ಕುಷ್ಟಗಿ

ಗಾಣಿಗ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆ ಸರಕಾರಕ್ಕೆ ಅಭಿನಂದನೆ: ಅಧ್ಯಕ್ಷ ಪಾಟೀಲ್

ಗಾಣಿಗ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆ ಸರಕಾರಕ್ಕೆ ಅಭಿನಂದನೆ: ಅಧ್ಯಕ್ಷ ಪಾಟೀಲ್

ಕುಷ್ಟಗಿ 26: ಗಾಣಿಗ ಸಮಾಜ ತೀರಾ ಹಿಂದುಳಿದ ಸಮಾಜ, ಸರ್ಕಾರ ಈ ಸಮಾಜವನ್ನು ಗುರುತಿಸಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು ಹರ್ಷ ಉಂಟು ಮಾಡಿದೆ ಎಂದು ಗಾಣಿಗ ಸಮಾಜದ ತಾಲೂಕು ಅಧ್ಯಕ್ಷ ಸಂಗನಗೌಡ ಪಾಟೀಲ್ ಹೇಳಿದರು. 

ಗಾಣಿಗ ಸಮಾಜದ ವತಿಯಿಂದ ರವಿವಾರ ಸಂಜೆ ಇಲ್ಲಿನ ಬಸವ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರಕಾರ ಗಾಣಿಗ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶ ನೀಡಿದ್ದಾರೆ ಅವರ ಕಾರ್ಯ ಸ್ಲಾಘನೀಯ ಎಂದು ಗಾಣಿಗ ಸಮಾಜದ ಹಿರಿಯ ಮುಖಂಡ ಅಮರೇಗೌಡ ಪಾಟೀಲ್ ಹೇಳಿದರು. 

ಬೊಮ್ಮಾಯಿ ಸರಕಾರದಿಂದ ಗಾಣಿಗ ಸಮಾಜಕ್ಕೆ ಅಲ್ಪ ತೃಪ್ತಿ ತಂದಿದೆ. 

ಗಾಣಿಗ ನಿಗಮ ಸ್ಥಾಪಿಸಲು ಹಲವಾರು ಹೋರಾಟಕ್ಕೆ ಕೈ ಜೋಡಿಸಿದ ಲಕ್ಷ್ಮಣ ಸವದಿ, ಆನಂದ ನ್ಯಾಮಗೌಡ,  ಎಸ್.ಕೆ ಬೆಳ್ಳುಬ್ಬಿ, ಸಿದ್ದು ನ್ಯಾಮೇಗೌಡ, ದಿನಕರ್ ಶೆಟ್ಟಿ  

ಸೇರಿದಂತೆ ಅನೇಕ ನಾಯಕರು ಗಾಣಿಗ ನಿಗಮ ಸ್ಥಾಪನೆಗೆ ಹೋರಾಟ ಮಾಡಿದ್ದಾರೆ. 

ಸರಕಾರ 100 ಕೋಟಿ ಅನುದಾನ ಬಿಡುಗಡೆ ಮಾಡಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. 

ಮುಂದಿನ ದಿನಮಾನಗಳಲ್ಲಿ ಸುಮಾರು 250 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲು ಸರಕಾರಕ್ಕೆ ಒತ್ತಾಯಿಸಲಾಗುತ್ತದೆ ಎಂದು ಬಸವರಾಜ ಮಲಕಾಪೂರ ಹೇಳಿದರು. 

ಗಾಣಿಗ ಸಮಾಜ ತೀರಾ ಹಿಂದುಳಿದ ಸಮಾಜ ಹೆಸರಿಗೆ ಮಾತ್ರ ಸರ್ಕಾರ ಗಾಣಿಗ ಅಭಿವೃದ್ಧಿ ಸ್ಥಾಪನೆ ಮಾಡಿದರೆ ಸಾಲದು ಸಮಾಜಕ್ಕೆ ಮುಂದಿನ ದಿನಮಾನಗಳಲ್ಲಿ ಇನ್ನಷ್ಟು ಅನುದಾನ ಬಿಡುಗಡೆ ಗೊಳಿಸಿ ಸಮಾಜದ ಏಳಿಗೆ ಶ್ರಮವಹಿಸಲು  ಒತ್ತಾಯಿಸಲಾಗುತ್ತದೆ ಎಂದು ಹೇಳಿದರು. 

ಮಹಾಂತೇಶ ಬದಾಮಿ, ಶಂಕರಗೌಡ ಜಾಲಿಹಾಳ, ಬಸವಂತಪ್ಪ ಕಂಪ್ಲಿ ಹಾಗೂ ಗಾಣಿಗ ಸಮಾಜ ಮುಖಂಡರು ಉಪಸ್ಥಿತರಿದ್ದರು. 

ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಹಾಗೂ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರನ್ನ ು ಸಮಾಜದಿಂದ ಸನ್ಮಾನಿಸಿ ಗೌರವಿಸಿದರು 

ಸುದ್ದಿ ಓದಿ