬಾಲ್ ನಲ್ಲಿ, ಜಾಫರ್ ನದಾಫ್ 4*100 ಮೀಟರ್ರಿಲೇ, ಸಂಜು ಸಂಕ್ಲಿಪುರ್- ಖೋಖೋ, ಫಕ್ರುದ್ದೀನ್ ಮತ್ತು ಮಂಜುನಾಥ ಬೆಂಡಿಗೇರಿಕಬ್ಬಡ್ಡಿಯಲ್ಲಿ, ಕುಮಾರಿಜ್ಯೋತಿ ನಡಟ್ಟಿ ಗುಂಡಿಸೆತದಲ್ಲಿ ವಿಜೇತರಾಗಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವಿಜೇತರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು ಉಪಪ್ರಾಚಾರ್ಯರು ಮತ್ತು ಸರ್ವ ಸಿಬ್ಬಂದಿಯವರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.